ನೇಪಾಳ ಪ್ರಧಾನಿ ಓಲಿ ”ನೈಜ ಅಯೋಧ್ಯೆಯು ನೇಪಾಳದಲ್ಲಿದೆ” ಅನ್ನೋ ಹೇಳಿಕೆ ನೀಡಿದ ಬಳಿಕ ಹಿಂದೂ ಸಂತರು, ಮುಖಂಡರು ಮಾತ್ರವಲ್ಲದೆ ಮುಸ್ಲಿಮರ ನಾಯಕರೂ ಆ ಹೇಳಿಕೆಯ ವಿರುದ್ಧ ಮಾತನಾಡಿದ್ದಾರೆ.
ಭಾರತೀಯ ಮುಸ್ಲಿಂ ಮುಖಂಡ ಫಿರ್ಯಾದಿ ಇಕ್ಬಾಲ್ ಅನ್ಸಾರಿ “ಈ ವಿಷಯದ ಬಗ್ಗೆ ಹನುಮಂತ ದೇವರು ಕೋಪಗೊಂಡರೆ, ಅವನು ಇಡೀಯ ನೇಪಾಳವನ್ನು ತನ್ನ ಒಂದು ಹೊಡೆತದಿಂದ ನಾಶಪಡಿಸುತ್ತಾನೆ” ಎಂದು ಹೇಳಿದರು.
“ಬಹುಶಃ ನೇಪಾಳ ಪ್ರಧಾನಮಂತ್ರಿಗೆ ಭಾರತದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಅಯೋಧ್ಯೆಯ ಮಹತ್ವದ ಬಗ್ಗೆ ತಿಳಿದಿಲ್ಲ. ಅವರು ಅಯೋಧ್ಯೆಗೆ ಬಂದರೆ, ಅದರ ಮಹತ್ವವನ್ನು ಅವರು ಅರಿತುಕೊಳ್ಳುತ್ತಾರೆ” ಎಂದು ಅವರು ಹೇಳಿದರು.
ಮುಸ್ಲಿಂ ಧರ್ಮಗುರು ಮೌಲಾನಾ ಸೈಫ್ ಅಬ್ಬಾಸ್ ಕೂಡ ಓಲಿ ನೀಡಿದ ಹೇಳಿಕೆಯನ್ನು ಖಂಡಿಸಿದರು. “ಇದು ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ” ಎಂದು ಹೇಳಿದರು.
“ಓಲಿ ತನ್ನನ್ನು ಇತರರ ಕೈಯಲ್ಲಿ ಕೈಗೊಂಬೆಯಾಗಲು ಅನುಮತಿಸಬಾರದು” ಎಂದು ಅವರು ಹೇಳಿದರು.
“ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿ ಚೀನಾ ಮತ್ತು ಪಾಕಿಸ್ತಾನದ ಆದೇಶದ ಮೇರೆಗೆ ನೇಪಾಳ ಪ್ರಧಾನಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಓಲಿ ಕೂಡಲೇ ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಮೌಲಾನಾ ಒತ್ತಾಯಿಸಿದರು
ಓಲಿ ಹೇಳಿಕೆಯನ್ನು ಖಂಡಿಸಿದ ವಿಶ್ವ ಹಿಂದೂ ಪರಿಷತ್
ನಿನ್ನೆಯಷ್ಟೇ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೇಪಾಳ ಪ್ರಧಾನಿಯವರ ಅಯೋಧ್ಯೆಯ ಕುರಿತಾದ ಹೇಳಿಕೆಯನ್ನು ವಿರೋಧಿಸಿ, “ಜಗತ್ತಿನಲ್ಲಿ ಕೇವಲ ಒಂದು ಅಯೋಧ್ಯೆ ಇದೆ ಮತ್ತು ಅದು ಭಾರತದಲ್ಲಿದೆ” ಎಂದು ಹೇಳಿದರು.
ವಿಎಚ್ಪಿಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ “ಅಯೋಧ್ಯೆಯು ಭಗವಾನ್ ಶ್ರೀ ರಾಮನ ಏಕೈಕ ಜನ್ಮಸ್ಥಳ. ಶ್ರೀ ರಾಮನು, ಬರಾತ್ ದಂದು ಪ್ರತಿ ವರ್ಷ ಅಯೋಧ್ಯೆಯಿಂದ ಜನಕಪುರಕ್ಕೆ ಹೋಗುತ್ತಾರೆ. ಈ ವಿಷಯದ ಬಗ್ಗೆ ಜನರ ದಾರಿ ತಪ್ಪಿಸುವುದು ಅಸಾಧ್ಯ” ಎಂದರು.