ಹಲಗಲಿಯ ಬೇಡರು

1
398
Tap to know MORE!

1857 ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ಭಾರತೀಯರ ಮೇಲೆ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸುತ್ತಾರೆ.
ಅದರಲ್ಲಿ ನಿಶಸ್ತ್ರೀಕರಣವು ಒಂದು. ಇದರ ವಿರುದ್ಧ ಹಲವಾರು ದಂಗೆಗಳು ಎದ್ದವು. ಇವುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿಯು ಒಂದು.

ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತದ ಚುಕ್ಕಾಣಿ ಹಿಡಿದು, ಭಾರತೀಯರು ಯಾವುದೇ ರೀತಿಯ ಆಯುಧಗಳನ್ನು ಕಂಪೆನಿ ಸರ್ಕಾರದ ಅನುಮತಿ ಇಲ್ಲದೆ ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ ಎಂಬ ಕಾಯ್ದೆಯನ್ನು ಜಾರಿಗೊಳಿಸುತ್ತಾರೆ. ಇದರಿಂದಾಗಿ ಶಸ್ತ್ರಾಸ್ತ್ರಗಳನ್ನು ತಮ್ಮ ಆಭರಣದಂತೆ ಎಂದು ತಿಳಿದಿದ್ದ ಹಲಗಲಿಯ ಬೇಡರು ಇದನ್ನು ಪ್ರತಿರೋದಿಸಿ “ರಾಮ,ಬಾಲ,ಹನುಮ ಮತ್ತು ಜಡಗ ” ಮುಂತಾದವರ ತಂಡವೊಂದು ಊರಿನ ಮಧ್ಯದಲ್ಲಿ ಸೇರಿ ಪ್ರತಿಜ್ಞೆ ಮಾಡಿ ದಂಗೆ ಎದ್ದರು. ಇಷ್ಟಾದರೂ ಸುಮ್ಮನಾಗದ ಬ್ರಿಟಿಷರು ಬಲವಂತವಾಗಿ ಆಯುಧ ಕಸಿಯಲು ಸೈನ್ಯವನ್ನು ಕಳುಹಿಸುತ್ತಾರೆ. ಇದರಿಂದ ಕೋಪಗೊಂಡ ಯುವಕನೊಬ್ಬ ಬಂದ ಅಧಿಕಾರಿಯ ಕೆನ್ನೆಗೆ ಹೊಡೆಯುತ್ತಾನೆ. ಈ ವಿಷಯ ಬರಸಿಡಿಲಿನಂತೆ ಸೆನೆಟ್ ಎಂಬ ಬ್ರಿಟಿಷ್ ಅಧಿಕಾರಿಗೆ ತಿಳಿಯುತ್ತದೆ. ಅವನು ತನ್ನ ದೊಡ್ಡ ಸೇನೆಯನ್ನು ಕಳುಹಿಸುತ್ತಾನೆ. ಸೇನೆ ಬರುತ್ತಿರುವ ಸುದ್ದಿ ತಿಳಿದ ಬೇಡರು ಊರಿನ ದ್ವಾರದ ಬಾಗಿಲಿನ ಒಳಗಿನಿಂದ ‌ಗುಂಡಿನ ಮಳೆಗೈದರು. ಇದರಿಂದ ತತ್ತರಿಸಿದ ಬ್ರಿಟೀಷ್ ಸೇನೆಯು ಮೇಲಾಧಿಕಾರಿಗಳಿಗೆ ಪತ್ರ ಬರೆದು ದೊಡ್ಡದೊಂದು ಸೈನ್ಯವನ್ನು ತರಿಸಿ ಹಲಗಲಿಯ ಒಳಗೆ ನುಗ್ಗುತ್ತಾರೆ. ಸಿಕ್ಕ ಸಿಕ್ಕವರನ್ನು ಕಡಿದು, ಗುಂಪು ಗುಂಪಾಗಿ ಮಾಡಿ ಗುಂಡು ಹಾರಿಸಿ ಊರನ್ನು ದೋಚಿ ಸಂಧಾನದ ನಾಟಕವಾಡುತ್ತಾರೆ .ಇದರಿಂದ ಕೋಪಗೊಂಡ “ಹನುಮ ,ಬಾಲ ,ಜಡಗ ಮತ್ತು ರಾಮ ಮುಂತಾದವರು ಸೇರಿ “ಹಬಲಕ್” ಎಂಬ ಅಧಿಕಾರಿಯನ್ನು ಕೊಂದರು. ಬಳಿಕ ಇದೊಂದು ದೊಡ್ಡ ಯುದ್ಧಕ್ಕೆ ಕಾರಣವಾಗುತ್ತದೆ .ಬೇಡರ ಸಣ್ಣ ಗುಂಪೊಂದು ಬ್ರಿಟಿಷರ ದೊಡ್ಡ ಸೈನ್ಯದೊಡನೆ ಕಾದಾಡುತ್ತದೆ ಮತ್ತು ಸಾವಿರಾರು ಜನ ಬ್ರಿಟಿಷರನ್ನು ಕೊಲ್ಲುತ್ತಾರೆ. ಆ‍ದರೆ ಅವರ ಸೈನ್ಯದ ಬಲದ ಎದುರು ಬೇಡರು ಸೋಲುತ್ತಾರೆ. ನಂತರ ಬ್ರಿಟೀಷರು ಹಲಗಲಿಯನ್ನು ಲೂಟಿ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕುತ್ತಾರೆ. ಹೀಗೆ ತಮ್ಮ ಪರಂಪರೆಯ ಸ್ವಾಭಿಮಾನದ ಸಂಕೇತವಾಗಿದ್ದ ಆಯುದ್ಧಕಾಗಿ ಅಸಂಖ್ಯಾತ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ ಹಲಗಲಿಯ ಬೇಡರ ಸಾಹಸವನ್ನು ಜನರು ಇಂದಿಗೂ ಲಾವಣಿಗಳ ಮೂಲಕ ನೆನಪಿಸಿಕೊಳ್ಳುತ್ತಾರೆ.

1 COMMENT

LEAVE A REPLY

Please enter your comment!
Please enter your name here