ಹಳೆಯಂಗಡಿಯಲ್ಲೊಂದು ಯಶಸ್ವಿ ಪ್ರಯೋಗ – ಕೊರೋನಾ ಛಾಯೆಯಲ್ಲಿ ಡಿಜಿಟಲ್ ಯೋಗ

1
198
Tap to know MORE!

ವಿಶ್ವಕ್ಕೆ ಭಾರತ ಕೊಟ್ಟ ಮಹಾ ಕೊಡುಗೆಗಳಲ್ಲಿ ಒಂದು “ಯೋಗ”. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನುಷ್ಯನ  ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯವಾಗಿ, ಶಾಂತಿ, ಸಮಾಧಾನ ಮತ್ತು ನೆಮ್ಮದಿಯಿಂದ ಇರುವಂತಾದರೆ ಒಂದು ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಬಲವಾಗಿರುತ್ತದೆ ಮತ್ತು ದೃಢವಾಗಿರುತ್ತದೆ. ಯೋಗದಿಂದ ಒಂದು ಮನ ಬೆಳಗಿ, ಒಂದು ಮನೆ ಬೆಳಗುವಂತಾಗಿ, ಎಲ್ಲರೂ ಪರಿಪೂರ್ಣ ಆರೋಗ್ಯದಿಂದ, ಶಾಂತಿ, ಸಹಬಾಳ್ವೆಯಿಂದ ಬಾಳುವಂತಾಗುತ್ತದೆ. ಯೋಗದ ಮೂಲಕ ಆರೋಗ್ಯ ರಕ್ಷಣೆಯ ಜವಾಬ್ದಾರಿ ಎಲ್ಲರಲ್ಲೂ ಮೂಡಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗ ಮಾಡುವುದರ ಪ್ರಯೋಜನವನ್ನು ಯೋಗ ಶಿಕ್ಷಕರಾದ ಶ್ರೀ ಯಾದವ ದೇವಾಡಿಗ ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಹಾಗೂ ಇದರ ಜಂಟಿ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ – “ಕೊರೋನಾ ಛಾಯೆಯಲ್ಲಿ ಡಿಜಿಟಲ್ ಯೋಗ” – ಆನ್ಲೈನ್ ಮಾಹಿತಿ ಶಿಬಿರ ಮತ್ತು ಕಾರ್ಯಾಗಾರ ನಡೆಯಿತು.

ಕೊರೋನಾ ಸೋಂಕಿನ ಭೀತಿಯಿಂದ ಇಂದು ಇಡೀ ವಿಶ್ವವೇ “ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ” ಎಂದು ಮುನ್ನೆಚ್ಚರಿಕೆಯ ಮಂತ್ರ ಪಠಿಸುತ್ತಿದೆ. ಆದ್ದರಿಂದ ಈ ಬಾರಿಯ ವಿಶ್ವ ಯೋಗ ದಿನದ ಘೋಷ ವಾಕ್ಯವೂ “ಮನೆಯಲ್ಲಿ ಯೋಗ – ಕುಟುಂಬದೊಂದಿಗೆ ಯೋಗ” ಎಂಬುದಾಗಿತ್ತು.

ಕಾರ್ಯಾಗಾರದ ಉದ್ಘಾಟನೆಯ ಬಳಿಕ, ಯೋಗ ದಿನಾಚರಣೆಯ ಮಹತ್ವ ಮತ್ತು ಯೋಗ ಅಭ್ಯಾಸ ಮಾಡುವುದರ ಪ್ರಯೋಜನಗಳ ಬಗ್ಗೆ ತಿಳಿಸಲಾಯಿತು. ನಂತರ ಮನೆಯಲ್ಲೇ ಇದ್ದು ಸುಲಭ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡುವ ಬಗ್ಗೆ ಕೆಲವೊಂದು ಯೋಗದ ಆಸನಗಳನ್ನು ಮಾಡಿ ತೋರಿಸಲಾಯಿತು.

ಕೊರೋನಾ ಭೀತಿಯಿಂದ ಜಾರಿಯಲ್ಲಿರುವ ಸಾಮಾಜಿಕ ಅಂತರದ ನಿಯಮಗಳಿಂದಾಗಿ ಎಲ್ಲರನ್ನೂ ಸಭಾಂಗಣಕ್ಕೆ ಆಹ್ವಾನಿಸಲಾಗಲಿಲ್ಲ. ಹಾಗಾಗಿ ಮಂಡಲದ ಸಭಾಂಗಣದಲ್ಲಿ ಕೆಲ ವರ್ಷಗಳಿಂದ ನಿರಂತರ ಯೋಗ ಅಭ್ಯಾಸ ಮಾಡುವ ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಿ, ಉಳಿದ ಎಲ್ಲಾ ಯೋಗ ಆಸಕ್ತರಿಗೆ ಮತ್ತು ಜಂಟಿ ಸಂಸ್ಥೆಯ ಪದಾಧಿಕಾರಿಗಳಿಗೆ, ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ “ವೆಬ್ಯಾಕ್ಸ್ ಆನ್ಲೈನ್ ಲಿಂಕ್” ಮೂಲಕ “ಮನೆಯಲ್ಲಿ ಯೋಗ – ಕುಟುಂಬದೊಂದಿಗೆ ಯೋಗ” ಎಂಬ ಘೋಷ ವಾಕ್ಯಕ್ಕೆ ಪೂರಕವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಕಾರ್ಯಗಾರದಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇದರ ಯುವ ಸಮನ್ವಯಾಧಿಕಾರಿ ಶ್ರೀ ರಘುವೀರ್ ಸೂಟರ್ ಪೇಟೆ ಭಾಗವಹಿಸಿ, ಗ್ರಾಮೀಣ ಪ್ರದೇಶದಲ್ಲೂ “ಕೊರೋನಾ ಛಾಯೆಯಲ್ಲಿ ಡಿಜಿಟಲ್ ಯೋಗ” ಆನ್ಲೈನ್ ಕಾರ್ಯಾಗಾರದ ಮುಖಾಂತರ ವಿಶಿಷ್ಟವಾಗಿ ಮತ್ತು ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದನ್ನು ಶ್ಲಾಘಿಸಿದರು.

ಜಂಟಿ ಸಂಸ್ಥೆಯ ಹೆಚ್ಚಿನ ಸದಸ್ಯರು ಹಾಗೂ ಅವರ ಮಕ್ಕಳು, ಯೋಗ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಆನ್ಲೈನ್ ವಿಶೇಷ ಕಾರ್ಯಗಾರದಲ್ಲಿ, ಬಹಳ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಹಾಗೂ ತಾವು ಕೂಡ ಮನೆಯಲ್ಲಿ ಯೋಗಾಸನಗಳನ್ನು ಮಾಡುವ ಮೂಲಕ “ಕೋರೋನ ಛಾಯೆಯಲ್ಲಿ ಡಿಜಿಟಲ್ ಯೋಗ” ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಳೆದ ಒಂದು ವರ್ಷದಿಂದ ಯುವಕ ಮಂಡಲದಲ್ಲಿ ನಿರಂತರವಾಗಿ ಯೋಗಾಭ್ಯಾಸವನ್ನು ಕಲಿಸಿ ಕೊಡುವ ಮೂಲಕ, ಅನೇಕ ಶಿಬಿರಾರ್ಥಿಗಳಿಗೆ ಶಿಕ್ಷಕರಾಗಿ ಸಹಕರಿಸಿ, ನಿಸ್ವಾರ್ಥ ಸೇವೆ ಸಲ್ಲಿಸಿದ ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಶ್ರೀ ಹಿಮಕರ್ ಕದಿಕೆಯವರನ್ನು ಈ ಸಂದರ್ಭ ಗೌರವಿಸಲಾಯಿತು.

ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಈ ಸರಳ ಹಾಗೂ ವಿಶೇಷ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ನಿರೂಪಿಸಿದರು.

ಯೋಗ ದಿನದ ಯಶಸ್ಸಿಗೆ ಸಹಕರಿಸಿದ ಯೋಗ ಶಿಕ್ಷಕರು
ಮನೆಯಿಂದಲೇ ಯೋಗ ದಿನದ ಆಚರಣೆಯಲ್ಲಿ ಭಾಗವಹಿಸಿದವರು
ಮನೆಯಿಂದಲೇ ಯೋಗ ದಿನದ ಆಚರಣೆಯಲ್ಲಿ ಭಾಗವಹಿಸಿದವರು
ಮನೆಯಿಂದಲೇ ಯೋಗ ದಿನದ ಆಚರಣೆಯಲ್ಲಿ ಭಾಗವಹಿಸಿದವರು
ಮನೆಯಿಂದಲೇ ಯೋಗ ದಿನದ ಆಚರಣೆಯಲ್ಲಿ ಭಾಗವಹಿಸಿದವರು

1 COMMENT

LEAVE A REPLY

Please enter your comment!
Please enter your name here