ಹಳೆಯಂಗಡಿ: “ಬದಲಾದ ಸಮಾಜದಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ಹಾಗೂ ಪೋಷಕರ ಪಾತ್ರ” ಮಾಹಿತಿ ಕಾರ್ಯಕ್ರಮ

0
305
Tap to know MORE!

ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ, ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ. ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇವರ ಸಹಕಾರದೊಂದಿಗೆ ಮಂಡಲದ ಸಭಾಂಗಣದಲ್ಲಿ “ಬದಲಾದ ಸಮಾಜದಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ಹಾಗೂ ಪೋಷಕರ ಪಾತ್ರ” ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ತರಬೇತುದಾರರು ಹಾಗೂ ಮಾಹಿತಿಗಾರರಾಗಿರುವ ಡಾ|| ಜಾನ್ ಕ್ಲಾರೆನ್ಸ್ ಮಿರಂದ ಇವರು ಯಾವ ರೀತಿಯಾಗಿ ಇಂದಿನ ಸಮಾಜದಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

ಸದಾಶಿವ ಅಂಚನ್ ಇವರು ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕರಾದ ಶ್ರೀ ವಿಲಿಯಂ ಸ್ಯಾಮುವೆಲ್ ಹಾಗೂ ವಲಯ ಸಂಯೋಜಕರಾದ ಶ್ರೀ ಅಶೋಕ್, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರು ಶ್ರೀ ಯತೀಶ್ ಕೋಟ್ಯಾನ್ ಹಾಗೂ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಉಪಸ್ಥಿತರಿದ್ದರು..

ಯುವತಿ ಮಂಡಲದ ಸದಸ್ಯೆ ಕು| ರಿದ ಫಾತಿಮಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ಯೋಗೀಶ್ ಧನ್ಯವಾದ ಅರ್ಪಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ಕು| ಕಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು…

LEAVE A REPLY

Please enter your comment!
Please enter your name here