ಹಳೆಯಂಗಡಿ : ‘ಸ್ವಚ್ಛ ಗ್ರಾಮ – ಸ್ವಚ್ಛ ಪರಿಸರ’ – ಸಸಿ ನೆಡುವ ಕಾರ್ಯಕ್ರಮ

0
140

ಹಳೆಯಂಗಡಿ: ಗಿಡ ಮರ ನೆಟ್ಟು ಬೆಳೆಸಿ, ಸುಂದರ ಪರಿಸರ ಉಳಿಸಿ. ಶುದ್ಧ ಗಾಳಿಯನ್ನು ಸೇವಿಸಿ, ಪರಿಸರ ಸಂರಕ್ಷಣೆ ಹೆಚ್ಚಿಸಿ , ಮುಂದಿನ ಪೀಳಿಗೆಯನ್ನು ಉಳಿಸಿ ಎಂಬ ಧ್ಯೇಯವನ್ನಿಟ್ಟು ಹಳೆಯಂಗಡಿ ಯುವಕ ಮಂಡಲದ ನೇತೃತ್ವದಲ್ಲಿ ‘ಸ್ವಚ್ಛ ಗ್ರಾಮ, ಸ್ವಚ್ಛ ಪರಿಸರ’ ಶೀರ್ಷಿಕೆ ಅಡಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

“ಸ್ವಚ್ಛ ಗ್ರಾಮ – ಸ್ವಚ್ಛ ಪರಿಸರ” ಎಂಬ ಶೀರ್ಷಿಕೆಯಲ್ಲಿ ಪರಿಸರ ಸ್ನೇಹಿ ಸಸಿ ನೆಡುವ ಕಾರ್ಯಕ್ರಮವನ್ನು ಇಂದು (26 ಜುಲೈ) ಬೆಳಗ್ಗೆ 8 ರಿಂದ 10.30 ರವರೆಗೆ ಹಳೆಯಂಗಡಿಯ ಹಿಂದೂ ರುದ್ರ ಭೂಮಿ ಮತ್ತು ಜಿ.ಎಸ್.ಬಿ ಸಮಾಜದ ರುದ್ರಭೂಮಿಯಲ್ಲಿ ಆಯೋಜಿಸಲಾಯಿತು

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳೂರು ಹಾಗೂ ತಜ್ಞ ವೈದ್ಯರು ಹಾಗೂ ಶ್ರೀ ವಿಠೋಭ ಭಜನಾ ಮಂಡಳಿ ಹಳೆಯಂಗಡಿ ಇದರ ಅಧ್ಯಕ್ಷರಾದ ಡಾ. ಶಿವಾನಂದ ಪ್ರಭು ಹಳೆಯಂಗಡಿ ಇವರು ಚಾಲನೆ ನೀಡಿ ಮಾರ್ಗದರ್ಶನ ನೀಡಿದರು. ಪರಿಸರ ಸ್ನೇಹಿ ಹಾಗೂ ವಿವಿಧ ತಳಿಯ ಬಹುಪಯೋಗಿ ಗಿಡಗಳನ್ನು ವ್ಯವಸ್ಥಿತವಾಗಿ ನೆಡಲಾಯಿತು

ನೇತೃತ್ವ :
● ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ
● ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ

ಮಾರ್ಗದರ್ಶನ :
ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು,
● ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು

ಸಹಕಾರ :
● ಮಾತಾ ಅಮೃತಾನಂದಮಯಿ ಮಠ – ಅಮಲಾ ಭಾರತ ಅಭಿಯಾನ, ಬೋಳೂರು, ಮಂಗಳೂರು
● ಹಿಂದೂ ರುದ್ರ ಭೂಮಿ ನಿರ್ವಹಣಾ ಸಮಿತಿ, ಹಳೆಯಂಗಡಿ
● ಗೌಡ ಸಾರಸ್ವತ ಬ್ರಾಹ್ಮಣ ಸಭಾ, ಹಳೆಯಂಗಡಿ
● ಜಿಲ್ಲಾ ಪ್ರಶಸ್ತಿ ವಿಜೇತ, ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಜಿ.ಎಸ್.ಬಿ ಸಭಾ ಹಳೆಯಂಗಡಿಯ ಅಧ್ಯಕ್ಷರಾಗಿರುವ ಎಚ್ ಲಕ್ಷ್ಮಣ ಕಾಮತ್, ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ, ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಪಾವಂಜೆ, ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿಯ ಕೋಶಾಧಿಕಾರಿ ಶ್ರೀ ಮನೋಜ್ ಕೇಲೆಸಿಬೆಟ್ಟು, ಮಾತಾ ಅಮೃತಾನಂದಮಯಿ ಮಠದ ಶ್ರೀ ಮೋಹನ್ ಬಂಗೇರ, ಜಂಟಿ ಸಂಸ್ಥೆಗಳ ಇತರ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

 

LEAVE A REPLY

Please enter your comment!
Please enter your name here