ಹಳೆಯಂಗಡಿ : ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0
308
Tap to know MORE!

ಹಳೆಯಂಗಡಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ ಇದರ ಆಶ್ರಯದಲ್ಲಿ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮವು ಭಾನುವಾರ ಯುವಕ ಮಂಡಲದ ಸಭಾಂಗಣದಲ್ಲಿ ಜರುಗಿತು.

ಕೋರೋನ ಸಂಕಷ್ಟ ಕಾಲದಲ್ಲಿ ಶಾಲಾ ಕಾಲೇಜು ಆರಂಭವಾಗದೆ ಇದ್ದು, ವಿಧ್ಯಾರ್ಥಿಗಳು ಮನೆಯಲ್ಲೇ ಇರುವ ಸಂಧರ್ಭ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ನಿರಂತರ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ಮಕ್ಕಳಿಗೆ ಉತ್ತಮ ಸಮಯದ ಸದುಪಯೋಗ ಮತ್ತು ಧನಾತ್ಮಕ ಚಿಂತನೆ ಮೂಡಲು ಅನುಕೂಲ ಮಾಡಿ ಕೊಡುತ್ತಿದೆ ಎಂದು ಯುವಕ ಮಂಡಲದ ನಿರಂತರ ಕಾರ್ಯ ವೈಖರಿಯನ್ನು ಶ್ಲಾಗಿಸುತ್ತ ಬಹುಮಾನ ವಿತರಣೆ ನಡೆಸಿದ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್ ಇದರ ಕಲಾ ಶಿಕ್ಷಕರು ಆಗಿರುವ ಶ್ರೀ ಸುಹಾಸ್ ನಾನಿಲ್ ತಿಳಿಸಿದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆ ಬಜಪೆ ಇದರ ಕಲಾ ಶಿಕ್ಷಕರು ಆಗಿರುವ ಶ್ರೀ ಯೋಗೀಶ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಇದರ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚೀಲಿಂಬಿ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ ಇದರ ಪ್ರದಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡಿಕೊಸ್ತಾ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಇದರ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್ ಬಹುಮಾನ ವಿಜೇತರ ಪಟ್ಟಿ ಓದಿದರು. ಯುವಕ ಮಂಡಲದ ಪ್ರದಾನ ಕಾರ್ಯದರ್ಶಿ ಶ್ರೀ ಇಂದುಧರ್ ಕಿಣಿ ವಂದಿಸಿದರು. ಸದಸ್ಯರಾದ ಶ್ರೀ ಹಿತೇಶ್ ಅಮೀನ್ ನಿರೂಪಿಸಿದರು.

ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿಜೇತರು

1 ನೇ ತರಗತಿಯಿಂದ 4 ನೇ ತರಗತಿ ವಿಭಾಗ

ಪ್ರಥಮ :- ಧನ್ಯಶ್ರೀ ಸಾಗ್ ಹಳೆಯಂಗಡಿ
ದ್ವಿತೀಯ :- ಜಗದೀಪ್ ಹಳೆಯಂಗಡಿ
ತೃತೀಯ :- ಶ್ರೇಯಾ ಕಲ್ಲಾಪು

5 ನೇ ತರಗತಿಯಿಂದ 7 ನೇ ತರಗತಿ

ಪ್ರಥಮ :- ವಿಶ್ರುತ್ ಆರ್ ಪಡು ಪಣಂಬೂರು
ದ್ವಿತೀಯ :- ಚಿರಾಗ್ ಹಳೆಯಂಗಡಿ
ತೃತೀಯ :- ಪೂರ್ವಿಕ ಹಳೆಯಂಗಡಿ

8ನೇ ತರಗತಿಯಿಂದ 10 ನೇ ತರಗತಿ

ಪ್ರಥಮ :- ರೋಶನ್ ಹಳೆಯಂಗಡಿ
ದ್ವಿತೀಯ:- ರಿಧಾ ಹಳೆಯಂಗಡಿ
ತೃತೀಯ :- ಮನಿಷಾ ಎನ್. ಹಳೆಯಂಗಡಿ

ಪ್ರೋತ್ಸಾಹಕ ಬಹುಮಾನ

ಬೇಬಿ ಶಾನ್ವಿ ಸುವರ್ಣ (U.K.G)
ಬೇಬಿ ಅಯ (U.K.G)

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here