ಹಳೆಯಂಗಡಿ: ಸಾಮಾಜಿಕ ಬದ್ಧತೆಯೊಂದಿಗೆ, ಸಾಂಸ್ಕೃತಿಕ, ಶೈಕ್ಷಣಿಕ, ತುಳುನಾಡಿನ ಸಂಸ್ಕೃತಿ ಸಂಸ್ಕಾರದ ಕಾರ್ಯಗಳನ್ನು ಸತತವಾಗಿಮಾಡುತ್ತಿರುವ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಹಳೆಯಂಗಡಿ ಇದರ ಸುವರ್ಣ ಮಹೋತ್ಸವದ ಶುಭ ವರ್ಷದಲ್ಲಿಯೇ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
ಇದರ ಬಗ್ಗೆ ಸಂತಸ ಹಂಚಿಕೊಂಡಿರುವ ಯುವಕ ಮಂಡಲದ ಅಧ್ಯಕ್ಷ ಯತೀಶ್ ಕೋಟ್ಯಾನ್, “ಇದು ಪ್ರತಿಯೊಬ್ಬ ಸದಸ್ಯರ ಶ್ರಮಕ್ಕೆ ಸಂದಿರುವ ಫಲ. ಯುವಕ ಮಂಡಲದ ಜಂಟಿ ಸಂಸ್ಥೆಗಳಾಗಿರುವ ಸಲಹಾ ಸಮಿತಿ, ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲದ ಸಹಕಾರದ ಸಂದ ಗೌರವವಾಗಿದೆ” ಎಂದಿದ್ದಾರೆ.
ಇದನ್ನೂ ನೋಡಿ : ವಿದ್ಯಾವಿನಾಯಕ ಯುವಕ ಮಂಡಲದ ಚಟುವಟಿಕೆಗಳು
ಮೂರು ಬಾರಿ (ಪ್ರಪ್ರಥಮ 1979-80, 1988-89 ಮತ್ತು 2015-16) ರಾಜ್ಯ ಪ್ರಶಸ್ತಿ ಪಡೆದಿರುವ ವಿದ್ಯಾವಿನಾಯಕ ಯುವಕ ಮಂಡಲವು, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವಾಗ, ದ.ಕ ಜಿಲ್ಲೆಯ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂಸ್ಥೆಯ ಪ್ರತಿಯೊಬ್ಬರಿಗೂ ಸಂತಸ ತಂದಿದೆ.