ಹಳೆಯಂಗಡಿ : ಮುದ್ದು ಕೃಷ್ಣ ವೇಷ ಭಾವಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

0
242

ಹಳೆಯಂಗಡಿ :- ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಭಾವಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಭಾನುವಾರ ನಡೆಯಿತು.

“ಸುವರ್ಣ ಮಹೋತ್ಸವ ಸಂಧ್ರಭದಲ್ಲಿರುವ ಯುವಕ ಮಂಡಲವು ನಿರಂತರ ಅನೇಕ ಯಶಸ್ವಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು ಹೆಮ್ಮೆಯ ವಿಷಯ. ಈ ಕೊರೋನ ರೋಗದ ಸಂದರ್ಭದಲ್ಲಿ ಕೂಡ ಈ ವಿಶೇಷ ಕೃಷ್ಣ ಸ್ಪರ್ಧೆಯನ್ನು ಆಯೋಜಿಸಿ, ಅತ್ಯುತ್ತಮ ಮುದ್ದು ಕೃಷ್ಣನ ಭಾವಚಿತ್ರ ಬರುವಲ್ಲಿ ಶ್ರಮಿಸಿದ ಯುವಕ ಮಂಡಲ ಹಾಗೂ ಶ್ರಮ ವಹಿಸಿ ಭಾವಚಿತ್ರ ಕಳುಹಿಸಿಕೊಟ್ಟ ಪೋಷಕರಿಗೆ ನನ್ನ ಅಭಿನಂದನೆಗಳು. ಮುಂದೆಯೂ ಇದೇ ರೀತಿ ನಿರಂತರ ಕಾರ್ಯಕ್ರಮ ನಡೆಯುತ್ತಿರಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರು ಹೇಳಿದರು.

ಮುದ್ದು ಕೃಷ್ಣ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್ ಕಾಮರೊಟ್ಟು ಭಾಗವಹಿಸಿ ಶುಭ ಹಾರೈಸಿದರು. ಸುವರ್ಣ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎನ್ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚಿಲಿಂಬಿ, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು.

ಬಹುಮಾನದ ಪ್ರಾಯೋಜಕರು

● ಪ್ರಥಮ ನಗದು ಬಹುಮಾನ – ಮಾಸ್ಟರ್ ದುರ್ಗಾ೦ಶ್ (ಶ್ರೀ ದುರ್ಗಾ ವಾಸುದೇವ ಹಳೆಯಂಗಡಿ).
● ದ್ವೀತಿಯ ನಗದು ಬಹುಮಾನ – ಶ್ರೀ ಗಣೇಶ್ ಯು, ಟ್ರಸ್ಟಿಗಳು, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ).
● ತೃತೀಯ ನಗದು ಬಹುಮಾನ – ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಅಧ್ಯಕ್ಷರು, ಯುವತಿ ಮಂಡಲ (ರಿ) ಹಳೆಯಂಗಡಿ.
● ಸ್ಮರಣಿಕೆ – ಶ್ರೀ ಚಂದ್ರಶೇಖರ ಜಿ (ವಕೀಲರು) – ಉಪಾಧ್ಯಕ್ಷರು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ).
● ವಿಶೇಷ ಬಹುಮಾನ ನಗದು ಬಹುಮಾನ – ಶ್ರೀ ರಾಮದಾಸ್ ಪಾವಂಜೆ, ಪ್ರಧಾನ ಕಾರ್ಯದರ್ಶಿ, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಹಳೆಯಂಗಡಿ.

ಕುಮಾರಿ ಅಭಿಜ್ಞಾ ನವೀನ್ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀ ಯತೀಶ್ ಕೋಟ್ಯಾನ್ ಧನ್ಯವಾದ ಅರ್ಪಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here