ಭೂ ವಿಜ್ಞಾನ ಸಚಿವ ಡಾ.ಹರ್ಷ್ ವರ್ಧನ್ ರವರು ಜುಲೈ 27 ರಂದು ‘ಮೌಸಮ್’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು. ಇದು ಈಗ ನಗರವಾರು ಹವಾಮಾನ ಮುನ್ಸೂಚನೆಗಳಲ್ಲದೆ ಇತರ ಎಚ್ಚರಿಕೆಗಳನ್ನು ನೀಡುತ್ತದೆ.
‘ಮೌಸಮ್’ ಅಪ್ಲಿಕೇಶನ್ ಅನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್ (ಐಕ್ರಿಸಾಟ್) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೆಟಿಯರೋಲಜಿ (ಐಐಟಿಎಂ) ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.
On this occasion,I launched a Mob App #MAUSAM & a Resource Centre Network portal which has been developed by @moesgoi as a pilot project under the #DigitalIndia initiative of the GoI.@rajeevan61 @PrinSciAdvGoI @PMOIndia pic.twitter.com/JALcBFbi7C
— Dr Harsh Vardhan (@drharshvardhan) July 27, 2020
ಹೊಸದಾಗಿ ಪ್ರಾರಂಭಿಸಲಾದ ಅಪ್ಲಿಕೇಶನ್ ಬಳಕೆದಾರರಿಗೆ ವಿಭಿನ್ನ ಸೇವೆಗಳನ್ನು ನೀಡುತ್ತದೆ. ಸಾರ್ವಜನಿಕರಿಗೆ ಈ ಆಪ್ ಲಭ್ಯವಿದೆ. ಇದನ್ನು Google Play Store ಮತ್ತು Apple’s App Store ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಬಹುದು.