ಮಂಗಳೂರು : ನಾಳೆ ‘ಸಂಡೇ ಲಾಕ್ ಡೌನ್‘ ಇದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಹಾಲು ಪೂರೈಕೆ ಆಗಲಿದೆ ಎಂದು ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ತಿಳಿಸಿದೆ.
ಭಾನುವಾರದ ಲಾಕ್ ಡೌನ್ ವೇಳೆ ಆರೋಗ್ಯ ಸೇವೆ ಹೊರತು ಎಲ್ಲವೂ ಬಂದ್ ಎಂಬ ಸುದ್ದಿಯಲ್ಲಿ ಕೆಲವು ಮಾಧ್ಯಮಗಳು ಹಾಲು, ಹಾಲಿನ ಉತ್ಪನ್ನಗಳು ಮತ್ತು ಪೇಪರ್ ಸಹ ಇರುವುದಿಲ್ಲ ಎಂಬ ಸಂದೇಶ ಸಾರಿದೆ. ಲಾಕ್ಡೌನ್ ಆದರೂ, ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟಕ್ಕೆ ನಿರ್ಬಂಧ ಇಲ್ಲದಿರುವ ಹಿನ್ನೆಲೆಯಲ್ಲಿ, ಬೆಳಗ್ಗೆ 8 ರಿಂದ 11ರ ವರೆಗೆ ಎಂದಿನಂತೆ ‘ನಂದಿನಿ’ ಹಾಲಿನ ಪಾರ್ಲರ್ ಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಿಲ್ಲಾಡಳಿತ ಈ ಹಿಂದೆಯೇ ಹೊರಡಿಸಿರುವ ಆದೇಶದ ಮಾರ್ಗಸೂಚಿಯಲ್ಲಿ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ, ಎಂದಿನಂತೆ ಶನಿವಾರ ಮತ್ತು ಭಾನುವಾರಗಳಂದು ಸಹ ಬೆಳಿಗ್ಗೆ 8.00 ರಿಂದ 11.00 ಗಂಟೆಯವರೆಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಡೀಲರ್ ಕೇಂದ್ರಗಳಲ್ಲಿ ದೊರೆಯುತ್ತವೆ.
ಅದರಂತೆ ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಗ್ರಾಹಕರು ಎಂದಿನಂತೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದು ಕೆ ಎಂ ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.