ಪ್ರಖ್ಯಾತ ಧಾರವಾಹಿಯ ಮೂವರು ನಟರು ಮತ್ತು ನಾಲ್ವರು ಸಿಬ್ಬಂದಿಗಳಿಗೆ ಕೊರೋನಾ!

0
227
Tap to know MORE!

ಹಿಂದಿ ಭಾಷೆಯ ಪ್ರಖ್ಯಾತ ಧಾರವಾಹಿ “ಯೆ ರಿಶ್ತಾ ಕ್ಯಾ ಕೆಹ್ಲತಾ ಹೈ” ತಂಡದ ಮೂವರು ನಟರು ಮತ್ತು ನಾಲ್ವರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅವರೆಲ್ಲರೂ ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ಹೊಂದಿರದ ಕಾರಣ, ಸದ್ಯ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಸೋಂಕಿಗೆ ಒಳಗಾಗಿರುವ ಮೂವರೂ ನಟರು ಧಾರವಾಹಿಯಲ್ಲಿ ಗೋಯೆಂಕಾ ಕುಟುಂಬದ ಸದಸ್ಯರು. ಅವರ ಕೊರೋನಾ ವರದಿಗಳು ಬಂದ ನಂತರ, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಧಾರವಾಹಿಯ ಸಿಬ್ಬಂದಿ ಸದಸ್ಯರು ಪರೀಕ್ಷೆಗಳಿಗೆ ಒಳಗಾದರು. ಇದರಲ್ಲಿ ನಾಲ್ವರು ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದ್ದರಿಂದ ಸದ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರವಾಹಿಯ ಸೆಟ್ಅನ್ನು ಸೋಮವಾರ ಸ್ವಚ್ಛಗೊಳಿಸಲಾಗಿದೆ ಮತ್ತು ಸ್ಯಾನಿಟೈಜ್ ಮಾಡಲಾಗಿದೆ ಎಂದು ಯೆ ರಿಶ್ತಾ ಕ್ಯಾ ಕೆಹ್ಲತಾ ಹೈ ನಿರ್ಮಾಪಕ ರಾಜನ್ ಶಾಹಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಂಡವು ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದೆ ಎಂದು ಅವರು ಭರವಸೆ ನೀಡಿದರು.

“ಮೂವರು ನಟರು ಯೆ ರಿಶ್ತಾ ಕ್ಯಾ ಕೆಹ್ಲತಾ ಹೈ ತಂಡದ ಅವಿಭಾಜ್ಯ ಅಂಗ. ಅವರು ಲಕ್ಷಣರಹಿತವಾಗಿರುವುದರಿಂದ, ಅವರು ಸದ್ಯ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಸೆಟ್‌ನಲ್ಲಿರು ಪ್ರತಿಯೊಬ್ಬರೂ ತಕ್ಷಣ ಪರೀಕ್ಷಿಸಿದ್ದೇವೆ ಮತ್ತು ನಾಲ್ವರು ಸಿಬ್ಬಂದಿ ಸದಸ್ಯರು ಫಲಿತಾಂಶ ಪಾಸಿಟಿವ್ ಬಂದಿದೆ” ಎಂದರು.

ಪ್ರಸ್ತುತ, ಇವರೆಲ್ಲರೂ ಹೋಂ ಕ್ವಾರಂಟೈನ್‌ನಲ್ಲಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ನಮ್ಮ ಆದ್ಯತೆಯಾಗಿರುವುದರಿಂದ ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಎಲ್ಲಾ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ ಎಂಬುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ”ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here