ಹಿಂದಿ ದೇಶ ಜೋಡಿಸುವ ಭಾಷೆ | ಹಿಂದಿಯಿಂದ ಉದ್ಯೋಗಾವಕಾಶವೂ ಹೆಚ್ಚು: ಡಾ. ಸುಕನ್ಯಾ ಮೇರಿ

0
159
Tap to know MORE!

ಮಂಗಳೂರು ಡಿ.25: ವಿಶೇಷವೆಂದರೆ, ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಆರಿಸಿದವರಲ್ಲಿ ಹೆಚ್ಚಿನವರು ಹಿಂದಿಯವರಾಗಿರಲಿಲ್ಲ. ಅವರೆಲ್ಲರೂ ಹಿಂದಿಯಿಂದ ನಮ್ಮ ದೇಶವನ್ನು ಜೋಡಿಸಬಹುದು ಎಂದು ನಂಬಿದ್ದರು, ಜೊತೆಗೆ ಸ್ಥಳೀಯ ಭಾಷೆಗೂ ಪ್ರಾಧಾನ್ಯತೆ ನೀಡಲು ಸೂಚಿಸಿದ್ದರು ಎಂದು ಉಡುಪಿಯ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಹಿಂದಿ ವಿಭಾಗ ಮತ್ತು ಬ್ಯಾಂಕ್‌ ಆಫ್‌ ಬರೋಡದ ಮಂಗಳೂರು ಶಾಖೆ ಜಂಟಿಯಾಗಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ವಿದ್ಯಾರ್ಥಿ ಸಮ್ಮಾನ ಕಾರ್ಯಕ್ರಮದಲ್ಲಿ ʼಉದ್ಯೋಗದ ಸಮಸ್ಯೆ ಮತ್ತು ಹಿಂದಿʼ ಎಂಬ ಕುರಿತು ಮಾತನಾಡಿದ ಅವರು ಹಿಂದಿಯಿಂದ ಸ್ಥಳೀಯರಿಗೆ ದೇಶದೆಲ್ಲೆಡೆ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯ, ಎಂದರು.

ಇದನ್ನೂ ಓದಿ: ಮಂಗಳೂರು ವಿವಿಯಲ್ಲಿ 41 ನೇ ಸಂಸ್ಥಾಪನಾ ದಿನಾಚರಣೆ | ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ ಅಶ್ವತ್ಥ್‌ನಾರಾಯಣ್

ಇದೇ ಸಂದರ್ಭದಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ವತಿಯಿಂದ ಸ್ನಾತಕೋತ್ತರ ಹಿಂದಿಯಲ್ಲಿ ಮೊದಲ ಸ್ಥಾನ ಪಡೆದ ರಕ್ಷಿತಾ ಅವರಿಗೆ ರೂ.11,000 ಮತ್ತು ದ್ವಿತೀಯ ಸ್ಥಾನಿ ಅಶ್ವಿನಿ ಪೂಜಾರಿ ಅವರಿಗೆ ರೂ. 7,500 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಬ್ಯಾಂಕ್‌ ಆಫ್‌ ಬರೋಡದ ಮಂಗಳೂರು ನಗರ ಸ್ಥಾನೀಯ ಪ್ರಬಂಧಕ ದಿನೇಶ್‌ ಪೈ ಅವರು ಮಾತನಾಡಿ, ರಾಷ್ಟ್ರಭಾಷೆ ಹಿಂದಿಯನ್ನು ಕಲಿಯಲು ವಿದ್ಯಾರ್ಥಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು, ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ ಸಮ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿಯರು ಮತ್ತು ಕೊಡಮಾಡಿದ ಬ್ಯಾಂಕ್‌ ಆಫ್‌ ಬರೋಡಾವನ್ನು ಅಭಿನಂದಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬ್ಯಾಂಕ್‌ನ ಅಧಿಕಾರಿಗಳಾದ ಮಾಯಾ ಎಸ್‌, ರಾಜೇಶ್ವರಿ ಪಿ ಮತ್ತು ಸಂತೋಷ್‌ ಮಾತನಾಡಿದರು. ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ ಆರ್‌, ಪದವಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಆರ್‌. ರಾವ್‌, ಉಪನ್ಯಾಸಕಾರಾದ ಗುರುದತ್‌, ಸಂಜೀವ್‌ ಕುಮಾರ್‌ ಮತ್ತು ಪವನ್‌ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರಾವ್ಯ ಎನ್‌ ಕಾರ್ಯಕ್ರಮ ನಿರೂಪಿಸಿದರು.

ಅಲಿಗಢ ಮುಸ್ಲಿಂ ವಿವಿ ಮಿನಿ ಭಾರತವಿದ್ದಂತೆ| ಮುಸ್ಲಿಂ ಮಹಿಳೆಯರ ಸಬಲೀಕರಣ ನಮ್ಮ ಆದ್ಯತೆ : ಪ್ರಧಾನಿ ಮೋದಿ

LEAVE A REPLY

Please enter your comment!
Please enter your name here