ಮಂಗಳೂರು ವಿವಿ ಕಾಲೇಜಿನಲ್ಲಿ “ಹಿಂದಿ ಸಪ್ತಾಹ”ದ ಅಂಗವಾಗಿ ವಿಶೇಷ ವಿಚಾರ ಸಂಕಿರಣ

0
178
Tap to know MORE!

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗಗಳ ವತಿಯಿಂದ ಸೆಪ್ಟೆಂಬರ್‌ 21 ರಿಂದ ಸೆಪ್ಟೆಂಬರ್‌ 26 ರವರೆಗೆ ʼಹಿಂದಿ ಸಪ್ತಾಹʼ ವನ್ನು ಆಚರಿಸಲಾಯಿತು. ಇದರ ಅಂಗವಾಗಿ ವಿಶೇಷ ವಿಚಾರ ಸಂಕಿರಣಗಳ ಜೊತೆಗೆ ಹಲವು ಬಗೆಯ ಆನ್‌ಲೈನ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸೆಪ್ಟೆಂಬರ್‌ 23 ರಂದು ಮುಂಬಯಿಯ ಆರ್‌ಬಿಐ ಪ್ರಬಂಧಕ ಡಾ. ಮಧುಶೀಲ ಆಯಿಲಿಯಾಥ್‌ ʼಸಾಹಿತ್ಯ ಕ್ಷೇತ್ರದಲ್ಲಿ ಹಿಂದಿʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮರುದಿನ ಮುಂಬಯಿಯ ನಾನಾವತಿ ಮಹಿಳಾ ಮಹಾವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ರವೀಂದ್ರ ಕಾತ್ಯಾಯನ್‌ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ಶನಿವಾರ ಕಾಲೇಜಿನ ಶಿವರಾಮ ಕಾರಂತ ಸಭಾಭವನದಿಂದ ಆನ್‌ಲೈನ್‌ ವೇದಿಕೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಉದಯ ಕುಮಾರ್‌ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪೂನಾ ವಿಶ್ವವಿದ್ಯಾನಿಲಯದ ಹಿಂದಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಈಶ್ವರ ಪವಾರ್‌, ವರ್ತಮಾನದಲ್ಲಿ ಹಿಂದಿ ಭಾಷೆಯ ಸ್ಥಿತಿಗತಿಯ ಕುರಿತು ಬೆಳಕು ಚೆಲ್ಲಿದರು.

ಸಪ್ತಾಹದ ಅಂಗವಾಗಿ ರಂದು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪ್ರಬಂಧ ಲೇಖನ ಸ್ಪರ್ಧೆ, ಹಿಂದಿ ಕಾವ್ಯ ರಚನಾ ಸ್ಪರ್ಧೆಗಳು ನಡೆದವು. ಕಾಲೇಜಿನ ಪ್ರಾಧ್ಯಾಪಕರಿಗಾಗಿ ಶುದ್ಧ ಲೇಖನ ಸ್ಪರ್ಧೆ ನಡೆಯಿತು. 15 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಾಲೇಜಿನ ಹಿಂದಿ ಸಂಘದ ಉಪನಿರ್ದೇಶಕಿ ಡಾ.ನಾಗರತ್ನ ರಾವ್‌, ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾ ಟಿ ಆರ್‌ ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹಿಂದಿ ಸಪ್ತಾಹ, ವಿವಿ ಕಾಲೇಜು ಮಂಗಳೂರು

ಸಮಾರೋಪ ಸಮಾರಂಭ

ವಿವಿ ಕಾಲೇಜು ಮಂಗಳೂರಿನಲ್ಲಿ ಪ್ರಾಂಶುಪಾಲ ಡಾ. ಉದಯ ಕುಮಾರ್‌ ಎಂ. ಎ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿ ಸಪ್ತಾಹದ ಸಮಾರೋಪದಲ್ಲಿ, ಹಿಂದಿ ಸಂಘದ ಉಪನಿರ್ದೇಶಕಿ ಡಾ.ನಾಗರತ್ನ ರಾವ್‌, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಸುಮಾ ಟಿ ಆರ್‌ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here