ವಿವಾದಾಸ್ಪದ ಯೂಟ್ಯೂಬರ್ ಹೀರ್ ಖಾನ್ ಬಂಧನ

0
232
Tap to know MORE!

ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡಿರುವ ವೀಡಿಯೊದಿಂದಾಗಿ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ ಮಹಿಳಾ ಯೂಟ್ಯೂಬರ್ ಹೀರ್ ಖಾನ್‌ರನ್ನು ಪ್ರಯಾಗ್ರಾಜ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಪೊಲೀಸರು ಹೀರ್ ಖಾನ್ ಎಂಬವರನ್ನು ಬಂಧಿಸಿದ್ದು, ಅವರ ವಿವಾದಾತ್ಮಕ ವಿಡಿಯೋವೊಂದು ವೈರಲ್ ಆದ ನಂತರ ಖಾನ್ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ : ಮಥುರಾ ಕೃಷ್ಣ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ವಂಚನೆ – 13 ಮಂದಿಯ ಬಂಧನ

ಹೀರಾ ಖಾನ್ ಪ್ರಯಾಗರಾಜ್ ನಲ್ಲಿ ಕಂಟೆಂಟ್ ರೈಟರ್ ಆಗಿದ್ದರು. ‘ಬ್ಲ್ಯಾಕ್ ಡೇ 5 ಆಗಸ್ಟ್’ ಹೆಸರಿನ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಕೋಮುವಾದಿ ದೃಷ್ಟಿಕೋನದಲ್ಲಿ ಅಸಭ್ಯ ವೀಡಿಯೊಗಳನ್ನು ಹಾಕುತ್ತಿದ್ದಾರೆ. ಆದರೆ ಅವರ ಬಹುತೇಕ ವೀಡಿಯೊಗಳು 1,000 ವೀಕ್ಷಣೆಗಳನ್ನು ಸಹ ಪಡೆದಿರಲಿಲ್ಲ.

ಮಂಗಳವಾರ, ಅವರು ಹಿಂದೂ ದೇವರುಗಳನ್ನು ನಿಂದಿಸಿದ ವಿಲಕ್ಷಣ ವೀಡಿಯೊವನ್ನು ಅಪ್ಲೋಡ್ ಮಾಡಿದಾಗ, ಅದು ಕೆಲವೇ ಗಂಟೆಗಳಲ್ಲಿ 10,000 ವೀಕ್ಷಣೆಗಳನ್ನು ಗಳಿಸಿತು. ಜನರು ವೀಡಿಯೊವನ್ನು ಖಂಡಿಸುತ್ತಿದ್ದಂತೆ, #ArrestHeerKhan ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು.

ಆಕೆಯ ವಿರುದ್ಧ 153 ಎ / 505 ಐಪಿಸಿ ಮತ್ತು ಐಟಿ ಕಾಯ್ದೆಯ 66 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here