ಹುಬ್ಬಳ್ಳಿ: ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡುವಂತೆ ಸಲ್ಲಿಸಿದ ಮನವಿಗೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದೆ. ಈ ಸಂಬಂಧ ಕೇಂದ್ರವು ಈಗಾಗಲೇ ರಾಜ್ಯದ ಕಂದಾಯ ಇಲಾಖೆಗೆ ಪತ್ರ ಕಳಿಸಿದೆ.
Sri Siddharoodha Swamiji was a great ascetic, hindu guru and philosopher.#Hubli #Dharwad
— Suresh Angadi (@SureshAngadi_) September 9, 2020
ಈ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಗೃಹ ಸಚಿವ ಅಮಿತ್ ಶಾ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ಗೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ : ಹೊರಬರಲಿದೆ ಯಕ್ಷಗಾನ ವಿಶ್ವಕೋಶ
“ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಹೆಸರನ್ನು ಸಿದ್ದಾರೂಢ ಸ್ವಾಮಿಜಿ ರೈಲ್ವೆ ನಿಲ್ದಾಣ, ಹುಬ್ಬಳ್ಳಿ ಎಂದು ಬದಲಾಯಿಸಲು ಅನುಮೋದನೆ ನೀಡಿದ್ದಕ್ಕಾಗಿ ಗೃಹಸಚಿವ ಅಮಿತ್ ಶಾ ಹಾಗೂ ಪಿಯೂಷ್ಗೋಯಲ್ ಅವರಿಗೆ ಧನ್ಯವಾದಗಳು.
“ಇದು ಸ್ಥಳೀಯ ಜನರು ಮತ್ತು ರಾಜ್ಯ ನಾಯಕರ ದೀರ್ಘಕಾಲದ ಬೇಡಿಕೆಯಾಗಿದ್ದು ಇಂದು ಈಡೇರಿದೆ” ಎಂದು ಸಚಿವ ಸುರೇಶ್ ಅಂಗಡಿ ಟ್ವೀಟ್ ಮಾಡಿದ್ದಾರೆ.