ಯುಪಿಎಸ್‌ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಶೇಷ ರೈಲಿನ ವ್ಯವಸ್ಥೆ

0
179
Tap to know MORE!

ಅಕ್ಟೋಬರ್ 4ರಂದು ಯು.ಪಿ.ಎಸ್.ಸಿ. ಪರೀಕ್ಷೆ ನಡೆಸಲಾಗುತ್ತಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಏರ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನೈರುತ್ಯ ರೈಲ್ವೆ ಇಲಾಖೆ ವಿಶೇಷ ಅನುಕೂಲ ಮಾಡಿಕೊಡಲಿದೆ.

ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ – ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. ಅಕ್ಟೋಬರ್ 3ರಂದು ಸಂಜೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿರುವ ಈ ರೈಲು ಅಕ್ಟೋಬರ್ 4ರ ಬೆಳಿಗ್ಗೆ 6-45ಕ್ಕೆ ಯಶವಂತಪುರ ತಲುಪಲಿದೆ.

ಅಕ್ಟೋಬರ್ 4ರ ರಾತ್ರಿ ಎಂಟು ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ಅಕ್ಟೋಬರ್ 5ರಂದು ಬೆಳಗ್ಗೆ 8-45 ಹುಬ್ಬಳ್ಳಿ ತಲುಪಲಿದೆ ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here