ಹೊಂದಾಣಿಕೆ

0
228
Tap to know MORE!

ಶಿವಪುರ ಎಂಬ ಊರಿನಲ್ಲಿ ಒಬ್ಬಳು ಹುಡುಗಿ ಇದ್ದಳು.ಅವಳ ಹೆಸರು ಗೀತ. ಇವಳಿಗೆ ಹಕ್ಕಿಗಳ ಚಿಲಿಪಿಲಿ, ನೀರು ಹರಿಯುವಾಗ ಉಂಟಾಗುವ ಶಬ್ದ ಮೊದಲಾದವುಗಳನ್ನು ಕೇಳಲು ತುಂಬಾ ಇಷ್ಟ.ಗೀತಾಳ ಮನೆಯ ಸಮೀಪ ಒಂದು ಗದ್ದೆ ಇದೆ.ಇವಳ ಮನೆಯಲ್ಲಿ ಗೀತ, ಅಪ್ಪ, ಅಮ್ಮ ಮತ್ತು ತಂಗಿ ಸೀತ ಇರುವರು.ಗೀತಾಳ ಹೆತ್ತವರು ಕೃಷಿಕರು.ಅಪ್ಪ ಗದ್ದೆ ಉಳುವುದು,ಬೀಜ ಬಿತ್ತುವುದು,ಗೊಬ್ಬರ ಹಾಕುವುದು ಮಾಡಿದರೆ ಅಮ್ಮ ಮತ್ತು ಗೀತ ನೇಜಿ ನೆಡುವುದು,ಕೀಳುವುದು ಇನ್ನಿತರ ಕೆಲಸಗಳನ್ನು ಮಾಡುತ್ತಾರೆ.

ಇವರಲ್ಲಿ ಟ್ರಾಕ್ಟರ್ ಇಲ್ಲ. ಎರಡು ಎತ್ತುಗಳು ,ನಾಲ್ಕು ದನಗಳು ,ಮೂರು ಕರುಗಳು ಇದ್ದವು. ಸೀತ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾಳೆ. ಇವರು ಗದ್ದೆಯಲ್ಲಿ ಭತ್ತ, ತರಕಾರಿ ಕೃಷಿಗಳನ್ನು ಮಾಡಿದರೆ ,ಮನೆಯಂಗಳದಲ್ಲಿ ಸುಂದರವಾದ ಹೂದೋಟವಿದೆ.ಸ್ವಲ್ಪ ಔಷದೀಯ ಸಸ್ಯಗಳೂ ಇವೆ.
ಗೀತ ಮತ್ತು ಮನೆಯವರಿಗೆ ಬೇರೆ ಒಂದು ಸ್ವಲ್ಪ ಜಾಗವಿತ್ತು.ಇವರಿಗೆ ಆಹಾರ, ಆರೋಗ್ಯದ ಯಾವುದೇ ಕೊರತೆ ಇರಲಿಲ್ಲ. ಇವರ ಮನೆಯ ಪಕ್ಕದಲ್ಲಿ ಒಂದು ದೊಡ್ಡ ಮನೆಯಿತ್ತು. ಅಲ್ಲಿ ಏಳು ಜನರಿದ್ದರು.ಅವರು ಪ್ರತಿಯೊಂದು ವಸ್ತುವನ್ನು ಅಂಗಡಿಯಿಂದ ತರುತ್ತಿದ್ದರು.ಅವರಿಗೆ ಐದು ಎಕ್ಕರೆ ಸ್ಥಳವಿತ್ತು.ಆದರೆ ಅವರು ಮೂರು ಎಕ್ರೆ ಸ್ಥಳವನ್ನು ಮಾರಿ ಹಣ ಮಾಡಿದರು.ಉಳಿದ ಜಾಗದಲ್ಲಿ ಇವರ ಮನೆಯೂ, ಒಂದಷ್ಟು ಜಾಗದಲ್ಲಿ ಕಸಕಡ್ಡಿ,ಪೊದೆಗಳೂ ಇದ್ದವು. ಪೊದೆ ತುಂಬಿದ ಜಾಗವು ಕೃಷಿಗೆ ಯೋಗ್ಯವಾದ ಸ್ಥಳವಾಗಿತ್ತು.ಇದನ್ನರಿತ ಆ ಮನೆಯವರು ಕೃಷಿಯ ಕಾಯಕಕ್ಕೆ ಮುಂದಾದರು.ಆ ಮನೆಯ ಹಿರಿಯ ವ್ಯಕ್ತಿ ಕೃಷಿ ಕೆಲಸದ ಮುಂದಾಳತ್ವವನ್ನು ವಹಿಸಿಕೊಂಡರು.

ಆದರೆ ಉಳಿದ ಸದಸ್ಯರು ಅವರಿಗೆ ಪ್ರೋತ್ಸಾಹ ನೀಡದ ಕಾರಣ ,ಅವರ ಕೆಲಸವು ಅರ್ಧಕ್ಕೆ ನಿಂತು ಹೋಯಿತು. ಆದರೆ ಗೀತಾಳ ಮನೆಯಲ್ಲಿ ಎಲ್ಲರೂ ತಂದೆಯೊಡನೆ ಕೈ ಜೋಡಿಸಿ,ಅವರು ಹೇಳಿದ ರೀತಿಯಲ್ಲಿ ಕೆಲಸದಲ್ಲಿ ತೊಡಗಿಕೊಂಡರು.ಎಲ್ಲರೂ ಜವಾಬ್ದಾರಿಯುತವಾಗಿ ಚೆನ್ನಾಗಿ ದುಡಿದರು.ಅದರ ಪ್ರತಿಫಲದಂತೆ ಬಂಗಾರದಂತಹ ಫಸಲು ಪಡೆದರು.ಒಬ್ಬರೊಬ್ಬರನ್ನು ಅರಿತು”ಹೊಂದಾಣಿಕೆ”ಯಿಂದ ಸಂತೋಷದಿಂದ ಬಾಳಿದರು.

✍️ ಗೌರಿ
7ನೇ ತರಗತಿ
ಜಿ. ಎಚ್.ಎಸ್.ಎಸ್.ಬೇಕೂರು.

LEAVE A REPLY

Please enter your comment!
Please enter your name here