ಹೊಸ ಐಟಿ ನಿಯಮ ಅನುಸರಿಸಲು ವಿಫಲ | ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಟ್ವಿಟ್ಟರ್

0
155
Tap to know MORE!

ನವದೆಹಲಿ, ಜೂ.16: ನೂತನ ಐಟಿ ನಿಯಮಗಳ ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್‌ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಟ್ವಿಟ್ಟರ್‌ ಕಾನೂನಿನ ನಿಬಂಧನೆಗಳಿಗೆ ಒಳಗೊಳ್ಳದಿದ್ದರೆ ಅಥವಾ ಕಾನೂನಾತ್ಮಕ ರಕ್ಷಣೆ ಹೊಂದಿಲ್ಲದಿದ್ದರೆ ಎಲ್ಲಾ ಟ್ವೀಟ್‌ಗಳಿಗೂ ಟ್ವಿಟ್ಟರ್‌ ಸಂಸ್ಥೆಯೇ ಹೊಣೆಯಾಗಿರುತ್ತದೆ. ಇದರಿಂದಾಗಿ ಆಕ್ಷೇಪಾರ್ಹ ಟ್ವೀಟ್‌ಗಳ ಹೊಣೆಯೂ ಟ್ವಿಟ್ಟರ್‌ ಸಂಸ್ಥೆಯ ಮೇಲೆ ಇರಲಿದೆ.

ಮೈಕ್ರೋಸಾಫ್ಟ್ ಮಾಜಿ ಸಿಇಒ ಬಿಲ್ ಗೇಟ್ಸ್ – ಮೆಲಿಂಡಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ!

ಫೆಬ್ರವರಿಯಲ್ಲಿ ಸರ್ಕಾರ ಘೋಷಿಸಿದ ಹೊಸ ಐಟಿ ನಿಯಮಗಳಂತೆ ವಾಟ್ಸಾಪ್, ಫೇಸ್‌ಬುಕ್, ಗೂಗಲ್ ಮತ್ತು ಇತರರು ಸೇರಿದಂತೆ ಭಾರತದ ಟೆಕ್ ಕಂಪೆನಿಗಳು ದೇಶದಲ್ಲಿ ಮುಖ್ಯ ಅನುಸರಣೆ ಅಧಿಕಾರಿಯನ್ನು, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆಗಳ ಬಗ್ಗೆ ನೋಡಿಕೊಳ್ಳಲು ಓರ್ವ ಅಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು. ಈ ಮೂವರೂ ಅಧಿಕಾರಿಗಳು ಭಾರತೀಯರು ಮತ್ತು ಕಂಪನಿಗಳ ಉದ್ಯೋಗಿಗಳಾಗಿರಬೇಕು ಎಂದು ನಿಯಮಗಳು ತಿಳಿಸಿವೆ. ಹೊಸ ಐಟಿ ನಿಯಮಗಳನ್ನು ಪಾಲಿಸದಿರುವ ಸಂಸ್ಥೆಗಳು ಮಧ್ಯವರ್ತಿ ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಹಾಗೆಯೇ ಯಾವುದೇ ದೂರು ಬಂದಲ್ಲಿ ಕ್ರಿಮಿನಲ್ ಕ್ರಮ ಎದುರಿಸಬೇಕಾಗಬಹುದು ಎಂದು ಕೇಂದ್ರ ಸರಕಾರ ಹೇಳಿತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನೂತನ ಐಟಿ ನಿಯಮ ಪಾಲನೆಗೆ ಸರ್ಕಾರದ ಬಳಿ ಸಮಯಾವಕಾಶ ಕೋರಿದ ಟ್ವಿಟ್ಟರ್
ಮೊದಲು ಈ ನಿಯಮಗಳು ಗೌಪ್ಯೆತೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದ್ದ ವಾಟ್ಸಾಪ್ ಮತ್ತು ಫೇಸ್‌ಬುಕ್ ಬಳಿಕ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಟ್ವಿಟ್ಟರ್‌ ಮೇ 25 ರಂದು ಜಾರಿಗೆ ಬಂದ ಈ ನಿಯಮ ಪಾಲನೆಗೆ ಹೆಚ್ಚಿನ ಸಮಯವನ್ನು ಕೋರಿದೆ. ನಿಮಯ ಪ್ರಕಾರ ಕಡ್ಡಾಯವಾಗಿ ಈ ಅನುಸರಣೆ ಅಧಿಕಾರಿಯನ್ನು ನೇಮಿಸಲು ಟ್ವಿಟ್ಟರ್‌ ವಿಫಲವಾದ ಕಾರಣ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದೆ.

LEAVE A REPLY

Please enter your comment!
Please enter your name here