ಸರ್ಕಾರದಿಂದ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್?

0
201
Tap to know MORE!

ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆಯ ಮೇಲೆ ನಿಷೇಧ ಹೇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಈ ಕುರಿತು ಬುಧವಾರ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್ ಮಾತನಾಡಿ, ಕಳೆದ ವಾರ ಕಂದಾಯ ಸಚಿವರು, ಗೃಹ ಸಚಿವರ ನೇತೃತ್ವದಲ್ಲಿ ವಿಧಾನ‌ಸೌಧದಲ್ಲಿ ಸಭೆ ನಡೆಯಿತು. ಸದ್ಯ ಕೋವಿಡ್ ಸೋಂಕು ಇಳಿಕೆಯಾಗಿದೆ. ಮುಂದಿ️ನ ದಿನ‌ಗಳಲ್ಲಿ ಎರಡನೇ ಅಲೆ ಭೀತಿ ಇದೆ. ಜತೆಗೆ ಚಳಿಗಾಲವೂ ಇದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಡಿಸೆಂಬರ್‌ 31ರಂದು ಮಧ್ಯರಾತ್ರಿ ನಗರದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌ ನ‌ಡೆಯುತ್ತಿದ್ದ ಸಂಭ್ರಮಾಚರಣೆಗಳು ಈ ವರ್ಷ ನಿಷೇಧಿಸಬೇಕು. ಸಾರ್ವಜನಿಕವಾಗಿ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು. ಜತೆಗೆ ಬಾರ್‌, ಕ್ಲಬ್‌ಗಳಲ್ಲಿ ವಿಶೇಷ ಪಾರ್ಟಿ ಆಯೋಜಿಸಲು ಅನುಮತಿ ನೀಡಬಾರದು ಎಂಬ ಅಭಿಪ್ರಾಯವನ್ನು ನೀಡಿದ್ದೇವೆ ಎಂದರು.

ಇದನ್ನೂ ಓದಿ: ಎಚ್ ವಿಶ್ವನಾಥ್ ಕನಸು ಭಗ್ನ – ಸಚಿವನಾಗಲು ಅನರ್ಹ ಎಂದ ಹೈಕೋರ್ಟ್!

ಸಾಮಾನ್ಯ ದಿ️ನ‌ಗಳಂತೆ ಬಾರ್‌, ರೆಸ್ಟೋರಂಟ್‌ಗೆ ತೆರಳುವುದಕ್ಕೆ, ಊಟ ಉಪಹಾರಗಳಿಗೆ ಯಾವುದೇ ಅಡಚಣೆ ಇರುವುದಿ️ಲ್ಲ. ಈ ಕುರಿತು ಅಂತಿಮ ತೀರ್ಮಾವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹೊಸ ವರ್ಷ ಸಂಭ್ರಮಾಚರಣೆಗಳು ಸಂಪೂರ್ಣ ನಿಷೇಧಿಸಬೇಕು ಎಂದು ಸರ್ಕಾರಮಟ್ಟದ ಕೋವಿಡ್ ನಿರ್ವಹಣೆ ತಜ್ಞರ ತಾಂತ್ರಿಕ ಮಂಡಳಿ ಸರ್ಕಾರಕ್ಕೆ ಸಲಹೆ ನೀಡಿದೆ. ಡಿ.26 ರಿಂದ ಜ.2 ರವರೆಗೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುುಮತಿ ನೀಡಬಾರದು ಎಂದು ತಿಳಿಸಿದೆ. ಈ ಮೂಲಕ ಸಂಭ್ರಮಾಚರಣೆಗಳಿಗೆ ಸಂಪೂರ್ಣ ಬ್ರೇಕ್‌ ಬೀಳುವ ಸಾಧ್ಯತೆ ಹೆಚ್ಚಿದೆ.

LEAVE A REPLY

Please enter your comment!
Please enter your name here