1ನೇ ತರಗತಿಯಿಂದಲೇ ಆನ್ಲೈನ್ ತರಗತಿ ನಡೆಸಲು ಸರ್ಕಾರ ಸಮ್ಮತಿ!

0
192
Tap to know MORE!

ಬೆಂಗಳೂರು: ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡುವ ಕುರಿತು ರಾಜ್ಯ ಸರ್ಕಾರವು ಹೊಸ ತಾತ್ಕಾಲಿಕ ಮಾರ್ಗಸೂಚಿಗಳನ್ನು ಹೊರತಂದಿದೆ. ಈ ಮಾರ್ಗಸೂಚಿಗಳು ಪ್ರತಿ ಶಾಲೆಗೆ ಅನ್ವಯಿಸುತ್ತವೆ – ರಾಜ್ಯ ಖಾಸಗಿ ಮತ್ತು ಸರ್ಕಾರಿ ಪಠ್ಯಕ್ರಮ, ಸಿಬಿಎಸ್‌ಇ ಮತ್ತು ಐಸಿಎಸ್‌ಇ.

1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ, ಶಿಕ್ಷಕರು ದಿನಕ್ಕೆ 30-45 ನಿಮಿಷಗಳ ಎರಡು ಅವಧಿಗಳನ್ನು ಪರ್ಯಾಯ ದಿನಗಳಲ್ಲಿ ನಡೆಸಬಹುದು. ಈ ಅವಧಿಯು ವಾರದಲ್ಲಿ ಮೂರು ದಿನ ಮಾತ್ರ ನಡೆಸಬಹುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಹಾಜರಾಗುತ್ತಾರೆ. ಇದನ್ನು ಸಿಂಕ್ರೊನಸ್ ಬೋಧನೆ ಎಂದೂ ಕರೆಯಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ, ದಿನಕ್ಕೆ ಎರಡು ಅವಧಿಗಳಂತೆ ಸಿಂಕ್ರೊನಸ್ ಬೋಧನೆಯನ್ನು ನಡೆಸಬಹುದು, ಪ್ರತಿ ಅವಧಿಯು 45 ನಿಮಿಷಗಳನ್ನು ಮೀರಬಾರದು ಹಾಗೂ ವಾರದಲ್ಲಿ ಐದು ದಿನಗಳು ತರಗತಿಯನ್ನು ನಡೆಸಬಹುದು.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಅವಧಿಯು 30-45 ನಿಮಿಷಗಳವರೆಗೆ ಶಿಕ್ಷಕರು ತೆಗೆದುಕೊಳ್ಳಬಹುದು. ಇವರಿಗೆ ಶಿಕ್ಷಕರು ದಿನಕ್ಕೆ ನಾಲ್ಕು ಅವಧಿಗಳನ್ನು, ವಾರದಲ್ಲಿ ಐದು ದಿನಗಳವರೆಗೆ ನಡೆಸಬಹುದು.

ಈ ಮಾರ್ಗಸೂಚಿಗಳ ಪ್ರಕಾರ, ಅಂಗನವಾಡಿ ಶಿಕ್ಷಕರು ವಾರಕ್ಕೆ ಒಂದು ಆನ್‌ಲೈನ್ ಅವಧಿಯನ್ನು ಮಾತ್ರ ನಡೆಸಬಹುದು. ಅದು 30 ನಿಮಿಷಗಳನ್ನು ಮೀರಬಾರದು. ಅವರಿಗೆ ಮಾರ್ಗದರ್ಶನ ನೀಡಲು ಪೋಷಕರೊಂದಿಗೆ ತರಗತಿಗಳನ್ನು ನಡೆಸಬಹುದು.

ತಜ್ಞರ ಸಮಿತಿಯು ಸಮಗ್ರ ಆನ್‌ಲೈನ್ ಬೋಧನಾ ನೀತಿಯನ್ನು ತರುವವರೆಗೆ ಮಾತ್ರ ಈ ಮಾರ್ಗಸೂಚಿಗಳು ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ತಜ್ಞರ ಸಮಿತಿ ತನ್ನ ವರದಿಯನ್ನು ಸಲ್ಲಿಸುವವರೆಗೆ ಮಧ್ಯಂತರ ಪರಿಹಾರವನ್ನು ತರಲು ಕರ್ನಾಟಕ ಹೈಕೋರ್ಟ್ ರಾಜ್ಯವನ್ನು ಕೇಳಿದ ಕೆಲ ದಿನಗಳ ನಂತರ ಈ ನಿರ್ಧಾರ ಬಂದಿದೆ. ಆನ್‌ಲೈನ್ ತರಗತಿಗಳ ನಿಷೇಧವನ್ನು ಪ್ರಶ್ನಿಸಿ, ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ ಮನವಿಯ ನಂತರ ಸೀಮಿತ ಅವಧಿಯ ಆನ್ಲೈನ್ ತರಗತಿಗಳನ್ನು ನಡೆಸಲು ರಾಜ್ಯಕ್ಕೆ ತಿಳಿಸಲಾಯಿತು.

LEAVE A REPLY

Please enter your comment!
Please enter your name here