1000 ಬೆಡ್‌ಗಳ ಉಚಿತ ಕೋವಿಡ್ ಕೇರ್ ಸೌಲಭ್ಯಗಳನ್ನು ಒದಗಿಸಲು ಮುಂದಾದ ರಿಲಯನ್ಸ್ ಫೌಂಡೇಶನ್

0
246
Tap to know MORE!

ಅಹಮದಾಬಾದ್, ಏಪ್ರಿಲ್ 29: ರಿಲಯನ್ಸ್ ಫೌಂಡೇಷನ್ ಜಾಮ್‌ನಗರದಲ್ಲಿ ಆಮ್ಲಜನಕ ಪೂರೈಕೆಯೊಂದಿಗೆ 1,000 ಬೆಡ್‌ಗಳ ಕೋವಿಡ್ ಕೇರ್ ಸೌಲಭ್ಯಗಳನ್ನು ಸ್ಥಾಪಿಸುತ್ತಿದೆ. ಇಲ್ಲಿ ಎಲ್ಲ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಗುವುದು ಮತ್ತು ಸೌಲಭ್ಯ ಸ್ಥಾಪನೆಯ ಹಾಗೂ ಅದನ್ನು ನಡೆಸುವ ಸಂಪೂರ್ಣ ವೆಚ್ಚಗಳನ್ನು ರಿಲಯನ್ಸ್ ಭರಿಸಲಿದೆ.

ಜಾಮ್‌ನಗರದ ಸರ್ಕಾರಿ ದಂತವೈದ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇನ್ನು ಒಂದು ವಾರದಲ್ಲಿ 400 ಹಾಸಿಗೆಗಳ ಕೋವಿಡ್ ಕೇರ್ ಸೌಲಭ್ಯವನ್ನು ಆರಂಭಿಸಲಾಗುವುದು. ಬಳಿಕ, ಮುಂದಿನ ಎರಡು ವಾರಗಳ ಸಮಯದಲ್ಲಿ ಜಾಮ್‌ನಗರದ ಬೇರೊಂದು ಸ್ಥಳದಲ್ಲಿ 600 ಹಾಸಿಗೆಗಳ ಮತ್ತೊಂದು ಕೋವಿಡ್ ಕೇರ್ ಸೌಲಭ್ಯ ಕಾರ್ಯಾರಂಭ ಮಾಡಲಿದೆ.

ಇದನ್ನೂ ಓದಿ: ಭಾರತಕ್ಕೆ ವೆಂಟಿಲೇಟರ್, ಆಕ್ಸಿಜನ್ ಕಂಟೇನರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಒದಗಿಸುವುದಾಗಿ ಫ್ರಾನ್ಸ್ ಘೋಷಣೆ!

ಕೋವಿಡ್ ರೋಗಿಗಳಿಗಾಗಿ ರಿಲಯನ್ಸ್ ಕೈಗೊಂಡಿರುವ ಕ್ರಮಗಳೇನು?
ಅಗತ್ಯ ಮಾನವಶಕ್ತಿ, ವೈದ್ಯಕೀಯ ಸವಲತ್ತು, ಸಾಧನಗಳು ಮುಂತಾದವುಗಳನ್ನು ರಿಲಯನ್ಸ್ ಒದಗಿಸಲಿದೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ಸಿಬ್ಬಂದಿ ಇರುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಆಸ್ಪತ್ರೆಯು ಜಾಮ್‌ನಗರ, ಖಾಂಭಾಲಿಯಾ, ದ್ವಾರಕಾ, ಪೋರ್‌ಬಂದರ್ ಮತ್ತು ಸೌರಾಷ್ಟ್ರದ ಇತರೆ ಪ್ರದೇಶಗಳ ಜನರಿಗೆ ಅನುಕೂಲ ಕಲ್ಪಿಸಲಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ಭಾರತವು ಕೋವಿಡ್ ಎರಡನೆಯ ವಿರುದ್ಧ ಹೋರಾಡುತ್ತಿರುವಾಗ, ನಮಗೆ ಸಾಧ್ಯವಾದ ಪ್ರತಿ ಮಾರ್ಗದಲ್ಲಿಯೂ ಸಹಾಯ ಮಾಡಲು ಬದ್ಧರಾಗಿದ್ದೇವೆ. ಹೆಚ್ಚುವರಿ ವೈದ್ಯಕೀಯ ಸವಲತ್ತುಗಳು ಈ ಸಮಯದ ಅತ್ಯಂತ ಮಹತ್ವದ ಅಗತ್ಯಗಳಲ್ಲಿ ಒಂದು. ಗುಜರಾತ್‌ನ ಜಾಮ್‌ನಗರದಲ್ಲಿ ಕೋವಿಡ್ ರೋಗಿಗಳಿಗಾಗಿ ಆಕ್ಸಿಜನ್ ಸಹಿತ 1000 ಹಾಸಿಗೆಗಳ ಆಸ್ಪತ್ರೆಯನ್ನು ರಿಲಯನ್ಸ್ ಫೌಂಡೇಷನ್ ಸ್ಥಾಪಿಸುತ್ತಿದೆ. ಮೊದಲ ಹಂತದ 400 ಹಾಸಿಗೆಗಳು ಒಂದು ವಾರದಲ್ಲಿ ಹಾಗೂ ಇನ್ನೂ 600 ಹಾಸಿಗೆಗಳು ಮತ್ತೊಂದು ವಾರದಲ್ಲಿ ಸಿದ್ಧವಾಗಲಿವೆ”.

”ಆಸ್ಪತ್ರೆಯು ಉಚಿತವಾಗಿ ಗುಣಮಟ್ಟದ ಆರೈಕೆ ನೀಡಲಿದೆ. ಈ ಪಿಡುಗು ಆರಂಭವಾದ ಸಮಯದಿಂದಲೂ ರಿಲಯನ್ಸ್ ಫೌಂಡೇಷನ್, ನಮ್ಮ ಭಾರತೀಯ ಜತೆಗಾರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಅಮೂಲ್ಯ ಜೀವಗಳನ್ನು ಕಾಪಾಡಲು ನಾವು ಅವಿರತ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ. ನಾವು ಜತೆಗೂಡಿ ಈ ಹೋರಾಟದಲ್ಲಿ ಗೆಲ್ಲಬಹುದು ಮತ್ತು ಗೆಲ್ಲುತ್ತೇವೆ”ಎಂದು ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ ಅಂಬಾನಿ ತಿಳಿಸಿದ್ದಾರೆ.(ಐಎಎನ್ಎಸ್)

LEAVE A REPLY

Please enter your comment!
Please enter your name here