BIG UPDATE| ವಾಟ್ಸಾಪ್‌ನಲ್ಲಿ ಕಾಣಿಸಿಕೊಂಡ ವಾಟ್ಸಾಪ್ ಕಂಪನಿಯ ಸ್ಟೇಟಸ್! ಹೊಸ ನೀತಿ ಒಪ್ಪದಿದ್ದರೆ ಏನೂ ಅಡ್ಡಿಯಿಲ್ಲ

0
65

ನವದೆಹಲಿ ಜ.17: ಬಳಕೆದಾರರ ಮಾಹಿತಿಯನ್ನು ಮಾತೃ ಸಂಸ್ಥೆ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ನಿರ್ಧಾರವನ್ನು ವಾಟ್ಸಾಪ್‌ ಸಂಸ್ಥೆ 3 ತಿಂಗಳು ಮುಂದೂಡಿದೆ. ಹೀಗಾಗಿ ಹೊಸ ನೀತಿ ಒಪ್ಪದೇ ಹೋದರೂ, ಫೆ.8ರಿಂದ ವಾಟ್ಸಾಪ್‌ ಆ್ಯಪ್‌ ನಿಷ್ಕ್ರಿಯ ಆಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಬಳಕೆದಾರರ ಖಾಸಗಿ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವ ಈ ನೀತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವು ಜಾಗತಿಕ ಉದ್ಯಮಿಗಳೇ ಈ ನೀತಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು. ಅಲ್ಲದೆ ವಾಟ್ಸಾಪ್‌ ರದ್ದು ಮಾಡಿ ಸಿಗ್ನಲ್‌, ಟೆಲಿಗ್ರಾಂನಂಥ ಆ್ಯಪ್‌ ಬಳಕೆಗೆ ಕರೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ವಾಟ್ಸಾಪ್‌ ತನ್ನ ಹೊಸ ನೀತಿ ಜಾರಿಯನ್ನು 3 ತಿಂಗಳು ಮುಂದೂಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ನಮ್ಮ ಹೊಸ ನೀತಿಯ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟುಗೊಂದಲ ಮೂಡಿದೆ. ವಾಟ್ಸಾಪ್‌ನಲ್ಲಿ ಗ್ರಾಹಕರ ಖಾಸಗಿತನ ಮತ್ತು ಭದ್ರತೆ ಬಗ್ಗೆ ನಾವು ಇನ್ನಷ್ಟುಅರಿವು ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಗೊಂದಲ ನಿವಾರಿಸಲು ನಾವು ಸಾಕಷ್ಟುಕ್ರಮ ಕೈಗೊಳ್ಳಲಿದ್ದೇವೆ. ಹೀಗಾಗಿಯೇ ನಾವು ಹೊಸ ಬಿಸಿನೆಸ್‌ ಆ್ಯಪ್ಷನ್‌ ಅನ್ನು ಮೇ 15ರಿಂದ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಅಲ್ಲಿಯವರೆಗೂ ಹಿಂದಿನ ನೀತಿಯೇ ಮುಂದುವರೆಯಲಿದೆ. ವಾಟ್ಸಾಪ್‌ ಖಾತೆ ರದ್ದಾಗದು ಎಂದು ತಿಳಿಸಿದೆ.

ಏಕಾಏಕಿ ಕಾಣಿಸಿಕೊಂಡ ವಾಟ್ಸಾಪ್ ಸ್ಟೇಟಸ್!

ಎಲ್ಲಾ ಬಳಕೆದಾರರ ಸ್ಟೇಟಸ್‌ನಲ್ಲಿ ವಾಟ್ಸಾಪ್ ಕಂಪನಿಯ ಸ್ಟೇಟಸ್ ಗೋಚರವಾಗಿತ್ತು! ಅದರಲ್ಲಿ ಖಾಸಗೀತನಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಕಂಪನಿಯು ಸ್ಪಷ್ಟಪಡಿಸಿತ್ತು.

LEAVE A REPLY

Please enter your comment!
Please enter your name here