ಪಂಜ : ಶ್ರೀ ವಿಠೋಬ ಭಜನಾ ಮಂಡಳಿಯ ನೂತನ ಮಂದಿರ ಉದ್ಘಾಟನೆ

0
96
Tap to know MORE!

ಮುಲ್ಕಿ ಜ.18 : ಪಂಜ ಕೊಯಿಕುಡೆ ಶ್ರೀ ವಿಠೋಬ
ಭಜನಾ ಮಂಡಳಿಯ ನೂತನ ಭಜನಾ ಮಂದಿರದ ಉದ್ಘಾಟನಾ ಸಮಾರಂಭ ಸೋಮವಾರ ಬೆಳಗ್ಗೆ ಪಂಜ ಶ್ರೀ ಮಹಾಗಣಪತಿ ಮಂದಿರದ ಶ್ರೀ ಸುರೇಶ್ ಭಟ್ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗೆ ಪುಣ್ಯಾರ್ಚನೆ, ತುಳಸಿ ಪ್ರತಿಷ್ಠೆ, ದ್ವಾರ ಪೂಜೆ,
ಶ್ರೀ ದುರ್ಗಾ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಭಜನೆ,
ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಇದನ್ನೂ ಓದಿ: 8ನೇ ವಯಸ್ಸಿನಲ್ಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ರಾಷ್ಟ್ರೀಯ ಚಾಂಪಿಯನ್ ಚಿರಾಗ್

ಮುಂಬಯಿ ಉದ್ಯಮಿ ರಘುರಾಮ ಶೆಟ್ಟಿಯವರು ಶ್ರೀ ವಿಠೋಬ ದೇವರ ನಂದಾದೀಪ ಬೆಳಗಿದರು. ಶ್ರೀ ವಿಠೋಬ ಭಜನಾ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಪಂಜದಗುತ್ತು, ಗೌರವಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಪಂಜದಗುತ್ತು ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಮುಂಬೈ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ತೋಕೂರು: ಉದ್ಯೋಗ ಖಾತರಿ ಯೋಜನೆಯ ಅಡಿ ನೀರು ಉಳಿಸಲು ಅಡ್ಡ ಹಲಗೆ ಹಾಕುವ ಕಾರ್ಯ

LEAVE A REPLY

Please enter your comment!
Please enter your name here