ಪಾವಂಜೆ : ದೇವಾಡಿಗ ಸಮಾಜ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

0
103
Tap to know MORE!

ಪಾವಂಜೆ ಜ.18: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಂಗವೇದಿಕೆಯಲ್ಲಿ ದೇವಾಡಿಗ ಸಮಾಜ ಸೇವಾ ಸಮಾಜ (ರಿ )ಪಾವಂಜೆ ಇದರ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಮತ್ತು ಶನಿ ಪೂಜೆಯು ನಡೆಯಿತು.

ಈ ಸಂದರ್ಭ, ಸಮಾಜದ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು ಹಾಗೂ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು. ಬಳಿಕ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ವಿತರಣಾ ಸಮಾರಂಭ ನಡೆಯಿತು.

ಇದನ್ನೂ ಓದಿ: ಮಂಜೇಶ್ವರ : ನಲಿಕೆಯವರ ಸಮಾಜ ಸೇವಾ ಸಂಘದ ವಲಯ ಸಭೆ

ಕಾರ್ಯಕ್ರಮದ ಪ್ರಾರಂಭದಲ್ಲಿ ನಮ್ಮನ್ನಗಲಿದ ದೇವಾಡಿಗ ಸಮಾಜದ ದಿಟ್ಟ , ಸದಾ ದೇವಾಡಿಗರ ಅಭ್ಯುದಯದ ಬಗ್ಗೆ ಕನಸು ಕಾಣುತ್ತಿದ್ದ ವಸಂತ ಕುಮಾರ್ ನಿಟ್ಟೆ ಇವರ ಆತ್ಮಕ್ಕೆ ಚಿರಶಾಂತಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಸಂದರ್ಭ ಸಂಘದ ಅಧ್ಯಕ್ಷರಾದ ರಾಮದಾಸ್ ಪಾವಂಜೆ, ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷ ರವಿ ದೇವಾಡಿಗ, ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ, ಉಪಾಧ್ಯಕ್ಷ ಶ್ರೀ ಜನಾರ್ಧನ ಬಾರ್ಕೂರ್ ಮತ್ತು ವಿಶ್ವಸ್ಥರು ಶ್ರೀ ಏಕನಾಥೇಶ್ವರಿ ದೇವಸ್ಥಾನ, ಶ್ರೀ ನರಸಿಂಹ ನೆಲ್ಲಿಬೆಟ್ಟು ಮತ್ತು ಶ್ರೀ ರವಿ ತಲ್ಲೂರು ಉಪಾಧ್ಯಕ್ಷರುಗಳು ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಶ್ರೀ ಜನಾರ್ಧನ ಪಡುಪಣಂಬೂರು ಕಟ್ಟಡ ಸಮಿತಿ, ಶ್ರೀ ಜೀವನಪ್ರಕಾಶ್ ಕಾಮೆರೊಟ್ಟು ಯುವ ವೇದಿಕೆ, ಶ್ರೀಮತಿ ವಿಮಲ ಕೆ ದೇವಾಡಿಗ ಮಹಿಳಾ ವೇದಿಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಸಭೆಯಲ್ಲಿ ಸಂಘದ ಸರ್ವ ಸದಸ್ಯರು ಹಾಜರಿದ್ದರು.

ಪಾವಂಜೆ : “ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ” ಲೋಕಾರ್ಪಣೆ

LEAVE A REPLY

Please enter your comment!
Please enter your name here