BIG NEWS | ಸಚಿವ ಸಂಪುಟ ವಿಸ್ತರಣೆ | ಹಲವರ ಖಾತೆ ಅದಲು ಬದಲು!

0
124
Tap to know MORE!

ಬೆಂಗಳೂರು ಜ.21: ಬಹಳ ದಿನಗಳವರೆಗೆ ಬಗೆಹರಿಯದೇ ಇದ್ದ ಸಚಿವ ಸಂಪುಟ ವಿಸ್ತರಣೆಯನ್ನು ಮಾಡಿ ಮುಗಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ನೂತನ ಸಚಿವರ ಖಾತೆಯನ್ನೂ ಹಂಚಿದ್ದಾರೆ.‌ ಆದರೆ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಹಾಲಿ ಸಚಿವರ ಖಾತೆಯಲ್ಲೂ ಕೆಲ ಬದಲಾವಣೆ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹೊರಡಿಸಿರುವ ಆದೇಶದ ಪ್ರಕಾರ ಸಚಿವರು ಮತ್ತು ಅವರ ಖಾತೆಗಳು ಈ ಕೆಳಕಂಡಂತಿವೆ.

  • ಬಸವರಾಜ್ ಬೊಮ್ಮಾಯಿ – ಗೃಹ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ
  • ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ
  • ಆನಂದ್ ಸಿಂಗ್ – ಪ್ರವಾಸೋದ್ಯಮ, ಪರಿಸರ
  • ಪ್ರಭು ಚೌಹಾಣ್ -ಪಶು ಸಂಗೋಪನೆ
  • ನಾರಾಯಣ್ ಗೌಡ – ಕ್ರೀಡೆ, ಹಜ್ಜ್ ಮತ್ತು ವಕ್ಫ್ಸಿ
  • .ಸಿ. ಪಾಟೀಲ್ – ಸಣ್ಣ ಕೈಗಾರಿಕಾ, ವಾರ್ತಾ ಇಲಾಖೆ
  • ಕೋಟಾ ಶ್ರೀನಿವಾಸ್ ಪೂಜಾರಿ -ಮುಜುರಾಯಿ ಮತ್ತು ಹಿಂದುಳಿದ ವರ್ಗ
  • ಡಾ.‌ ಆರ್. ಸುಧಾಕರ್ – ಆರೋಗ್ಯ
  • ಗೋಪಾಲಯ್ಯ- ತೋಟಗಾರಿಕೆ ಮತ್ತು ಸಕ್ಕರೆ
  • ಸಿ.ಪಿ. ಯೋಗೇಶ್ವರ್ – ಸಣ್ಣ ನೀರಾವರಿ
  • ಆರ್. ಶಂಕರ್ – ಪೌರಾಡಳಿತ, ರೇಷ್ಮೆ
  • ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ
  • ಎಂಟಿಬಿ ನಾಗರಾಜ್ – ಅಬಕಾರಿ
  • ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಸರಬರಾಜು
  • ಅರವಿಂದ್ ಲಿಂಬಾವಳಿ- ಅರಣ್ಯ
  • ಎಸ್. ಅಂಗಾರ – ಮೀನುಗಾರಿಕೆ, ಬಂದರು

ಖಾತೆ ಹಂಚಿಕೆಯ ಬಳಿಕ ಯಡಿಯೂರಪ್ಪ ಅವರಿಗೆ ಹೊಸ ತಲೆಬಿಸಿ ಶುರುವಾಗಿದೆ. ಕೊಟ್ಟ ಖಾತೆ ಜವಬ್ದಾರಿ ತೆಗೆದುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ತಮಗೆ ಇಂಥದೇ ಖಾತೆ ಬೇಕೆಂದು ಕೇಳುತ್ತಿದ್ದಾರೆ ಎನ್ನಲಾಗಿದೆ.

ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಖಾತೆ ಕೊಡಲಾಗಿದ್ದು ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವಂತೆ ಕೇಳುತ್ತಿದ್ದಾರೆ.‌ ಈಗಾಗಲೇ ಸಿಎಂ ಬಿಎಸ್ವೈ ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಅರಣ್ಯ ಖಾತೆ ಸಿಕ್ಕಿರುವ ಅರವಿಂದ ಲಿಂಬಾವಳಿ ಕೂಡ ಖಾತೆ ಬಗ್ಗೆ ಖ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here