ತೋಕೂರು: 31ನೇ ವರ್ಷದ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

0
100

“ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಕ್ರೀಡೆಗಳನ್ನು ಆಡುವುದರಿಂದ ದೃಢ ಶರೀರದ ಜೊತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ” ಎಂದು ಉದ್ಯಮಿ ರಮೇಶ್ ದೇವಾಡಿಗ ತೋಕೂರು ಹೇಳಿದರು.

ಮೂಲ್ಕಿ ಬಳಿಯ, ಹಳೆಯಂಗಡಿ ತೋಕೂರು ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲಾ ಮೈದಾನದಲ್ಲಿ ಭಾನುವಾರ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ), ಆಶ್ರಯದಲ್ಲಿ ನಡೆದ ತೋಕೂರು ದಿ. ಬೂಬ ದೇವಾಡಿಗರ ಸ್ಮರಣಾರ್ಥ 31ನೇ ವರ್ಷದ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: ತೋಕೂರು: ಯೆನೆಪೋಯ ವಿವಿ ವತಿಯಿಂದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಸಿ.ಎ ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಹಣಾಧೀಕಾರಿ ಪಿ. ಸಿ. ಕೋಟ್ಯಾನ್ ಇವರು ವಹಿಸಿದ್ದರು. ವೇದಿಕೆಯಲ್ಲಿ ಪತ್ರಕರ್ತ ರಮೇಶ್ ಅಮೀನ್, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾನನಾ ಸಮಿತಿಯ ಸದಸ್ಯರಾದ ಯೋಗೀಶ್ ಕೋಟ್ಯಾನ್, ಪಡುಪಣಂಬೂರು ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾದ ವಿನೋದ್ ಕುಮಾರ್ ಸಸಿಹಿತ್ಲು, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರು ಹೇಮನಾಥ್ ಅಮೀನ್ ಹಾಗೂ ಸಂತೋಷ್ ಕುಮಾರ್, ಸಂಸ್ಥೆಯ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ. ಕೆ., ಅಧ್ಯಕ್ಷರು ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು.

ಈ ಕ್ರಿಕೆಟ್ ಪಂದ್ಯಾಟದಲ್ಲಿ, ಎಸ್. ಎಸ್. ಎಮ್. ಜಿ. ತೋಕೂರು(ಎ)ಹಾಗೂ (ಬಿ) , ದುರ್ಗಾ ಕೆ. ಎಫ್. ಸಿ. ,ಯುವಕ ಮಂಡಲ ಸಸಿಹಿತ್ಲು, ಸಾಗರ್ ಸಾಗ್(ಎ )(ಬಿ), ಕೋಸ್ಟಲ್ ಮುಕ್ಕ, ಪಿ.ಸಿ.ಪಿ. ಪಡುಪಣಂಬೂರು, ಓಂಕಾರೇಶ್ವರಿ ತೋಕೂರು, ಓಂ ಪಾವಂಜೆ(ಎ )(ಬಿ), ಶ್ರೀ ಸಾಯಿ ಚೆಕ್ ಪೋಸ್ಟ್ ಮುಕ್ಕ, ಸಿಕ್ಸರ್ ಕದಿಕೆ, ಮಾರುತಿ ಮುಕ್ಕ, ಎಸ್. ಎಸ್. ಸಿ. ಸಿ. ಮುಕ್ಕ, ಗಜಾನನ ತೋಕೂರು, ಫ಼್ರೆಂಡ್ಸ್ ಇಂದಿರಾನಗರ, ನಂದಿನಿ ಆರಂದ್, ಆಂಜನೇಯ ಸಸಿಹಿತ್ಲು ಭಾಗವಹಿಸಿದವು.

ಎಲ್ಲಾ ತಂಡದ ಕಪ್ತಾನರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ವೀಕ್ಷಕ ವಿವರಣೆಗಾರರಾಗಿ ಕಬೀರ್ ಸಾಗ್, ಶ್ರೀಶ ಐಕಳ,ಸಹಕರಿಸಿದರು. ಕ್ಲಬ್ ನ ಅಧ್ಯಕ್ಷರಾದ, ಶ್ರೀ ಸಂತೋಷ್ ದೇವಾಡಿಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು. ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here