ಪಕ್ಷಿಕೆರೆ : ವಿನಾಯಕ ಮಿತ್ರ ಮಂಡಳಿ ವತಿಯಿಂದ “ಆರೋಗ್ಯ ನಿಧಿ ಧನ್ವಂತರಿ” ಉದ್ಘಾಟನೆ

0
112
Tap to know MORE!

ಪಕ್ಷಿಕೆರೆ: ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ, ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಆರೋಗ್ಯ ನಿಧಿ ಧನ್ವಂತರಿಯ ಉದ್ಘಾಟನಾ ಸಮಾರಂಭ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ ವಹಿಸಿದ್ದರು. ವೇದಮೂರ್ತಿ ಪಂಜ ವಾಸುದೇವ ಭಟ್ ಕಾರ್ಯಕ್ರಮಕ್ಕೆ ಶುಭಾಶಂಶನೆ ನೀಡಿದರು. ಧನ್ವಂತರಿ ಆರೋಗ್ಯ ನಿಧಿಯ ಉದ್ಘಾಟನೆಯನ್ನು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರು ಸೀತಾರಾಮ್ ಶೆಟ್ಟಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಕ್ಷಿಕೆರೆ ಇದರ ಗೌರವಾಧ್ಯಕ್ಷರಾದ ಶಾಂತರಾಮ್ ಶೆಟ್ಟಿ ಇವರು ನೆರವೇರಿಸಿದರು.

ಇದನ್ನೂ ಓದಿ: ಪಕ್ಷಿಕೆರೆ : ಸ್ವಚ್ಛತೆಯ ಜನಜಾಗೃತಿಗಾಗಿ ಬೈಕ್ ರ್ಯಾಲಿ

ಈ ಸಂದರ್ಭದಲ್ಲಿ 267 ದಾನಿಗಳಿಂದ ಸಂಗ್ರಹಿಸಿದ ₹.1,42,773/- ಧನ್ವಂತರಿ ಸಹಾಯ ನಿಧಿಯನ್ನು ಜ್ಞಾನೇಶ್ ಎಂಬ ಪುಟ್ಟ ಮಗುವಿಗೆ ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳೂರು ಹಸ್ತಾಂತರಿಸಿದರು. ಹಾಗೆಯೇ ರಾಮ ಪ್ರೆಂಡ್ಸ್ ಕಟೀಲು ಇವರು ಸಂಗ್ರಹಿಸಿದ ನಿಧಿ ಮೊತ್ತವನ್ನು ಜ್ಞಾನೇಶ್‌ಗೆ ಹಸ್ತಾಂತರಿಸಲಾಯಿತು.

ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶುಭಲತಾ ಶೆಟ್ಟಿ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿಯಾದ ಶ್ರೀ ರಘುವೀರ್ ಸೂಟರ್ ಪೇಟೆ ಉಪಸ್ಥಿತರಿದ್ದರು. ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಧನಂಜಯ ಪಿ ಶೆಟ್ಟಿಗಾರ್ ಅಥಿತಿಗಳನ್ನು ಪ್ರಸ್ಥಾವನೆಯ ಮೂಲಕ ಸ್ವಾಗತಿಸಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅರುಣ್ ಪ್ರದೀಪ್ ಡಿಸೋಜ ಬಂದ ಅಥಿತಿಗಳಿಗೆ ಧನ್ಯವಾದ ಸಮರ್ಪಿಸಿದರು. ಕೆಮ್ರಾಲ್ ಗ್ರಾಮ ಪಂಚಾಯತಿಯ ನೂತನ ಚುನಾಯಿತ ಜನಪ್ರತಿನಿಧಿಗಳು, ಮಂಡಳಿಯ ಅಧ್ಯಕ್ಷರಾದ ಶ್ರೀ ಯಜ್ಞೇಶ್ ಪಿ ಶೆಟ್ಟಿಗಾರ್, ಸಾರ್ವಜನಿಕರು ಹಾಗೂ ಮಂಡಳಿಯ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here