ನಮಗೂ ಫ್ರೀಡಂ ಬೇಕಿದೆ..!

0
5437
Tap to know MORE!

ಮೊನ್ನೆ ಗೆಳತಿಯೊಬ್ಬಳು ಯಾವೂದೋ ಶಾಪಿಂಗ್ ಮಾಲ್ ಗೆ ಹೊಗಿದ್ದಾಗ ಸಿಕ್ಕಿದ್ದಳು , ಹೀಗೆ ಮಾತನಾಡುತ್ತಿದ್ದಾಗ ರವಿ ಲೈಫ್ ಹೇಗಿದೆ ಎಂದು ಕೇಳಿದಳು ಅದಕ್ಕೆ ನಾನು‎ ಇಟ್ಸ್ ವಂಡರ್ ಫುಲ್ ಅಂದೆ . ಅದಕ್ಕೆ ನೀವಾದರೂ ಹುಡುಗರು ನಿಮಗೆ ಫ್ರಿಂಡಮ್ ಇದೆ ಮದುವೆಯಾದ್ರು ಆಗದೆ ಇದ್ರು ಖುಷಿ ಖುಷಿಯಾಗಿ ಇರ್ತಿರಿ ಯಾವುದಕ್ಕೂ ಟೆಕ್ಷನ್ ಮಾಡುವ ಪ್ರಮೇಯ ಇಲ್ಲ ನಾವು ಹೋದ ಜನ್ಮದಲ್ಲಿ ಪಾಪ ಮಾಡಿದೇವೂ ಏನೋ ಗೊತ್ತಿಲ್ಲ ಈ ಜನ್ಮದಲ್ಲಿ ಹುಡುಗಿಯಾಗಿ ಹುಟ್ಟಿದೆವೆ , ಮದುವೆಯ ಮೊದಲು ಮನೆಯರ ಶಿಸ್ತು, ಮದುವೆಯ ನಂತರ ಗಂಡನ ಆಡಿಯಾಳಾಗಿ ದಾಸ್ಯದಿಂದ ಇರಬೇಕು ಇವರೆಲ್ಲ ಮಧ್ಯೆ ಸಮಾಜ ನಮ್ಮನ್ನು ಸಿಸಿ ಕ್ಯಾಮರಾದ ಹಾಗೇ ಹದ್ದಿನ ಕಣ್ಣನ್ನು ಇಟ್ಟಿರುತ್ತದೆ. ಇವುಗಳ ನಡುವೆ ಜೀವನವೆಂಬುವುದು ದುಸ್ಥರವಾಗಿದೆ ಎಂದು ತನ್ನ ಮನಸ್ಸಿನ ನೋವನ್ನು ತೋಡಿಕೊಂಡಳು.

ಯಸ್ ಅವಳು ಹೇಳಿದ ಮಾತುಗಳನ್ನು ಒಪ್ಪಿಕೊಂಡರು ಆದರೆ ಅವಳೆಂದತ್ತೆ ನಾವು ಫ್ರೀ ಬರ್ಡ್ ಅಲ್ಲ ನಮಗೂ ಕೆಲವು ರಿಟ್ರಿಕ್ಷನ್ , ಜವಬ್ದಾರಿ ಮತ್ತು ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರಿಗೆ ಸಮಾಜವೆಂಬ ಸಿಸಿಕ್ಯಾಮಾರದ ಕಣ್ಣುಗಳು ನಮ್ಮ ನಡೆಯನ್ನು ಗಮನಿಸುತ್ತ ಇರುತ್ತದೆ ಎಲ್ಲಿಯಾದರೂ ತಪ್ಪಿ ಹೋದರೆ ರಸ್ತೆಯ ಮಧ್ಯದಲ್ಲಿ ಬಲವಾದ ಏಟನು ಕೊಟ್ಟು ಮೇಲೆ ಏಳಾದ ರೀತಿ ಮಾಡುತ್ತದೆ .
ಮುಖ್ಯವಾಗಿ ಬಡತನ ಮತ್ತು ಮದ್ಯಮ ವರ್ಗದ ನಡುವಿನ ಗೆರೆಯಲ್ಲಿ ನೇತಾಡುವ ನಮಗೆ ಬದುಕಿನ ಪ್ರತಿಯೊಂದು ಕ್ಷಣವು ಸವಾಲಿನದ್ದೆ ಆಗಿದೆ ಕೆಲವೊಂದು ಅನಿವಾರ್ಯತೆಗಳು ನಮ್ಮನ್ನು ನಮ್ಮ ಸಹಪಾಠಿ , ಸಹೋದ್ಯೋಗಿಗಳು ಹಾಗೂ ಸಮಾಜದ ಜೀವನ ಶೈಲಿಯನ್ನು ನಕಲು ಮಾಡಲು ಸಾಧ್ಯವಿಲ್ಲ ಪರಿಣಾಮ ನಮ್ಮ ಆಶೆ ಆಕಾಂಕ್ಷೆಗಳನ್ನು ಅದುಮಿಟ್ಟು ಕೊಳ್ಳಬೇಕಾದ ಪರಿಸ್ಥಿತಿ ಬಂದೊಗುತ್ತದೆ.
ನಮಗೆ ಸಾಕಷ್ಟು ಫ್ರೀಡಂ ಇದ್ದರೂ ಅದನ್ನು ಅನುಭವಿಸಲು ಮನಸ್ಸು ಒಪ್ಪುವುದಿಲ್ಲ ಯಾಕೆಂದರೆ ಆತನನ್ನು ನಂಬಿ ಇಡಿ ಸಂಸಾರದ ಜಟಕದ ಚಲನೆ ಇರುತ್ತದೆ , ಆದು ತಮ್ಮನ ಸ್ಕೂಲ್ ಪೀಸ್ ಇರಬಹುದು , ತಂದೆಯ ಆರೋಗ್ಯದ ಖರ್ಚು , ತುರ್ತು ಸಮಯದಲ್ಲಿ ಮಾಡಿದ ಸಾಲದ ಕಂತು ಕಟ್ಟುದರಲ್ಲಿಯೇ ಆಶೆ ಅಭಿಲಾಷೆಯನ್ನು ಮರೆಯುತ್ತಾನೆ .

ಸಮಾಜ ಆತನ ವರಮಾನದ ಅಧಾರದ ಮೇಲೆ ಆತನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಮತ್ತು ಒಬ್ಬ ಎಷ್ಟ ಮೋಸ , ವಂಚನೆ ಮಾಡಿ ಹಣವಂತನಾದರೂ ಜನ ಆತನನ್ನು ಕರೆದು ಪುರಸ್ಕರಿಸುತ್ತದೆ, ನ್ಯಾಯ ನೀತಿಯಲ್ಲಿ ಬದುಕಿ ತನ್ನನ್ನು ಅರ್ಥಿಕವಾಗಿ ಸದೃಢ ಮಾಡಲು ವಿಫಲನಾದವನನ್ನು ತಿರಸ್ಕರಿಸುವ ಗುಣವನ್ನು ಹೊಂದಿದೆ .

ಆದರೆ ಒಂದಾಂತ್ತು ನಿಜ ಈ ನೋವು, ಸಂಕಟಗಳೆ ಆತನನ್ನು ಉತ್ತಮ ನಡತೆಯ ನಾಗರಿಕನಾಗಿ ಮಾಡಲು ಗಟ್ಟಿ ಪಂಚಾಂಗದ ಕಲ್ಲುಗಳು.
ಆದರೆ ಕಾಮಾಲೆ ಕಣ್ಣಿನವರಂತೆ ಅವನನ್ನು ಎಲ್ಲರಿಂತೆ ಅವನು ಎಂದು ನಿರ್ಧರಿಸಲು ಹೋಗಬೇಡಿ , ಆತನಿಗೆ ಕೂಡ ಒಂದು ಮನಸ್ಸಿದೆ.

ರವಿ ಮೂಡುಕೂಣಾಜೆ

LEAVE A REPLY

Please enter your comment!
Please enter your name here