ಕೋವಿಡ್-19| ಕೇಂದ್ರ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ – ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಅವಕಾಶ!

0
108
Tap to know MORE!

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹಲವಾರು ನಿಯಮಗಳನ್ನು ಸಡಿಲಗೊಳಿಸಿದೆ.

ಈ ಹಿಂದೆ ಗೃಹ ಸಚಿವಾಲಯ(ಎಂಎಚ್‌ಎ) ಹೊರಡಿಸಿದ್ದ ಮಾರ್ಗಸೂಚಿಗಳು ಜನವರಿ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸದಾಗಿ ಕೋವಿಡ್ 19 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಈ ಮಾರ್ಗಸೂಚಿ ಫೆ. 28 ರವರೆಗೆ ಅನ್ವಯಿಸಲಿದೆ.

ಹೊಸ ಮಾರ್ಗಸೂಚಿಗಳಲ್ಲಿ, ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯುಟಿ) ಎಚ್ಚರಿಕೆ ವಹಿಸಲು ಒತ್ತು ನೀಡುವಂತೆ ಮತ್ತು ಕಣ್ಗಾವಲು, ನಿಯಂತ್ರಣ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ.

ಹಿಂದಿನಂತೆ, ಕೋವಿಡ್‌-19 ಸೂಕ್ತ ನಡವಳಿಕೆಗಳ ಪಾಲನೆ, ಮಾಸ್ಕ್‌ಗಳು, ಕೈ ತೊಳೆಯುವುದು, ಸಾಮಾಜಿಕ ದೂರ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ನಿರ್ದೇಶಿಸಲಾಗಿದೆ.

ಮಾರ್ಗಸೂಚಿಗಳು:

  • ಸಾಮಾಜಿಕ/ ಧಾರ್ಮಿಕ/ ಕ್ರೀಡೆ/ ಮನರಂಜನೆ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಕೂಟಗಳನ್ನು ಈಗಾಗಲೇ ಸಭಾಂಗಣ ಸಾಮರ್ಥ್ಯದ ಗರಿಷ್ಠ 50%ವರೆಗೆ ಅನುಮತಿಸಲಾಗಿತ್ತು. ಇದೀಗ ಹೆಚ್ಚುವರಿ ಭರ್ತಿಗೆ ಅವಕಾಶ ನೀಡಲಾಗಿದೆ.
  • ಸಿನೆಮಾ ಹಾಲ್‌ಗಳು ಮತ್ತು ಚಿತ್ರಮಂದಿರಗಳಿಗೆ ಈಗಾಗಲೇ 50% ಆಸನ ಸಾಮರ್ಥ್ಯದವರೆಗೆ ಅನುಮತಿ ನೀಡಲಾಗಿದೆ. ಈಗ ಅವರಿಗೆ ಹೆಚ್ಚಿನ ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ.
  • ಕ್ರೀಡಾಪಟುಗಳು ಈಜುಕೊಳಗಳನ್ನು ಬಳಸಲು ಈ ಹಿಂದೆಯೇ ಅನುಮತಿಸಲಾಗಿತ್ತು. ಈಗ ಈಜುಕೊಳಗಳನ್ನು ಎಲ್ಲರೂ ಬಳಸಬಹುದು. ಇದಕ್ಕಾಗಿ ಪರಿಷ್ಕೃತ ಎಸ್‌ಒಪಿ ಅನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು (ಎಂಒಎ ಮತ್ತು ಎಸ್) ಎಂಹೆಚ್‌ಎಯೊಂದಿಗೆ ಸಮಾಲೋಚಿಸಿ ನೀಡಲಿದೆ.
  • ಬಿಸಿನೆಸ್ ಟು ಬಿಸಿನೆಸ್(ಬಿ2ಬಿ) ಪ್ರದರ್ಶನ ಸಭಾಂಗಣಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಈಗ ಎಲ್ಲಾ ರೀತಿಯ ಪ್ರದರ್ಶನ ಸಭಾಂಗಣಗಳಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಎಂಎಚ್‌ಎಯೊಂದಿಗೆ ಸಮಾಲೋಚಿಸಿ ವಾಣಿಜ್ಯ ಇಲಾಖೆಯಿಂದ ಪರಿಷ್ಕೃತ ಎಸ್‌ಒಪಿ ನೀಡಲಾಗುತ್ತದೆ.
  • 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here