ಕೋವಿಡ್-19 ಹಿನ್ನೆಲೆ| ಇತಿಹಾಸದಲ್ಲೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು!

0
154
Tap to know MORE!

ನವದೆಹಲಿ : ಕೊರೊನಾ ವೈರಸ್ ಹಿನ್ನೆಲೆ ದೇಶಿಯ ಕ್ರಿಕೆಟ್ ಟೂರ್ನಿಗಳ ಪೈಕಿ ಅತ್ಯಂತ ಹಳೆಯ ದೊಡ್ಡ ಟೂರ್ನಿ, ಪ್ರತಿಷ್ಠಿತ ರಣಜಿ ಟ್ರೋಫಿಯ 2020-21 ನೇ ಸಾಲಿನ ಆವೃತ್ತಿ ರದ್ದುಗೊಂಡಿದೆ.

ಕೊರೊನಾ ವೈರಸ್ ನಿಂದಾಗಿ ಈ ಬಾರಿಯ ದೇಶಿಯ ಕ್ರಿಕೆಟ್ ಋತುವಿನ ವೇಳಾಪಟ್ಟಿ ಬದಲಾದ ಕಾರಣ ಸಮಯದ ಅಭಾವದಿಂದ ರಣಜಿ ಟ್ರೋಫಿ ರದ್ದುಪಡಿಸಲಾಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳ ಸಲಹೆ ಮೇರೆಗೆ ಬಿಸಿಸಿಐ ಇದೇ ಸಮಯದಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನಡೆಸಲು ನಿರ್ಧರಿಸಿದೆ.

1934-35 ಸಾಲಿನಲ್ಲಿ ಆರಂಭಗೊಂಡ ರಣಜಿ ಟ್ರೋಫಿ ನಿರಂತರವಾಗಿ 86 ವರ್ಷಗಳಿಂದ ನಡೆಯುತ್ತ ಬಂದಿದೆ. 86 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದುಪಡಿಸಲಾಗಿದೆ.

LEAVE A REPLY

Please enter your comment!
Please enter your name here