ಬೆಂಗಳೂರು: ಕೋವಿಡ್-19 ಲಸಿಕೆ ಹಾಕಿಸಿಕೊಂಡ ರಾಜ್ಯಗಳಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶ ತಿಳಿಸಿದೆ.
ದೇಶದಲ್ಲಿ ರಾಜ್ಯವಾರು ಜನಸಂಖ್ಯೆಗೆ ಹೋಲಿಸಿದರೆ, ಲಕ್ಷದ್ವೀಪ (ಶೇ .83.4), ಒಡಿಶಾ (ಶೇ .50.7), ಹರಿಯಾಣ (ಶೇ .50), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ 48.3), ರಾಜಸ್ಥಾನ (ಶೇ 46.8), ತ್ರಿಪುರ (ಶೇ .45.6), ಮಿಜೋರಾಂ (ಶೇ 40.5) ), ತೆಲಂಗಾಣ (ಶೇ 40.3), ಆಂಧ್ರ ಪ್ರದೇಶ (ಶೇ 38.1), ಕರ್ನಾಟಕ (35.6 ಶೇಕಡಾ) ಮತ್ತು ಮಧ್ಯಪ್ರದೇಶ (35.5 ಶೇಕಡಾ) ಒಟ್ಟು ಶೇಕಡಾ 35ರಷ್ಟು ಲಸಿಕೆ ಹಾಕಲಾಗಿದೆ ಎಂದರು.
ಇದನ್ನೂ ಓದಿ: ಜಗತ್ತಿನ ಗಮನ ಸೆಳೆಯುತ್ತಿದೆ ಭಾರತೀಯ ಲಸಿಕೆ| ಕೋವ್ಯಾಕ್ಸಿನ್ ಬಹಳ ಪರಿಣಾಮಕಾರಿ ಮತ್ತು ಸುರಕ್ಷಿತ : ICMR
ಮತ್ತೊಂದೆಡೆ, ತಮಿಳುನಾಡು (ಶೇ 15.7), ದೆಹಲಿ (ಶೇ 15.7), ಜಾರ್ಖಂಡ್ (ಶೇ 14.7), ಉತ್ತರಾಖಂಡ (ಶೇ 17.1), ಚತ್ತೀಸ್ ಗಢ (ಶೇ 20.6) ಮತ್ತು ಮಹಾರಾಷ್ಟ್ರ (ಶೇ 20.7) ಶೇ 21 ಕ್ಕಿಂತ ಕಡಿಮೆ ಲಸಿಕೆ ಹಾಕಲಾಗಿದೆ ಎಂದು ರಾಜೇಶ್ ಭೂಷಣ್ ತಿಳಿಸಿದರು.
ಇದುವರೆಗೂ ಒಟ್ಟು 35 ಲಕ್ಷಕ್ಕಿಂತಲೂ ಅಧಿಕ ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
35,00,027 ಫಲಾನುಭವಿಗಳಲ್ಲಿ ಅತಿ ಹೆಚ್ಚು 4,63,793 ಜನರಿಗೆ ಉತ್ತರ ಪ್ರದೇಶದಲ್ಲಿ ಲಸಿಕೆ ನೀಡಲಾಗಿದ್ದು, ನಂತರದ ಸ್ಥಾನದಲ್ಲಿ ರಾಜಸ್ಥಾನ 3,24,973, ಕರ್ನಾಟಕ 3,07,891 ಮತ್ತು ಮಹಾರಾಷ್ಟ್ರದಲ್ಲಿ 2,61,320 ಜನರಿಗೆ ಲಸಿಕೆ ನೀಡಲಾಗಿದೆ.
ಆರೋಗ್ಯ ಸೇವೆ ವಲಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರು, ವೈದ್ಯರು, ದಾದಿಯರು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಸರ್ಕಾರ ಒತ್ತಾಯಿಸುತ್ತಿದೆ.