ದೌರ್ಭಾಗ್ಯ

0
92
Tap to know MORE!

ದೀಪಾವಳಿಯ ಶುಭ ದಿನದಲ್ಲಿ ಊರೆಲ್ಲ ಶೃಂಗಾರ ಗೊಂಡರು ಲಕ್ಷ್ಮಿ ಮುಂಜಾನೆಯಿಂದ ರಾತ್ರಿವರೆಗೆ ಕಣ್ಣೀರು ಸುರಿಸುತ್ತ ಯೋಚಿಸುತ್ತಾಳೆ ನಾನು ಮಾಡಿದ ಸಣ್ಣ ತಪ್ಪಿಗೆ ಇಂತಹ ಘನ ಘೋರ ಶಿಕ್ಷೆ ಕೊಟ್ಟೆ? ನಾನು ಮಾಡಿದ್ದು ತಪ್ಪು ನಿಜ ಆದರೆ ಅದಕ್ಕಾಗಿ 5 ವರ್ಷದಿಂದ ಕಣ್ಣೀರು ಸುರಿಸುತ್ತಾ ದಿನ ಕಲಿಯುತ್ತಿದ್ದೇನೆ. ಯಾಕೆ ಹೀಗಾಯಿತು. ನಾನು ದುಡಿಯುವ ಮನೆಯಲ್ಲಿ ಇಟ್ಟ ಹಣವನ್ನು ಅದು ಕಾಣದೆ ಆದಾಗ ದನಿಗಳು ನನ್ನನ್ನು ವಿಚಾರಿಸದೆ ನನಗೆ ಶಿಕ್ಷೆ ಕೊಟ್ಟರು. ನಿಜವಾಗಲೂ ಮಗ ಕದ್ದಿರಲಿಲ್ಲ. ಅವರು ಹಣವಿಟ್ಟ ಜಾಗ ಮರೆತು ಹೋಗಿ , ಹಣ ಸಿಗದೆ ಇದ್ದಾಗ ನನ್ನ ಮಗ ಕದ್ದನೆಂದು ಸುಳ್ಳು ಅಪವಾದವನ್ನು ಹೊರಿಸಿದರು. ಸಿಟ್ಟಿನ ಭರದಲಿ ನಾನು ಬಾಯಿಗೆ ಬಂದಂತೆ ಬೈದೆ. ಕೈಯಲ್ಲಿದ್ದ ದೊಣ್ಣೆಯಿಂದ ಅವನ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಹೊಡೆದೆ. ಅದು ಒಂದು ಸಿಟ್ಟಿನಿಂದ ಅವ ಮನೆ ಬಿಟ್ಟು ಹೋದ. ಇದ್ದ ಒಬ್ಬನೇ ಮಗ ನನ್ನ ಮುಂದಿನ ದಾರಿ ದೀಪ ವಾಗಬೇಕಿದ್ದ ಆತ ಮನೆಬಿಟ್ಟು ಹೊರಟು ಹೋಗಿ ಇಂದಿಗೆ 5 ವರ್ಷವಾಯಿತು. ದಿಕ್ಕಿಲ್ಲದ ನನಗೆ ಅವನೇ ಆಸರೆ ಆಗಬೇಕಾಗಿದ್ದ. ಆದ್ರೆ ನನ್ನ ದೌರ್ಭಾಗ್ಯ ಅವನನ್ನು ಕಳೆದುಕೊಂಡೆ. ಇನ್ನು ಎಂದಾದರೂ ಅವನು ಬರುವನೇ? ಇಲ್ಲ..,….ಆದರೂ ಬರುವನೆಂದು ನಂಬಿಕೆಯಿಂದ ದಿನ ದಾರಿ ಕಾಯುತ್ತಿದ್ದೇನೆ.*

✍️ ರೇಖಾ ಸುದೇಶ್ ರಾವ್, 
      ಮಂಗಳೂರು

LEAVE A REPLY

Please enter your comment!
Please enter your name here