ಇದೇ ಮೊದಲ ಬಾರಿಗೆ ಯುವ ಕಾಂಗ್ರೆಸ್‌ನ ಉನ್ನತ ಹುದ್ದೆಗೆ ಓರ್ವ ಮಂಗಳಮುಖಿ ಆಯ್ಕೆ!

0
114
Tap to know MORE!

ಮಂಗಳೂರು: ಬ್ಯೂಟಿಷಿಯನ್‌, ಪರಿವರ್ತನ್‌ ಟ್ರಾನ್ಸ್‌ಕ್ವೀನ್‌ ಸಂಜನಾ ಚಲವಾದಿ ಅವರು ಮಂಗಳೂರು ದಕ್ಷಿಣ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹುದ್ದೆ ಅಲಂಕರಿಸಿದ ಮೊದಲ ಮಂಗಳಮುಖಿ. ಯುವ ಕಾಂಗ್ರೆಸ್‌ ಚುನಾವಣೆಗಳು ಜ.10, 11 ಮತ್ತು 12ರಂದು ಆನ್‌ಲೈನ್‌ನಲ್ಲಿ ನಡೆದಿದ್ದು, ಫಲಿತಾಂಶ ಪ್ರಕಟಿಸಲಾಗಿದೆ.

“ನಾನು ಯೂತ್ ಕಾಂಗ್ರೆಸ್ ಸೌತ್ ಬ್ಲಾಕ್ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೇನೆ ಎಂದು ಅಧ್ಯಕ್ಷರಿಂದ ಸುದ್ದಿ ಕೇಳಿ ನನಗೆ ತುಂಬಾ ಸಂತೋಷವಾಗಿದೆ. ನಾನು ಬ್ಯೂಟಿಷಿಯನ್ ಕೋರ್ಸ್ ಮುಗಿಸಿದ್ದೇನೆ ಮತ್ತು ಈಗ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲರ ಸಹಾಯ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಸಂಜನಾ ತಿಳಿಸಿದ್ದಾರೆ.

ಅಧ್ಯಕ್ಷರಾಗಿ ಶಿವ, ಉಪಾಧ್ಯಕ್ಷರಾಗಿ ಸೋಹನ್‌, ದೀಕ್ಷಿತ್‌ ಪೂಜಾರಿ ಮತ್ತು ದಕ್ಷಿಣ ಬ್ಲಾಕ್‌ ಪ್ರಧಾನ ಕಾರ್ಯದರ್ಶಿಯಾಗಿ ಸಂಜನಾ ಚಲವಾದಿ ಆಯ್ಕೆಯಾಗಿದ್ದಾರೆ.

2018ರಲ್ಲಿ ನಡೆದ ಪರಿವರ್ತನ್ ಟ್ರಾನ್ಸ್ ಕ್ವೀನ್ ಬ್ಯೂಟಿ ಸ್ಪರ್ಧೇಯಲ್ಲಿ ಸಂಜನಾ ವಿಜೇತರಾಗಿದ್ದರು.

LEAVE A REPLY

Please enter your comment!
Please enter your name here