ಬಿಗ್ ಬಾಸ್ ಕನ್ನಡಕ್ಕೆ ದಿನಗಣನೆ: ಕೊನೆಗೊಳ್ಳಲಿದೆ ಕಲರ್ಸ್ ಕನ್ನಡದ ಎರಡು ಧಾರವಾಹಿಗಳು ..!

0
200
Tap to know MORE!

ಬೆಂಗಳೂರು: ಇನ್ನು ಕೆಲವೇ ಕೆಲವು ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗುತ್ತಿರುವ ಕಾರಣ ಪ್ರತಿ ನಿತ್ಯ ಸಂಜೆ ಒಂದು ಗಂಟೆಯ ಸಮಯವನ್ನು ಕಾಯ್ದಿರಿಸಬೇಕಾಗುತ್ತದೆ. ಶನಿವಾರ ಹಾಗೂ ಭಾನುವಾರ ಹೇಗಿದ್ದರೂ ಸಾಕಷ್ಟು ಸಮಯ ಸಿಗುವ ಕಾರಣ ಸೋಮವಾರದಿಂದ ಶುಕ್ರವಾರದವರೆಗೆ ಕನಿಷ್ಠ ಒಂದು ಗಂಟೆ ಸಂಜೆಯ ಸಮಯವನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕಾಗಿ ಕಾಯ್ದಿರಿಸಬೇಕಾಗುತ್ತದೆ.

ಪ್ರತಿ ಬಾರಿಯೂ ಕೂಡ ಹೀಗೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುವ ಸಮಯ ಬಂದಾಗ ಕೆಲವೊಂದು ಧಾರವಾಹಿಗಳನ್ನು ಮುಗಿಸಿ ಅಥವಾ ಮತ್ತೊಂದು ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಹೇಳಿ ಕಲರ್ಸ್ ಕನ್ನಡ ವಾಹಿನಿಯ ಹಲವಾರು ಧಾರವಾಹಿಗಳನ್ನು ನಿಲ್ಲಿಸಿ ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಅನುವು ಮಾಡಿ ಕೊಟ್ಟಿದೆ. ಈ ಬಾರಿಯೂ ಕೂಡ ಅದೇ ರೀತಿ ನಡೆಯಲಿದ್ದು ಮೂಲಗಳ ಪ್ರಕಾರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 2 ಧಾರವಾಹಿಗಳನ್ನು ನಿಲ್ಲಿಸಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸಲಾಗುತ್ತದೆ.

ಇದೀಗ ಬಂದಿರುವ ಕಿರುತೆರೆಯ ಮೂಲಗಳ ಪ್ರಕಾರ ಹಲವಾರು ತಿಂಗಳುಗಳಿಂದ ಪ್ರಸಾರವಾಗುತ್ತಿರುವ ಹಾಗೂ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಮಂಗಳ ಗೌರಿ ಧಾರವಾಹಿಯನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಮಯ ಮಾಡಿಕೊಡುವ ಕಾರಣಕ್ಕಾಗಿ ನಿಲ್ಲಿಸಲಾಗುತ್ತಿದೆ. ಕಥೆ ಮುಕ್ತಾಯಗೊಳಿಸಿ ಇನ್ಯಾವುದೇ ಇತರ ವಾಹಿನಿಯಲ್ಲಿ ಪ್ರಸಾರ ಮಾಡದೇ ಇರಲು ಕಲರ್ಸ್ ಕನ್ನಡ ವಾಹಿನಿಯ ನಿರ್ಧಾರ ಮಾಡಿದೆ.

ಇನ್ನು ಎರಡನೆಯ ಧಾರವಾಹಿ ಯಾವುದು ಎಂಬುದನ್ನು ನಾವು ಗಮನಿಸುವುದಾದರೆ ಮೂಲಗಳ ಪ್ರಕಾರ 6:00 ಗಂಟೆಗೆ ಪ್ರಸಾರವಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಪ್ರಖ್ಯಾತ ಧಾರಾವಾಹಿ ಮಿಥುನ ರಾಶಿ ಧಾರಾವಾಹಿಯನ್ನು ಮುಗಿಸಲು ಕಲರ್ಸ್ ಕನ್ನಡ ವಾಹಿನಿಯು ಸಿದ್ಧತೆ ನಡೆಸಿದೆ. ಕಿರುತೆರೆಯ ಮೂಲಗಳ ಪ್ರಕಾರ ಇದೀಗ ನಾಯಕ ನಟ ಸಮರ್ಥ ತನ್ನ ತಮ್ಮ ಬಾಬುವಿನ ಗುಣವನ್ನು ಅರ್ಥ ಮಾಡಿಕೊಂಡು ಆತ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದ ಕಾರಣಕ್ಕಾಗಿ ಯಾಕೆ ಈಗ ಆಲೋಚನೆ ನಡೆಸಬೇಕು ಎಂದು ಹೇಳಿ ಅಣ್ಣ ತಮ್ಮಂದಿರು ಒಂದಾಗಲಿದ್ದಾರೆ. ಈ ಮೂಲಕ ಕಥೆಗೆ ಇತಿಶ್ರೀ ಹಾಡಲಾಗುತ್ತದೆ.

ಇನ್ನು ಬಿಗ್ ಬಾಸ್ ಕಾರ್ಯಕ್ರಮ ಪ್ರೈಮ್ ಟೈಮ್ ನಲ್ಲಿ ಅಂದರೆ 8:00 ಗಂಟೆಯಿಂದ 9 ಗಂಟೆವರೆಗೆ ಪ್ರಚಾರ ಮಾಡಲು ನಿರ್ಧಾರ ಮಾಡಿರುವ ಕಾರಣ ಈಗ ಆ ಸಮಯದಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅದಲು ಬದಲು ಮಾಡಿ ಕನ್ನಡತಿ ಹಾಗೂ ಗಿಣಿ ರಾಮ ಧಾರವಾಹಿಗಳ ಸಮಯ ಕೂಡ ಬದಲಾವಣೆ ನಡೆಸಿ ಪ್ರಸಾರ ಮಾಡುವ ಆಲೋಚನೆಯನ್ನು ಕಲರ್ಸ್ ಕನ್ನಡ ವಾಹಿನಿಯು ನಡೆಸಿದೆ.

LEAVE A REPLY

Please enter your comment!
Please enter your name here