18 ತಿಂಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಸೇವೆ ಪುನರಾರಂಭ..!

0
79
Tap to know MORE!

ನವದೆಹಲಿ ಫೆ.8: ಸುಮಾರು 18 ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈಸ್ಪೀಡ್ 4 ಜಿ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ. “4 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಜಮ್ಮು ಕಾಶ್ಮೀರದಲ್ಲಿ ಮರುಸ್ಥಾಪಿಸಲಾಗುತ್ತಿದೆ” ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ವಕ್ತಾರ ರೋಹಿತ್ ಕನ್ಸಾಲ್ ಟ್ವೀಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರ ಆಗಸ್ಟ್ 5 ರಂದು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನಃಸ್ಥಾಪನೆಗೊಂಡಿರುವುದರಿಂದ ವಿಶ್ವದಲ್ಲೇ ಅತಿ ಧೀರ್ಘ ಕಾಲ ಇಂಟರ್ನೆಟ್ ಸೇವೆಯು ಸ್ಥಗಿತಗೊಂಡ ಪ್ರದೇಶ ಎಂಬ ಅಪಖ್ಯಾತಿ ಜಮ್ಮು ಕಾಶ್ಮೀರ ಪಡೆದಿದೆ. ಸಂವಿಧಾನದಲ್ಲಿ ಪಟ್ಟಿ ಮಾಡಲಾದ ದಶಕಗಳಷ್ಟು ಹಳೆಯ ಸ್ವಾಯತ್ತತೆಯನ್ನು ರದ್ದುಗೊಳಿಸುವ ಯೋಜನೆಯನ್ನು ಕೇಂದ್ರ ಘೋಷಿಸಿದ ನಂತರ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.

ನಂತರದ ದಿನಗಳಲ್ಲಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ, ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು ಮತ್ತು ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಬಂಧನಕ್ಕೆ ಒಳಗಾಗಿದ್ದರು.

ಕಳೆದ ವರ್ಷದಲ್ಲಿ, ಬ್ರಾಡ್ಬ್ಯಾಂಡ್ ಇಂಟರ್ನೆಟ್ ಮತ್ತು ನಿಧಾನಗತಿಯ ಮೊಬೈಲ್ ಡೇಟಾವನ್ನು ಹಂತ ಹಂತವಾಗಿ ಪುನಃಸ್ಥಾಪಿಸಲಾಯಿತು. ತಪ್ಪು ಮಾಹಿತಿ ಹರಡುವುದನ್ನು ಮತ್ತು ಭಯೋತ್ಪಾದಕರು ನೆಟ್‌ವರ್ಕ್‌ಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ ಎಂದು ಸರ್ಕಾರವು ತಿಳಿಸಿತ್ತು.

LEAVE A REPLY

Please enter your comment!
Please enter your name here