ಮಂಗಳೂರು: ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ೯ನೇ ತರಗತಿ ವಿದ್ಯಾರ್ಥಿ..!

0
113
ವಿದ್ಯಾರ್ಥಿ, ಮಂಗಳೂರು
Tap to know MORE!

ಮಂಗಳೂರು ಫೆ 10: ತಂಗಿಗೆ ಐಸ್‌ಕ್ರೀಂ ತಂದಿಲ್ಲದಕ್ಕೆ ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಶಂಭೂರು ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಗ್ರಾಮದ ಚೆರ್ಕಳದಲ್ಲಿನಡೆದಿದೆ.

ಚೆರ್ಕಳ ನಿವಾಸಿ ಹರ್ಷಿತ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದಲ್ಲದೆ ತಂಗಿಗೆ ಐಸ್‌ ಕ್ರೀಂ ತಂದಿರಲಿಲ್ಲ. ಈ ಕಾರಣಕ್ಕೆ ಮನೆಯಲ್ಲಿ ಬೈದಿದ್ದು, ಇದೇ ಕಾರಣದಿಂದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here