ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ

0
5465
Tap to know MORE!

ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ (ಬದುಕು ಮತ್ತು ಭ್ರಮೆಯ ನಡುವೆ ಜೀವನ)

ಹೆಸರಾಂತ ಮನೋಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಹೇಳುತ್ತಾರೆ “ಕನಸೆಂಬುದು ನಮ್ಮ ಸುಪ್ತ ಮನಸ್ಸಿನ ಆಲೋಚನೆಗಳು, ಇವು ನಮಗೆ ಗೊತ್ತಿಲ್ಲದೆ ನಮ್ಮ ವಾಸ್ತವ ಬದುಕಿನದಲ್ಲಿ ಪರಿಣಾಮ ಬೀರುತ್ತವೆ ಎಂದು”. ನಮ್ಮ ಮನಸ್ಸನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ಜಾಗೃತ ಮನಸ್ಸು, ಉಪಪ್ರಜ್ಞೆ ಮತ್ತು ಸುಪ್ತ ಮನಸ್ಸು ಎಂಬುವುದಾಗಿ. ಜಾಗೃತ ಮನಸ್ಸು ಎಂದರೆ ನಮ್ಮ ವಾಸ್ತವ ಬದುಕಿನ ಆಲೋಚನೆಗಳು, ಕ್ರಿಯೆಗಳು, ಉಪಪ್ರಜ್ಞೆ ಕೆಲವು ನೆನಪುಗಳು ಮತ್ತು ಕೌಶಲ್ಯಗಳು. ಸುಪ್ತ ಮನಸ್ಸೆಂಬುದು ನಮಗೆ ಅರಿವಿಗೆ ಬಾರದ, ಮನಸ್ಸಿನ ಕೋಣೆಯಲ್ಲಿ ಅಡಗಿರುವ ಬಹುದೊಡ್ಡ ಮಾಹಿತಿ, ಕೆಲವೂಂದು ಆಶೆಗಳು , ಸ್ವಾರ್ಥ , ಕೆಲವು ಕೆಟ್ಟ ನಡವಳಿಕೆಗಳು.

ಹಾಗಾದರೆ ಭಮ್ರೆ ಮತ್ತು ಕನಸ್ಸಿಗೆ ಇರುವ ಸಂಬಂಧವೇನು ಎಂದು ಹುಡುಕಲು ಹೊರಟರೆ ಅಲ್ಲಿ ಸಿಗುವುದು ಬೀಳುವ ಕನಸ್ಸಿನಲ್ಲಿ ಯಾವ ಕನಸ್ಸು ನಮ್ಮ ಮನಸ್ಸಿಗೆ ಹೆಚ್ಚು ಪ್ರಭಾವ ಬೀರಿತು ಇಲ್ಲವೆ ಭಾವೋದ್ರೇಕಗೊಳಿಸಿ ವಾಸ್ತವ ಬದುಕದಲ್ಲಿ ಅದರಂತೆ ಬದುಕುತ್ತಿದ್ದೆವೆ ಎಂಬ ಅಲೋಚನೆಯಲ್ಲಿರುವುದು ಭ್ರಮೆ. ಇದು ಹೆಚ್ಚಿನ ಸಂದರ್ಭದಲ್ಲಿ ನಮ್ಮನ್ನ ವಾಸ್ತವ ಬದುಕಿನಿಂದ ದೊರ ತಳ್ಳಬಹುದು ಇಲ್ಲವೆ ಇದು ಹೆಚ್ಚಾಗಿ ಒಂದು ಮಾನಸಿಕ ಕಾಯಿಲೆಯಾಗಿ ಕಾಡಬಹುದು.

ನಾವು ಇಂದು ಮಾಹಿತಿ ತಂತ್ರಜ್ಞಾನ ಯುಗಕ್ಕೆ ಕಾಲಿಟ್ಟರೂ ಭ್ರಮೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಮಾಹಿತಿ, ಜ್ಞಾನ ಹೆಚ್ಚಾದಂತೆ ಭ್ರಮೆಯಿಂದ ಹೊರಬರುತ್ತೆವೆ ಆದರೆ ವಾಸ್ತವವಾಗಿ ಇದಕ್ಕೆ ತದ್ವಿರುದ್ಧವಾಗಿ ಇದರ ಪ್ರಭಾವ ಹೆಚ್ಚಾಗಿದೆ ಇದಕ್ಕೆ ಕಾರಣ ವ್ಯಕ್ತಿಯನ್ನು ಪ್ರಭಾವ ಗೊಳಿಸುವ ಮಾಧ್ಯಮಗಳು ಜಾಸ್ತಿಯಾಗಿವೆ. ಅವು ಸಮೂಹ ಮಾಧ್ಯಮ ಇರಬಹುದು, ಇನ್ನೊಬ್ಬರ ಮುಖವಾಡದ ಬದುಕು ಅವರಂತೆ ಬದುಕಲು ಪ್ರೇರಣೆ ಯಾಗಬಹುದು .ಒಟ್ಟಾರೆಯಾಗಿ ತಾನು ತಾನಗಿ ಬದುಕದೆ ಇನ್ನೊಬ್ಬನ ಪಡಿಯಚ್ಚಿನಂತೆ ಬದುಕಬಹುದು ಇದರಿಂದ ದಾಸ್ಯದ ಸಂಕೋಲೆಗೆ ತನ್ನನ್ನು ತಾನು ಜಡಿದುಕೊಳ್ಳಬಹುದು.
ನೀವು ಸ್ಕಿಜೋಫ್ರೇನಿಯಾ ಎಂಬ ಶಬ್ದವನ್ನು ಕೇಳಿರಬಹುದು, ಇದೊಂದು ಮಾನಸಿಕ ಖಾಯಿಲೆ. ಇದರ ಮುಖ್ಯ ಲಕ್ಷಣ, ಈ ಕಾಯಿಲೆಗೆ ಒಳಗಾಗಿರುವ ವ್ಯಕ್ತಿಯು ವಾಸ್ತವ ಬದುಕಿನಿಂದ ದೂರ ಉಳಿದು ತಾನು ಭ್ರಮೆಯಲ್ಲಿ ತನ್ನ ಕನಸಿನ ಮಹಲನ್ನು ಕಟ್ಟುವುದು ಇಲ್ಲಿ ಆತನ ಯೋಚನೆಗಳು ಯಾವುದು ನಿಜವಲ್ಲ, ,ಗೊಂದಲದ ಬದುಕು, ಕೆಲವರಿಗೆ ಕೇಳದ ಶಬ್ದಗಳನ್ನು ಆತ ಅಲಿಸುವುದು ,ಉದ್ವೇಗ. ಇನ್ನಿತರ ಮಾನಸಿಕ ಕಾಯಿಲೆಗಳು ಆತನನ್ನು ಅಂಟಿಕೊಂಡಿರುತ್ತದೆ. ಇಂತಹ ಉದಾಹರಣೆಗಳನ್ನು ದೂರದರ್ಶನದ ಒಂದು ರಿಯಾಲಿಟಿ ಷೋ, ಬಿಗ್ ಬಾಸ್ ಸ್ಪರ್ಧೆಯಲ್ಲಿ. ಅಲ್ಲಿ ಒಬ್ಬ ತನ್ನನ್ನು ತಾನು ಹುಚ್ಚ ಎಂದು ಕರೆಸಿಕೊಳ್ಳುಲು ಇಷ್ಟಪಡುತ್ತಿದ್ದವನ ವರ್ತನೆಯನ್ನು ಗಮನಿಸಿರಬಹುದು ಅಲ್ಲಿ ಆತ ತನಗೆ ತುಂಬ ಜನ ಬೆಂಬಲವಿದೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ತನ್ನನ್ನು ಅರಧಿಸುವ ಫ್ಯಾನ್ ಗಳಿದ್ದಾರೆ ತನ್ನ ಹೆಸರಲ್ಲಿ ಸೈನ್ಯವಿದೆ ಎಂಬ ಲೋಕದಲ್ಲಿ ಬದುಕಿದ್ದ. ಅದು ಎಷ್ಟರ ಮಟ್ಟಿಗೆ ನಿಜವೆಂದು ನಂಬಿದ್ದ ಎಂದರೆ ತನ್ನ ಸೇನೆಯ ವಿರುದ್ಧ ಮಾತನಾಡಿದವನ ಮೇಲೆ ಕೈ ಮಾಡಲು ಹೇಸಲಿಲ್ಲ, ಅ ಮೂಲಕ ಸ್ಪರ್ಧೆಯಿಂದ ಹೊರದೂಡಲ್ಪಟ್ಟಿದ. ವಾಸ್ತವವಾಗಿ ಆತ ಭ್ರಮೆಯ ಲೋಕದಲ್ಲಿ ಬದುಕುತ್ತಿದ್ದ ಇದು ಸ್ಕಿಜೋಫ್ರೇನಿಯಾ ಕಾಯಿಲೆಯ ಒಂದು ಲಕ್ಷಣವಾಗಿದೆ.

ಆತನ ಸೈನ್ಯ, ಫ್ಯಾನ್ಸ್ ಗಳ ಬೆಂಬಲ ಇವುಗಳನ್ನೆಲ್ಲಾ ನಿಜವೆಂದು ನಂಬಿದ್ದ ಮತ್ತು ಆತನ ಬದುಕು ವಾಸ್ತವ ಬದುಕಿನ ಗಡಿಯನ್ನು ದಾಟಿತ್ತು.ಈ ಮಾನಸಿಕ ಸ್ಥಿತಿ ಅತನನ್ನು ಅಂಟಿಕೊಳ್ಳಲು ಆತ ಬದುಕಿದ ವಾತಾವರಣ ಕಾರಣವಾಗಿರಬಹುದು. ಆತನ ಹಿನ್ನಲೆ ಗಮನಿಸ ಹೊರಟರೆ, ಆತ ಒಂದು ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದ, ಇದು ಆತನನ್ನು ಮಾನಸಿಕವಾಗಿ ಕಾಡಿ ಆತನ ಈ ಸ್ಥಿತಿಗೆ ಕಾರಣವಾಗಿರಬಹುದು ಮತ್ತು ಆತ ಆರಾಧಿಸುತ್ತಿದ್ದ ತಾಯಿ ಇಹಲೋಕ ತ್ಯಜಿಸಿದ್ದರಿಂದ ಆತನಲ್ಲಿ ಒಂದು ರೀತಿಯ ಮಾನಸಿಕ ಉದ್ವೇಗ ಬಂದಿರಬಹುದು.

ಕೆಲ ತಿಂಗಳುಗಳ ಹಿಂದೆ ಪಾಕಿಸ್ತಾನದ ರೂಪದರ್ಶಿ ಕಾಂದಿಲ್ ಬಲೋಚ್. ತನ್ನ ಸಹೋದರನ ಕೈಯಲ್ಲಿ ಹತ್ಯೆಯಾದಳು. ಕಾರಣ ಅಕೆ ಇಸ್ಲಾಂ ಸಂಪ್ರದಾಯದ ವಿರುದ್ಧವಾಗಿ ನಡೆದುಕೊಂಡಲು ಎಂಬುವುದಕ್ಕಾಗಿ (ಹುಡುಕಲು ಹೊರಟರೆ ಭಾರತದಲ್ಲಿ ಅನೇಕ ಕಾಂದಿಲ್ ಬಲೋಚ್ ಗಳು ಇದ್ದಾರೆ) ಅಕೆ ಒಂದು ಭ್ರಮೆಯಲ್ಲಿದ್ದಳು, ಏನೆಂದರೆ ತಾನು ಸೋಶಿಯಲ್ ಮೀಡಿಯಾಗಳಲ್ಲಿ ತಾನು ಏನಾದರೂ ಹೇಳಿಕೆ ಕೊಟ್ಟರೆ ತನ್ನನ್ನು ಹಿಂಬಾಲಿಸುವ ಅನೇಕ ಹಿಂಬಾಲಕರು ಇದ್ದಾರೆ, ಅವರು ತನ್ನ ಹೇಳಿಕೆಯನ್ನು ಇಷ್ಟಪಡುತ್ತಾರೆ ಎಂಬುವುದಾಗಿ. ಅದರಂತೆ ಆಕೆಗೆ ಟ್ವಿಟರ್ ಏಕೌಂಟ್ ನಲ್ಲಿ ಯಾವುದೆ ಸೆಲೆಬ್ರಿಟಿಗೂ ಕಮ್ಮಿಯಾಗದಂತೆ ಹಿಂಬಾಲಕರೂ ಇದ್ದರು ,ಅವರನ್ನು ಖುಷಿಪಡಿಸಲು ಅಸಂಬದ್ಧವಾದ ಹೇಳಿಕೆಗಳನ್ನು ಕೊಡುತ್ತಿದ್ದಳು, ಅದು ವಿರಾಟ್ ಕೊಹ್ಲಿಯನ್ನು ತನ್ನ ಬಾಯ್ ಫ್ರೆಂಡ್ ಎಂದೂ, ಮೋದಿಯ ಬಗ್ಗೆ, ಹಾಗೂ ಇನ್ನಿತ್ತರ ಜನರನ್ನು ಉದ್ರೇಕ ಗೊಳಿಸುವ ಮಾತುಗಳನ್ನು ಆಡುತ್ತಿದ್ದಳು. ಇದು ಸಹಜವಾಗಿ ಸಂಪ್ರದಾಯವಾದಿಗಳಿಗೆ ಬೇಸರವನ್ನು ತಂದಿತ್ತು. ಅವರು ಆಕೆಯ ಸಹೋದರನನ್ನು ತರಾಟೆಗೆ ತೆಗೆದುಕೊಂಡಾಗ ತನ್ನ ಸಹೋದರಿಯಿಂದ ಇಸ್ಲಾಂ ಧರ್ಮಕ್ಕೆ ಅಪಮಾನವಾಗುತ್ತೆ, ಆಕೆಯನ್ನು ಹತ್ಯೆಮಾಡುವ ಕೆಲಸಕ್ಕೆ ಕೈ ಹಾಕಿದ .. ಒಂದು ಭ್ರಮೆಯೇ ಕಂದಿಲ್ ಬಲೋಚ್ ನ ಪ್ರಾಣಕ್ಕೆ ಕಂಟಕಾರವಾಗಿತ್ತು.

ನಾವು ಜನ ಸಾಮಾನ್ಯರು ಕೆಲವು ಭ್ರಮೆಗಳಲ್ಲಿ ಇರುವುದನ್ನು ಕಾಣುತ್ತೇವೆ, ಅದೇನೆಂದರೆ ನಾವು ಇನ್ನೊಬ್ಬರಲ್ಲಿ ನಿರೀಕ್ಷೆ ಇಡುವುದು, ಇಲ್ಲವೇ ಆತನಿಂದ ತಮಗೆ ಒಳಿತಾಗಬಹುದು ಎಂದು ಭ್ರಮೆಯಿಂದ ಇರುವುದು. ಆತನನ್ನು ಮೆಚ್ಚಿಸಲು ವಿವಿಧ ಹಗಲು ವೇಷಗಳನ್ನು ಹಾಕುತ್ತೀವಿ, ಇದರಿಂದ ನಾವು ನಾವಾಗಿ ಬದುಕುವುದಿಲ್ಲ. ಹಾಗಾಗಿ ನಮ್ಮ ಬದುಕಿನಲ್ಲಿ ಕನಸಿನ ಲೋಕ ಬಿಡುವ ವಾಸ್ತವ ಸ್ಥಿತಿ-ಗತಿಗಳನ್ನು ಅರಿತು ಬದುಕುವ. ಕನಸು ಕಾಣುವುದು ಒಳ್ಳೆಯದು, ಆದರೆ ಆ ಕನಸನ್ನು ನಿಜ ಮಾಡಲು ಇನ್ನೊಬ್ಬರನ್ನು ಅವಲಂಬಿಸುವುದು ಬದಲು ನಾವು ನಮ್ಮ ಬಗ್ಗೆಯೇ ನಿರೀಕ್ಷೆಗಳನ್ನು ಜಾಸ್ತಿ ಮಾಡೋಣ, ಇದರಿಂದ ನಮ್ಮ ಕನಸ್ಸುಗಳೆಲ್ಲವನ್ನೂ ಸಾಕಾರಗೊಳಿಸಲು ಸಾಧ್ಯ.

– ರವಿ ಮೂಡುಕೊಣಾಜೆ

LEAVE A REPLY

Please enter your comment!
Please enter your name here