ನವದೆಹಲಿ : ಇತ್ತೀಚಿನ ದಿನಗಳಲ್ಲಿ 50 ಮತ್ತು 200 ರೂಪಾಯಿಗಳ ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿವೆ. ನಿಮ್ಮ ಬಳಿ ಇರುವ 50 ಮತ್ತು 200 ರೂಪಾಯಿ ನೋಟು ನಕಲಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ಜನರಿಗೆ ನಕಲಿ ನೋಟುಗಳ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಆರ್ಬಿಐ ಮುಂದಾಗಿದೆ.
ನಕಲಿ ನೋಟುಗಳನ್ನು ಪರಿಶೀಲಿಸುವುದು ಹೇಗೆ ?
ಆರ್ಬಿಐ ಸಾರ್ವಜನಿಕರಿಗೆ ನಕಲಿ ನೋಟುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಹಣಕಾಸು ಜಾಗೃತಿ ಸಪ್ತಾಹದ ಅಂಗವಾಗಿ ರಿಸರ್ವ್ ಬ್ಯಾಂಕ್ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನಿರ್ದೇಶಕ ಲಕ್ಷ್ಮೀಕಾಂತ್ ರಾವ್ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹತ್ತು, ಇಪ್ಪತ್ತು, ಐವತ್ತು ಮತ್ತು ಇನ್ನೂರು ರೂಪಾಯಿಗಳ ನಕಲಿ ನೋಟನ್ನು ಗುರುತಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಕಿರು ಪುಸ್ತಕದ ಮೂಲಕ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: ರಾಜ್ಯದ ಒಂದು ಸೇರಿದಂತೆ ದೇಶಾದ್ಯಂತದ 24 ವಿವಿಗಳು ನಕಲಿ! : ಯುಜಿಸಿ
50 ರ ನೋಟು ಅಸಲಿಯೇ ಎಂದು ಗುರುತಿಸುವುದು ಹೇಗೆ? :
- 50 ಅನ್ನು ದೇವನಾಗರಿಯಲ್ಲಿ ಬರೆಯಲಾಗಿರುತ್ತದೆ
- ಮಧ್ಯದಲ್ಲಿ ಮಹಾತ್ಮ ಗಾಂಧಿ ಫೋಟೋ ಇದೆ
- ನಾನ್ ಮೆಟಲಿಕ್ ಸೇಫ್ಟಿ ಥ್ರೆಡ್ ಇರುತ್ತದೆ
- ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿದೆ
- ಎಲೆಕ್ಟೊಯಿಪ್ 50 ವಾಟರ್ ಮಾರ್ಕ್ ಹೊಂದಿರುತ್ತದೆ
- ನಂಬರ್ ಪ್ಯಾನಲ್ ಅನ್ನು ಮೇಲೆ ಎಡಭಾಗದಲ್ಲಿ ಮತ್ತು ಕೆಳಗೆ ಬಲಭಾಗದಲ್ಲಿ ಸಣ್ಣದರಿಂದ ದೊಡ್ಡ ಗಾತ್ರದಲ್ಲಿ ಬರೆಯಲಾಗಿದೆ.
- 50 ರೂಪಾಯಿ ನೋಟನ್ನು ಯಾವ ವರ್ಷ ಮುದ್ರಿಸಲಾಗಿದೆ ಎಂಬುದನ್ನು ನಮೂದಿಸಲಾಗಿರುತ್ತದೆ
- ಸ್ವಚ್ಛ ಭಾರತ್ ನ ಲೋಗೋ ಮತ್ತು ಸ್ಲೋಗನ್ 50 ರೂಪಾಯಿ ನೋಟಿನಲ್ಲಿ ಇರುತ್ತದೆ.
- ನಂಬರ್ ಪ್ಯಾನಲ್ ಮತ್ತು ಅದರ ಸೈಜ್ 66 * 135 ಮಿ.ಮೀ ಆಗಿರುತ್ತದೆ
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
200 ರೂಪಾಯಿ ನೋಟಿನಲ್ಲೂ ಇಂಥಹ ಕೆಲ ವಿಚಾರಗಳಿರುತ್ತವೆ.
- ದೇವನಾಗರಿಯಲ್ಲಿ 200 ಎಂದು ಬರೆಯಲಾಗಿರುತ್ತದೆ
- ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸಣ್ಣ ಅಕ್ಷರಗಳಲ್ಲಿ 200 ಎಂದು ಬರೆಯಲಾಗಿರುತ್ತದೆ
- ಬಣ್ಣ ಬದಲಾವಣೆ ಸೇರಿದಂತೆ ನಾನ್ ಮೆಟಲಿಕ್ ಸೇಫ್ಟಿ ಥ್ರೆಡ್ ಇರುತ್ತದೆ
- ನೋಟನ್ನು ತಿರುಗಿಸಿ ನೋಡಿದಾಗ ಸೇಫ್ಟಿ ಥ್ರೆಡ್ನ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ
- ಗವರ್ನರ್ ಸಹಿ ಇರುತ್ತದೆ
- ರಿಸರ್ವ್ ಬ್ಯಾಂಕಿನ ಚಿಹ್ನೆ, ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರೋಟೈಪ್ 200 ವಾಟರ್ಮಾರ್ಕ್ ಅನ್ನು ಹೊಂದಿರತ್ತದೆ
- ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿದೆ
ಬ್ಯಾಂಕಿಂಗ್ (Bank) ಸೇವೆಗಳಿಗೆ ಸಂಬಂಧಪಟ್ಟಂತೆ ದೂರುಗಳಿದ್ದರೆ, ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಯಾವುದೇ ಸಂಸ್ಥೆಯ ವಿರುದ್ಧ, ಲೋಕಪಾಲ್ ಎದುರು ಆನ್ ಲೈನ್ ನಲ್ಲಿ ತಮ್ಮ ದೂರನ್ನು ದಾಖಲಿಸಬಹುದು. ಇದಕ್ಕಾಗಿ https://cms.rbi.org.in ನಲ್ಲಿ ರಿಜಿಸ್ಟ್ರೇಷನ್ ಮಾಬೇಕಾಗುತ್ತದೆ. ಯಾವುದೇ ಬ್ಯಾಂಕಿನ ಸೇವೆ ತೃಪ್ತಿ ನೀಡುವ ಮಟ್ಟದಲ್ಲಿ ಇರದಿದ್ದಲ್ಲಿ ಸಾರ್ವಜನಿಕರು ದೂರು ನೀಡಬಹುದಾಗಿದೆ.