ರಾಮ ಮಂದಿರದ ನಿರ್ಮಾಣಕ್ಕೆ ಇದುವರೆಗೆ ₹1,511 ಕೋಟಿ ದೇಣಿಗೆ ಸಂಗ್ರಹ: ಟ್ರಸ್ಟ್

0
193
Tap to know MORE!

ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗಲಿದ್ದು, ಅದಕ್ಕಾಗಿ ಸಾಮೂಹಿಕ ನಿಧಿ ಸಮರ್ಪಣೆಗೆ ಅವಕಾಶಗಳನ್ನು ಮಾಡಿಕೊಟ್ಟಿತ್ತು. ನಿಧಿ ಸಮರ್ಪಣೆ ಮತ್ತು ಈ ಬಗ್ಗೆ ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿತ್ತು. ಇದೀಗ ಸಂಗ್ರಹವಾದ ದೇಣಿಗೆಯ ಕುರಿತು ಸ್ವಾಮಿ ಗೋವಿಂದ್​ ದೇವ್​ಗಿರಿಯವರು ಮಾಹಿತಿ ನೀಡಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಇದುವರೆಗೆ 1511 ಕೋಟಿ ರೂ. ಠೇವಣಿ ಇಡಲಾಗಿದೆ ಎಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ್ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾದ ಟ್ರಸ್ಟ್​ನ ಖಜಾಂಜಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ರಾಮ ಮಂದಿರದ ಬದಲಿಗೆ ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕಿದ್ದಾರೆ : ಓವೈಸಿ

ಅಯೋಧ್ಯೆಯಲ್ಲಿ ರಾಮ್ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತದ 4 ಲಕ್ಷ ಹಳ್ಳಿಗಳು ಮತ್ತು 11 ಕೋಟಿ ಕುಟುಂಬಗಳು ದೇಣಿಗೆ ನೀಡಿದೆ. ದೇಣಿಗೆ ಸಂಗ್ರಹವನ್ನು ಜನವರಿ 15 ರಂದು ಪ್ರಾರಂಭ ಮಾಡಿದ್ದು ಇದು ಫೆಬ್ರವರಿ 27 ರವರೆಗೆ ನಡೆಯಲಿದೆ. 492 ವರ್ಷಗಳ ನಂತರ ಜನರು ರಾಮ ಮಂದಿರದ ಸೇವೆ ಸಲ್ಲಿಸುವ ಹಾಗೂ ಒಂದು ಧರ್ಮಕ್ಕೆ ಕೊಡುಗೆ ನೀಡುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಶ್ರೀ ರಾಮನು ಮಾನವೀಯ ಗುಣಗಳ ಅಭಿವ್ಯಕ್ತಿ – ರಾಹುಲ್ ಗಾಂಧಿ

ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ನಿರ್ಮಿಸುವುದಾಗಿ ಘೋಷಿಸಿದ್ದರು ಹಾಗೂ ಆಗಸ್ಟ್ 5, 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ನಡೆಸಿದರು.

ಶ್ರೀ ರಾಮ ಎಲ್ಲರಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ – ಪ್ರಿಯಾಂಕಾ ಗಾಂಧಿ

ಶ್ರೀ ರಾಮನ ಆಶೀರ್ವಾದದಿಂದ ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗುತ್ತದೆ : ಕೇಜ್ರಿವಾಲ್

LEAVE A REPLY

Please enter your comment!
Please enter your name here