ಶ್ರೀಲಂಕಾ : ಬುರ್ಖಾ ನಿಷೇಧ ಹಾಗೂ 1000ಕ್ಕೂ ಅಧಿಕ ಮದರಸಾಗಳನ್ನು ಮುಚ್ಚುವ ಪ್ರಸ್ತಾವಕ್ಕೆ ಸಹಿ!

0
5454
Tap to know MORE!

ಕೊಲಂಬೊ: ರಾಷ್ಟ್ರೀಯ ಭದ್ರತೆ ಕಾರಣ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲು ಹಾಗೂ 1,000ಕ್ಕೂ ಅಧಿಕ ಮದರಸಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಪ್ರಕಟಿಸಿದೆ.

‘ಈ ವಿಷಯಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಸಹಿ ಹಾಕಿದ್ದು, ಅದನ್ನು ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು’ ಎಂದು ಸಾರ್ವಜನಿಕ ಭದ್ರತಾ ಸಚಿವ ಶರತ್‌ ವೀರಶೇಖರ ಹೇಳಿದ್ದಾರೆ.

ಇದನ್ನೂ ಓದಿ: ಗೋಹತ್ಯೆಗೆ ನಿಷೇಧ ಹೇರಿದ ಶ್ರೀಲಂಕಾ ಸರ್ಕಾರ!

2019ರಲ್ಲಿ ಈಸ್ಟರ್ ದಿನ ಚರ್ಚ್‌ ಹಾಗೂ ಹೋಟೆಲ್‌ಗಳ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ 260ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಈ ಘಟನೆ ನಂತರ ಬುರ್ಖಾ ಧರಿಸುವುದನ್ನು ಶ್ರೀಲಂಕಾ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿತ್ತು.

ಬೌದ್ಧ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಬುರ್ಖಾ ಧಾರಣೆ ರಾಷ್ಟ್ರದ ಭದ್ರತೆ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂದು ಸಚಿವ ವೀರಶೇಖರ ಹೇಳಿರುವ ವಿಡಿಯೊವೊಂದನ್ನು ಸಾರ್ವಜನಿಕ ಭದ್ರತಾ ಸಚಿವಾಲಯ ಹಂಚಿಕೊಂಡಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ನಾನು ಚಿಕ್ಕವನಿದ್ದಾಗ ಸಾಕಷ್ಟು ಜನ ಮುಸ್ಲಿಂ ಗೆಳೆಯರಿದ್ದರು. ಆಗ, ಮುಸ್ಲಿಂ ಮಹಿಳೆಯರಾಗಲಿ, ಬಾಲಕಿಯರಾಗಲಿ ಬುರ್ಖಾ ಧರಿಸುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅದು ಧಾರ್ಮಿಕ ಉಗ್ರವಾದದ ಸಂಕೇತವಾಗಿದೆ. ಹೀಗಾಗಿ, ಬುರ್ಖಾ ಧರಿಸುವುದನ್ನು ನಿಶ್ಚಿತವಾಗಿಯೂ ನಿಷೇಧಿಸುತ್ತೇವೆ’ ಎಂದೂ ವೀರಶೇಖರ ಹೇಳಿದ್ದಾರೆ.

‘ದೇಶದಲ್ಲಿ ಸಾವಿರಕ್ಕೂ ಅಧಿಕ ಮದರಸಾಗಳು ಇವೆ. ಇವು ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಕಾರ್ಯ ನಿರ್ವಹಿಸುತ್ತಿಲ್ಲ. ಸಂಬಂಧಪಟ್ಟ ಪ್ರಾಧಿಕಾರದಲ್ಲಿ ಇವುಗಳು ನೋಂದಣಿಯನ್ನೂ ಮಾಡಿಲ್ಲ. ಹೀಗಾಗಿ ಈ ಮದರಸಾಗಳನ್ನು ಸಹ ಬಂದ್‌ ಮಾಡಲಾಗುವುದು’ ಎಂದರು ಹೇಳಿದ್ದಾರೆ.

LEAVE A REPLY

Please enter your comment!
Please enter your name here