ಪಕ್ಷಿಕೆರೆ: ವಿನಾಯಕ ಮಿತ್ರ ಮಂಡಳಿ ನೇತೃತ್ವದಲ್ಲಿ “ಸಾಧಕ ಸನ್ಮಾನ, ಪ್ರತಿಭಾ ಪ್ರದರ್ಶನ” ಕಾರ್ಯಕ್ರಮ

0
324
Tap to know MORE!

ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ ಸಾಧಕ ಸನ್ಮಾನ, ದತ್ತಿನಿಧಿ ಉದ್ಘಾಟನೆ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಪಕ್ಷಿಕೆರೆರ ಗಣೇಶ ಕಲಾ ಮಂಟಪದಲ್ಲಿ ನಡೆಯಿತು .

ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಲೀಲಾ ಕೃಷ್ಣಪ್ಪ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆಯಾದ ಶ್ರೀಮತಿ ಕಸ್ತೂರಿ ಪಂಜ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು, ದತ್ತಿ ನಿಧಿ ಉದ್ಘಾಟನೆಯನ್ನು ಶ್ರೀ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸೀತಾರಾಮ ಶೆಟ್ಟಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಧಾರ್ಮಿಕ ಕ್ಷೇತ್ರದಲ್ಲಿ-ಶ್ರೀ ವಾಸುದೇವ ಭಟ್ ಪಂಜ, ಕಲಾಕ್ಷೇತ್ರದಲ್ಲಿ-ಶ್ರೀ ಸೀತಾರಾಮ್ ಕುಮಾರ್ ಕಟೀಲ್, ದೇಶಸೇವೆ ಕ್ಷೇತ್ರದಲ್ಲಿ- ಶ್ರೀ ಪ್ರವೀಣ್, ಪರಿಸರ ಕ್ಷೇತ್ರದಲ್ಲಿ- ಶ್ರೀ ನಿತಿನ್, ಸಮಾಜಸೇವೆ ಕ್ಷೇತ್ರದಲ್ಲಿ-ಶ್ರೀ ಜನಾರ್ಧನ್, ಶಿಕ್ಷಣ ಕ್ಷೇತ್ರದಲ್ಲಿ -ಶ್ರೀಮತಿ ಪುಷ್ಪ ಹಾಗೂ ಶ್ರೀಮತಿ ಜಾಸ್ಮಿನ್ ಬಾರ್ನೆಸ್, ಬಹುಮುಖ ಪ್ರತಿಭೆ ಕ್ಷೇತ್ರದಲ್ಲಿ ಕುಮಾರಿ ದೃತಿ ಕುಲಾಲ್ ಹಾಗೂ ಕುಮಾರಿ ಅಕ್ಷ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳೂರು, ಜಿಲ್ಲಾ ಧಾರ್ಮಿಕ ದತ್ತಿ ಪರಿಷತ್ ಸದಸ್ಯರಾದ ಶ್ರೀ ಕೆ ಭುವನಾಭಿರಾಮ ಉಡುಪ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶುಭಲತಾ ಶೆಟ್ಟಿ, ಶ್ರೀಮತಿ ವಜ್ರಾಕ್ಷಿ ಪಿ ಶೆಟ್ಟಿ, ಶ್ರೀ ಜೀವನ್ ಪ್ರಕಾಶ್, ಶ್ರೀ ದಿವಾಕರ್ ಕರ್ಕೇರ, ಶ್ರೀ ಶರತ್ ಕುಬೆವೂರು, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಮಂಜುಳಾ ಎಸ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅರುಣ್ ಪ್ರದೀಪ್ ಡಿಸೋಜ, ಜಿಲ್ಲಾ ಸಮನ್ವಯಾಧಿಕಾರಿಯಾದ ಶ್ರೀ ರಘುವೀರ್ ಸೂಟರ್ ಪೇಟೆ, ಮಂಗಳೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಶ್ರೀ ಗಿರೀಶ್ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ಯಜ್ಞೆಶ್ ಪಿ ಶೆಟ್ಟಿಗಾರ್, ಕಾರ್ಯದರ್ಶಿ ಶ್ರೀ ಧನು ಅಂಚನ್ ಹಾಗೂ ಮಂಡಳಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಧನಂಜಯ್ ಪಿ ಶೆಟ್ಟಿಗಾರ್ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು, ಶ್ರೀ ಸುಮಂತ್ ಧನ್ಯವಾದ ಸಮರ್ಪಿಸಿದರು, ಶ್ರೀ ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ, ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ ಹಾಗೂ ಮುಖವಾಡ ಮತ್ತು ನೃತ್ಯ ಮಾಂತ್ರಿಕ ಅಂತರರಾಷ್ಟ್ರೀಯ ಖ್ಯಾತಿಯ ಶ್ರೀ ಅಶೋಕ ಪೊಳಲಿ ಇವರಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here