ಹಳೆಯಂಗಡಿ: ವಿದ್ಯಾವಿನಾಯಕ ಯುವಕ ಮಂಡಲದಲ್ಲಿ “ಭಜನೋತ್ಸವ – 2021”

0
487
Tap to know MORE!

ಹಳೆಯಂಗಡಿ: ಮೂರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಸ್ತುತ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ “ಭಜನೋತ್ಸವ – 2021 ಮುಕ್ತ ಭಜನಾ ಸ್ಪರ್ದೆಯು” ಭಾನುವಾರ ಯುವಕ ಮಂಡಲದ “ಬೊಳ್ಳೂರು ವಾರಿಜಾ ವಾಸುದೇವ ಕಲಾ ವೇದಿಕೆಯಲ್ಲಿ” ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಯಾಜಿ ನಿರಂಜನ್ ಭಟ್, ಭಜನೆ ಎಂಬುವುದು ಕೇವಲ ಒಂದು ಸ್ಪರ್ಧಾ ಮನೋಭಾವದಲ್ಲಿ ನಡೆಯದೇ, ಭಕ್ತಿ ಭಾವದಲ್ಲೇ ದೇವರ ಸಂಕೀರ್ತನೆಯನ್ನು ಮಾಡಬೇಕು. ಇದು ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪ್ರತಿನಿತ್ಯ ಭಜನೆ ಮಾಡುವಂತಾಗಬೇಕು. ದಾಸ ಸಂಕೀರ್ತನೆಗಳು ಜೀವನದ ಸಂಕಷ್ಟ ಕಾಲದಲ್ಲಿ ಧೈರ್ಯ ಹಾಗೂ ಸುಖದ ಕಾಲದಲ್ಲಿ ಬದುಕು ಕಟ್ಟಿ ಕೊಳ್ಳಲು ದಾರಿದೀಪ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸದಸ್ಯರಾದ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಮಾತನಾಡಿ, ಇಂದು ಭಜನೆ-ಸಂಕೀರ್ತನೆಯೆಂಬುದು ಕೇವಲ ದೇವಸ್ಥಾನಗಳಿಗೆ ಸೀಮಿತವಾಗಿದೆ. ಆದರೆ ಇದು ಪ್ರತಿಯೊಂದು ಮನೆಯಲ್ಲಿ ಆಗಬೇಕು. ಯುವಕ ಮಂಡಲದಂತಹ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಸಮಾಜಕ್ಕೆ ಮಾದರಿಯಾಗುತ್ತದೆ ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಶ್ರೀ ಗಿರೀಶ್ ಶೆಟ್ಟಿ ಶಿಬರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಹೊಟೇಲ್ ರಾಧಾ ಇದರ ಮಾಲಕರಾದ ಶ್ರೀ ಬಿ. ವಿಶ್ವನಾಥ್, ಪೂಜಾ ಎರೇಂಜರ್ ಹಳೆಯಂಗಡಿ ಇದರ ಮಾಲಕರು ಆಗಿರುವ ಶ್ರೀ ಜಯಕೃಷ್ಣ ಬಿ. ಕೋಟ್ಯಾನ್, ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರು ಆಗಿರುವ ಶ್ರೀ ಪ್ರಕಾಶ್ ಎನ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ಬಿ. ಸೂರ್ಯಕುಮಾರ್, ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ್ ಆರ್ ಅಮೀನ್, ಯುವಕ ಮಂಡಲದ ಅಧ್ಯಕ್ಷರಾದ ಶ್ರೀಯತೀಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್, ಯುವತಿ ಮಂಡಲದ ಅಧ್ಯಕ್ಷೆ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಮುಕ್ತ ಭಜನಾ ಸ್ಪರ್ಧೆಯಲ್ಲಿ ಒಟ್ಟು ಆಯ್ದ 11 ತಂಡಗಳು ಭಾಗವಹಿಸಿದ್ದವು. ಯುವಕ ಮಂಡಲದ ಸದಸ್ಯರಾದ ಶ್ರೀ ಕಿರಣ್ ರಾಜ್ ಪ್ರಾರ್ಥನೆ ಸಲ್ಲಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ್ ಆರ್ ಅಮೀನ್ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here