ಪಂಜದಗುತ್ತು ಶಾಂತಾರಾಮ ಶೆಟ್ಟಿ ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0
376
Tap to know MORE!

ಹಳೆಯಂಗಡಿ: ನಿಸ್ವಾರ್ಥ ಹಿರಿಯ ಸಮಾಜ ಸೇವಕರು, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದ ಹರಿಕಾರರು, ಉದ್ಯಮಿಗಳು ಹಾಗೂ ದಾನಿಗಳು ಆಗಿದ್ದ ಪಂಜದಗುತ್ತು ಶಾಂತಾರಾಮ ಶೆಟ್ಟಿಯವರು ದೈವಾಧೀನರಾಗಿದ್ದು, ಅಗಲಿದ ಶ್ರೀಯುತರಿಗೆ ಭಾನುವಾರ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲ ಹಾಗೂ ಹಳೆಯಂಗಡಿ ನಾಗರಿಕರ ಪರವಾಗಿ ಯುವಕ ಮಂಡಲದ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಮೂಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರಸರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರ್ಮಿಕ ವಿದ್ವಾಂಸರು ಆಗಿರುವ ಶ್ರೀ ಪಂಜ ಭಾಸ್ಕರ ಭಟ್ ಇವರು ಅಗಲಿದ ಶ್ರೀ ಪಂಜದಗುತ್ತು ಶಾಂತಾರಾಮ ಶೆಟ್ಟಿ ಇವರ ಬಗ್ಗೆ ವಿಶೇಷ ನುಡಿ ನಮನ ಸಲ್ಲಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್, ಯುವ ನಾಯಕರಾದ ಶ್ರೀ ಮಿಥುನ್ ರೈ, ಪಾವಂಜೆ ದೇವಾಡಿಗ ಸಂಘದ ಶ್ರೀ ಜನಾರ್ಧನ ಪಡುಪಣಂಬೂರು, ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಸಂತ ಬೇನಾರ್ಡ್ ಶ್ರೀಯುತರ ಬಗ್ಗೆ ಮಾತನಾಡಿದರು.

ಪಂಜದಗುತ್ತು ಶ್ರೀ ಶರತ್ ಶೆಟ್ಟಿ, ಶ್ರೀ ಭರತ್ ಶೆಟ್ಟಿ, ಶ್ರೀಮತಿ ಸರಿತಾ ಶೆಟ್ಟಿ, ಶ್ರೀಮತಿ ಸಮತಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್ ಕಾಮೇರೊಟ್ಟು, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಉತ್ತೃಂಜೆ ಭುಜಂಗ ಶೆಟ್ಟಿ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೀತಾರಾಮ ಶೆಟ್ಟಿ, ಸುರೇಶ್ ಶೆಟ್ಟಿ ಕಾಪು, ಶ್ರೀ ಶಶಿಂದ್ರ ಸಾಲ್ಯಾನ್ ಪ್ರಕಾಶ್ ಶೆಟ್ಟಿ ಕಿನ್ನಿಗೋಳಿ,ಮೂಲ್ಕಿ ಅರಮನೆಯ ಗೌತಮ್ ಜೈನ್, ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ಬಿ ಸೂರ್ಯಕುಮಾರ್, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಟ್ರಸ್ಟಿಗಳಾದ ಶ್ರೀ ಗಣೇಶ್ ಯು, ಶ್ರೀ ಸುಂದರ ಕೆ.ಎಸ್, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಶೀ ಯೋಗೀಶ್ ಕೋಟ್ಯಾನ್, ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಕೊಳುವೈಲೂ, ಶ್ರೀ ಅಬ್ದುಲ್ ಖಾದರ್, ಶ್ರೀ ಸತೀಶ್ ಕೋಟ್ಯಾನ್, ಶ್ರೀ ಅಬ್ದುಲ್ ಅಜೀಜ್ ಹಾಗೂ ಅಗಲಿದ ಪಂಜದಗುತ್ತು ಶಾಂತಾರಾಮ ಶೆಟ್ಟಿ ಇವರ ಅನೇಕ ಅಭಿಮಾನಿಗಳು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.

ಯುವಕ ಮಂಡಲದ ಸಲಹಾ ಸಮಿತಿಯ ಸದಸ್ಯರು ಹಾಗೂ ಪಿ.ಸಿ. ಏ ಬ್ಯಾಂಕ್ ಹಳೆಯಂಗಡಿ ಇದರ ನಿರ್ದೇಶಕರಾದ ಶ್ರೀ ಯೋಗೀಶ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here