ಯಾವುದೇ ಕೆಲಸ, ಉದ್ದೇಶ ಇರದಿದ್ದರೆ ಮನೆಯಿಂದ ಹೊರಬರಬೇಡಿ: ಪ್ರಧಾನಿ ಮೋದಿ ಮನವಿ

0
312
Tap to know MORE!

ನವದೆಹಲಿ: “ಯಾವುದೇ ಕೆಲಸ ಇರದಿದ್ದರೆ, ಯಾವ ಉದ್ದೇಶವಿಲ್ಲದೆ ಮನೆಯಿಂದ ಹೊರಬರಬೇಡಿ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಬಹುದು” ಎಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನರಲ್ಲಿ ಧೈರ್ಯ ತುಂಬಿದರು.

“ದೇಶವು ಮತ್ತೆ ಕರೋನಾ ವಿರುದ್ಧ ಬಹಳ ದೊಡ್ಡ ಹೋರಾಟವನ್ನು ನಡೆಸುತ್ತಿದೆ. ಕೆಲವು ವಾರಗಳ ಹಿಂದೆ, ಪರಿಸ್ಥಿತಿಗಳು ಸ್ಥಿರವಾಗಿದ್ದವು. ಆದರೆ ಈಗ ದೇಶದಲ್ಲಿ ಕೊರೋನಾದ ಎರಡನೇ ಅಲೆ ಎದ್ದಿದೆ. ನೀವು ಅನುಭವಿಸುತ್ತಿರುವ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಕೋವಿಡ್‌ನಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದೇನೆ. ನಮ್ಮ ಮುಂದಿನ ಸವಾಲು ದೊಡ್ಡದಾಗಿದೆ. ಆದರೆ ನಮ್ಮ ಸಂಕಲ್ಪ, ಧೈರ್ಯ ಮತ್ತು ಸಿದ್ಧತೆಯಿಂದ ನಾವು ಅದನ್ನು ಜಯಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ದೇಶದ ಅನೇಕ ಭಾಗಗಳಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಖಾಸಗಿ ವಲಯವು ಅಗತ್ಯವಿರುವ ಎಲ್ಲರಿಗೂ ಆಮ್ಲಜನಕವನ್ನು ಪೂರೈಸಲು ಪ್ರಯತ್ನಿಸುತ್ತಿದೆ. ಈ ದಿಕ್ಕಿನಲ್ಲಿ ಈಗಾಗಲೇ, ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದೇ ರೀತಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನೂ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಕೆಲವು ನಗರಗಳಲ್ಲಿ, ಕೋವಿಡ್-19 ಸೋಂಕಿತರಿಗಾಗಿಯೇ ಮೀಸಲಿಡುವ ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ” ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಭಾರತದಲ್ಲಿ ಎರಡು ಬೃಹತ್ ಲಸಿಕೆ ತಯಾರಕರು, ಅತಿ ದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದುವರೆಗೆ, 12 ಕೋಟಿಗೂ ಅಧಿಕ ಲಸಿಕೆಯನ್ನು ವಿತರಿಸಲಾಗಿದೆ. ಮೇ 1 ರಿಂದ, 18 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನವರು ಲಸಿಕೆ ಪಡೆಯಬಹುದು.

LEAVE A REPLY

Please enter your comment!
Please enter your name here