ಸೋಮವಾರ ಬೆಳಿಗ್ಗೆವರೆಗೆ ವೀಕೆಂಡ್ ಕರ್ಫ್ಯೂ | ಏನಿರುತ್ತೆ, ಏನಿರಲ್ಲ?

0
217
Tap to know MORE!

ಬೆಂಗಳೂರು: ಇಂದು ಅಂದರೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಆರಂಭಿಸಿ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ರಾಜ್ಯದಲ್ಲಿ 57 ಗಂಟೆಗಳ ಕಠಿಣ ಲಾಕ್‌ಡೌನ್‌ ಜಾರಿಯಲ್ಲಿರಲಿದೆ.

ಗುರುವಾರದಿಂದ ಜಾರಿಗೆ ಬಂದಿರುವ ಲಾಕ್‌ಡೌನ್‌ಗಿಂತ ಇದು ಕಠಿಣವಾದದ್ದು ಮತ್ತು ಸಾಮಾನ್ಯ ಲಾಕ್‌ಡೌನ್‌ನಲ್ಲಿ ಅನುಮತಿ ನೀಡಿರುವ ಕೆಲವು ಚಟುವಟಿಕೆಗಳಿಗೆ ವಾರಾಂತ್ಯದ ಲಾಕ್‌ಡೌನ್‌ನಲ್ಲಿ ಅವಕಾಶವಿಲ್ಲ. ಹಾಗಾಗಿ ಇಲ್ಲಿ ನೀಡಿರುವ ಅಂಶಗಳು ಸ್ಪಷ್ಟವಾಗಿ ಓದಿಕೊಳ್ಳಿ.

ಏನಿರುತ್ತೆ – ಏನಿರಲ್ಲ?

 • ಮನೆ ಸುತ್ತ ಮುತ್ತಲಿನ ದಿನಸಿ, ಹಣ್ಣು-ತರಕಾರಿ, ಹಾಲು-ಡೈರಿ ಉತ್ಪನ್ನಗಳ ಅಂಗಡಿಗಳು (ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ತರೆದಿರಲಿವೆ ನಂತರ ಇರುವುದಿಲ್ಲ)
 • ಅಗತ್ಯ ವಸ್ತುಗಳ ಹೋಂ ಡೆಲಿವರಿಗೆ ಅವಕಾಶವಿದೆ.
 • ರೆಸ್ಟೋರೆಂಟ್‌, ಉಪಹಾರ ಗೃಹಗಳಲ್ಲಿ ಪಾರ್ಸೆಲ್‌ ಸೇವೆಗೆ ಮಾತ್ರ ಅವಕಾಶ. ಅಲ್ಲೇ ಹೋಗಿ ಕುಳಿತೋ, ನಿಂತೋ ತಿನ್ನುವಂತಿಲ್ಲ.
 • ದೂರದ ಊರಿಗೆ ತೆರಳುವ ಬಸ್‌ಗಳು, ರೈಲು, ವಿಮಾನಗಳು ಮಾತ್ರ ಇರಲಿದೆ; ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣದಿಂದ ಜನರನ್ನು ಕರೆದುಕೊಂಡು ಬರಲು ಮತ್ತು ಕರೆದುಕೊಂಡು ಹೋಗಲು ಮಾತ್ರ ಟ್ಯಾಕ್ಸಿ, ಬಸ್‌, ಖಾಸಗಿ ವಾಹನಗಳಿಗೆ ಅವಕಾಶವಿದೆ. ಇದಕ್ಕೆ ಟಿಕೆಟ್‌/ದಾಖಲೆಗಳನ್ನು ನೀಡಬೇಕು.
 • ಸಿನಿಮಾ ಮಂದಿರ, ಶಾಪಿಂಗ್‌ ಮಾಲ್‌, ಜಿಮ್‌, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಮನೋರಂಜನಾ ಪಾರ್ಕ್‌, ಬಾರ್‌, ಆಡಿಟೋರಿಯಂ ಯಾವುದನ್ನೂ ತೆರೆಯುವಂತಿಲ್ಲ.
 • ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಸೇರಿ ಜನಸೇರುವ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ.
  (ದೈನಂದಿನ ಪೂಜೆ-ಪುನಸ್ಕಾರಗಳನ್ನು ನಡೆಸಲು ಅರ್ಚಕರಿಗೆ ಮಾತ್ರ ಅವಕಾಶ.)
 • ಸಾಮಾನ್ಯ ಲಾಕ್‌ಡೌನ್‌ನಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ನೀಡಲಾದ ಅನುಮತಿಯೂ ವಾರಾಂತ್ಯದಲ್ಲಿ ಇಲ್ಲ. ಈ ಅವಧಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಡೆಸುವಂತಿಲ್ಲ.
 • ತುರ್ತು, ಅಗತ್ಯ ಸೇವೆಗಳು ಹಾಗೂ ಕೊರೊನಾ ನಿಯಂತ್ರಣದಲ್ಲಿ ಪಾಲ್ಗೊಂಡಿರುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿ, ನಿಗಮಗಳ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. (ಇವುಗಳ ಸಿಬ್ಬಂದಿ ಮುಕ್ತವಾಗಿ ಓಡಾಡಬಹುದು)
 • ತುರ್ತು ಮತ್ತು ಅಗತ್ಯ ಸೇವೆಗಳ ಅಡಿಯಲ್ಲಿ ಬರುವ ಎಲ್ಲಾ ಕೈಗಾರಿಕೆ, ಕಂಪನಿ, ಸಂಸ್ಥೆಗಳಿಗೆ 24/7 ಕಾರ್ಯಚರಿಸಲು ಅವಕಾಶವಿದೆ. ಈ ಸಂಸ್ಥೆಗಳ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು.
 • ಇಂಟರ್‌ನೆಟ್‌, ಟೆಲಿಕಾಂ ಸೇವೆ ನೀಡುವ ಸಂಸ್ಥೆಗಳ ವಾಹನಗಳು, ನೌಕರರ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲ. ಇವರೂ ಐಡಿ ಕಾರ್ಡ್‌ ಇಟ್ಟುಕೊಳ್ಳುವುದು ಕಡ್ಡಾಯ.
 • ಮದುವೆ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನ ಭಾಗವಹಿಸಲು ಮಾತ್ರ ಅವಕಾಶವಿದೆ. ಕೋವಿಡ್‌ ನಿಯಮ ಪಾಲನೆ ಕಡ್ಡಾಯ.
 • ಐಟಿ ಕಂಪನಿಗಳ ಅಗತ್ಯ ಸಿಬ್ಬಂದಿಗಳು ಮಾತ್ರ ಕಚೇರಿಗೆ ತೆರಳಬೇಕು, ಉಳಿದವರು ವರ್ಕ್‌ ಫ್ರಂ ಹೋಂ ಮುಂದುವರಿಸಬೇಕು.
 • ರೋಗಿಗಳು, ಅವರ ಸಹಾಯಕರು, ಲಸಿಕೆ ತೆಗೆದುಕೊಳ್ಳಲು ಹೋಗುವವರ ಪ್ರಯಾಣಕ್ಕೆ ನಿರ್ಬಂಧವಿಲ್ಲ. ಇದಕ್ಕೂ ದಾಖಲೆಗಳನ್ನು ತೋರಿಸಬೇಕಾಗುತ್ತದೆ.
 • ಮೇಲೆ ಹೇಳಿದಂತೆ ರೆಸ್ಟೋರೆಂಟ್‌, ಉಪಹಾರ ಗೃಹಗಳು ತೆರೆದಿರಲಿವೆ. ಆದರೆ ಪಾರ್ಸೆಲ್‌ ಸೇವೆಗಳಿಗೆ ಮಾತ್ರ ಅವಕಾಶ.
 • ಮನೆಯ ಅಕ್ಕ ಪಕ್ಕದ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು (ದಿನಸಿ, ಹಾಲು, ಹಣ್ಣು, ತರಕಾರಿ) ತೆರೆದಿರಲಿವೆ. ಆದರೆ ಬೆಳಿಗ್ಗೆ 6 6 – 10 ಗಂಟೆವರೆಗೆ ಮಾತ್ರ.

LEAVE A REPLY

Please enter your comment!
Please enter your name here