BREAKING| ಮಂಗಳೂರು SEZ ವಲಯದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಆಕಸ್ಮಿಕ!

0
252
Tap to know MORE!

ಮಂಗಳೂರು, ಎ.24: ಇಂದು ಮದ್ಯಾಹ್ನ ಮಂಗಳೂರು ಹೊರವಲಯದ ಕೆಮಿಕಲ್ ಪ್ಯಾಕ್ಟರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತ ಮುತ್ತ ಅತಂಕ ಹಾಗೂ ಭಯದ ವಾತವರಣ ಸೃಷ್ಟಿಸಿದೆ.

ಬಜ್ಪೆ ಬಳಿಯ ಎಸ್ಇಝೆಡ್ ಏರಿಯಾದ ಸುಗಂಧ ದ್ರವ್ಯ ತಯಾರಿಕ ಫ್ಯಾಕ್ಟರಿಯಲ್ಲಿ ಇಂದು ಮದ್ಯಾಹ್ನ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಯಿಂದ ಸೃಷ್ಟಿಯಾಗಿರುವ ಹೊಗೆ ಬೃಹತ್ ಮೋಡದ ರೂಪದಲ್ಲಿ ಗೋಚರಿಸುತ್ತಿದ್ದು ಪರಿಸರದಲ್ಲಿ ಭೀತಿ ಸೃಷ್ಟಿಸಿದೆ.

ಮುಂಬೈ ಮೂಲದ ಕ್ಯಾಟಸಿಂಥ್ ಸ್ಪೆಷಾಲಿಟಿ ಕೆಮಿಕಲ್ಸ್ ಎನ್ನುವ ಹೆಸರಿನ ಪರ್ಫ್ಯೂಮ್ ಉತ್ಪಾದಕ ಫ್ಯಾಕ್ಟರಿ ಬೆಂಕಿ ಕಾಣಿಸಿಕೊಂಡ ಕಾರ್ಖಾನೆ. ಇಂದು ಮದ್ಯಾಹ್ನ ಬೆಂಕಿಯ ಜ್ವಾಲೆಗಳು ಕಾಣಿಸಿದ್ದು ಅದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಪ್ಪು ಹೊಗೆ ಏಳುತ್ತಿರುವುದನ್ನು ದೂರದಿಂದಲೇ ಸ್ಥಳೀಯ ನಿವಾಸಿಗಳು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿದೆ ಎನ್ನಲಾಗುತ್ತಿದ್ದು ಅಗ್ನಿಶಾಮಕ ಸಿಬಂದಿ ಬೆಂಕಿ ಶಮನದ ಕಾರ್ಯಾಚರಣೆ ಆರಂಭಿಸಿದ್ದಾರೆ. ವಾರಾಂತ್ಯದ ಲಾಕ್ಡೌನ್ ಆಗಿದ್ದರಿಂದ ಫ್ಯಾಕ್ಟರಿ ಬಂದ್ ಆಗಿತ್ತು. ಕಾರ್ಮಿಕರು ಕೂಡ ಹೆಚ್ಚಿರಲಿಲ್ಲ. ಕೆಲವು ಮಂದಿ ಮಾತ್ರ ಇದ್ದರು. ಸದ್ಯಕ್ಕೆ ಪ್ರಾಣಾಪಾಯದ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಇಝೆಡ್ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳಿಂದ ಪರ್ಫ್ಯೂಮ್ ಇನ್ನಿತರ ಉಪ ಉತ್ಪನ್ನಗಳ ತಯಾರಿಕೆ ನಡೆದಿತ್ತು. ಈ ಕಂಪನಿ ನಿರ್ಮಾಣಗೊಂದು ಮೂರು ವರ್ಷ ಆಗಿದ್ದು ಕಳೆದ ಒಂದು ವರ್ಷದಿಂದ ಉತ್ಪಾದನೆ ಕಾರ್ಯ ನಡೆಯುತ್ತಿತ್ತು. ಮುಂಬೈ ಮೂಲದ ಕಾರ್ಮಿಕರೇ ಹೆಚ್ಚಿದ್ದರು ಎನ್ನಲಾಗಿದೆ

ರಫ್ತು ಉದ್ದೇಶಿತ ಕಂಪನಿಯಾಗಿದ್ದು 10ರಿಂದ 15 ಎಕ್ರೆ ವ್ಯಾಪ್ತಿಯಲ್ಲಿ ಫ್ಯಾಕ್ಟರಿಯಿದೆ. ಇದರ ಸುತ್ತಮುತ್ತಾ ಏಳೆಂಟು ಇದೇ ಮಾದರಿಯ ಕೆಮಿಕಲ್ ಫ್ಯಾಕ್ಟರಿಗಳು ಇದ್ದು ಅಲ್ಲಿಗೂ ಹರಡಿಕೊಳ್ಳುವ ಸಾಧ್ಯತೆಯ ಬಗ್ಗೆ ಸ್ಥಳೀಯ ನಿವಾಸಿಗಳು ಅತಂಕ ವ್ಯಕ್ತಪಡಿಸುತಿದ್ದಾರೆ.

LEAVE A REPLY

Please enter your comment!
Please enter your name here