ಮಂಗಳೂರು: ಪುಸ್ತಕಗಳು ಕತ್ತಲೆಯಲ್ಲಿ ಮಾರ್ಗದರ್ಶನ ಮಾಡುವ ದೀಪಗಳು ಮತ್ತು ಒಂಟಿತನದಲ್ಲಿ ಜೊತೆ ನಿಲ್ಲುವ ಅದೃಶ್ಯ ಸ್ನೇಹಿತ ಎಂದು ಕಾರ್ಕಳದ ಡಾ.ಎನ್ಎಸ್ಎಎಂಎಫ್ಜಿಸಿ ನಿಟ್ಟೆಯ ಸಹಾಯಕ ಪ್ರಾಧ್ಯಾಪಕ ನಮಿರಾಜ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಇನ್ನೋವೇಶನ್ ಕ್ಲಬ್ ಮತ್ತು ಪರಿಸರ ಸಂಘದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಪುಸ್ತಕಗಳ ಬಗೆಗಿನ ಅನಿಸಿಕೆ ಮತ್ತು ವಿಮರ್ಶೆ ಹಂಚಿಕೊಳ್ಳುವ ಮೂಲಕ ಶುಕ್ರವಾರ ಆನ್ಲೈನ್ನಲ್ಲಿ ಆಚರಿಸಿದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಮುಖ್ಯ ಅತಿಥಿಯಾಗಿ ಇವರು ಮಾತನಾಡಿದರು.
ಇದನ್ನೂ ಓದಿ: ವಿವಿ ಕಾಲೇಜು ಮಂಗಳೂರು: ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಅನಸೂಯಾ ರೈ
ಪ್ರಾಂಶುಪಾಲೆ ಡಾ. ಅನಸೂಯ ರೈ, ಕೊವಿಡ್ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳು ಓದುವ ಅಭ್ಯಾಸ ಮುಂದುವರೆಸಬೇಕು ಮತ್ತು ಸುರಕ್ಷಿತವಾಗಿರಬೇಕು ಎಂದು ಹಾರೈಸಿದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಇನ್ನೋವೇಶನ್ ಕ್ಲಬ್ ಸಹನಿರ್ದೇಶಕ ಡಾ. ಸಿದ್ದರಾಜು, ಕೃತಿಸ್ವಾಮ್ಯದ ಸಮಸ್ಯೆಗಳು ಮತ್ತು “ದೆಹಲಿ ಯೂನಿವರ್ಸಿಟಿ ಫೋಟೊಕಾಪಿ ಕೇಸ್” ಸಹಿತ ವಿಶ್ವದ ಕೆಲವು ಆಸಕ್ತಿದಾಯಕ ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣಗಳನ್ನು ವಿವರಿಸಿದರು. ಇನ್ನೋವೇಶನ್ ಕ್ಲಬ್ ಕಾರ್ಯದರ್ಶಿ ವೇದಾಶಿನಿ, ವಿಲಿಯಂ ಷೇಕ್ಸ್ಪಿಯರ್, ಗಾರ್ಸಿಲಾಸೊ ಡೆ ಲಾ ವೆಗಾ ಮತ್ತು ಮಿಗುಯೆಲ್ ಡಿ ಸೆರ್ವಾಂಟೆಸ್ ಎಂಬ ಶ್ರೇಷ್ಠ ಬರಹಗಾರರ ನೆನಪಿಗಾಗಿ ಪುಸ್ತಕ ದಿನ ಆಚರಿಸಲಾಗುತ್ತದೆ ಎಂದರು. ಪರಿಸರ ಸಂಘದ ಸದಸ್ಯೆ ವೈಷ್ಣವಿ, ʼಮಾನಸಿಕ ಶಾಂತಿ ಮತ್ತು ತಾಳ್ಮೆ ಕಾಪಾಡುವಲ್ಲಿ ಪುಸ್ತಕಗಳ ಪಾತ್ರʼ ಎಂಬ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ವಿದ್ಯಾರ್ಥಿಗಳಿಗೆ ತಾವು ಓದಿದ ಮೊದಲ ಪುಸ್ತಕ ಅಥವಾ ಉತ್ತಮ ಪುಸ್ತಕದ ಬಗ್ಗೆ ತಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. ಮೆಲ್ರೀನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ತೇಜಸ್ವಿನಿ ಅತಿಥಿಗಳನ್ನು ಸ್ವಾಗತಿಸಿದರೆ, ಪಲ್ಲವಿ ಧನ್ಯವಾದ ಸಮರ್ಪಿಸಿದರು. ಗೌಸಿಯಾ ಮತ್ತು ವೇದಾಶಿನಿ ರ್ಯಕ್ರಮ ನಿರ್ವಹಿಸಿದರು.