ನಾಳೆಯಿಂದ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಜಾರಿ | ಏನಿರುತ್ತೆ, ಏನಿರಲ್ಲ?

0
348
Tap to know MORE!

ಬೆಂಗಳೂರು: ರಾಜ್ಯದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆ ರಾತ್ರಿಯಿಂದ 14 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಈ ಕುರಿತಂತೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಜ್ಞರ ವರದಿ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಸಚಿವ ಸೋಮಣ್ಣ, ಕೆ. ಗೋಪಾಲಯ್ಯ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಭಾಗವಹಿಸಿದ್ದರು.

ನಾಳೆ ರಾತ್ರಿ 9 ಗಂಟೆಯಿಂದಲೇ ಜನತಾ ಕರ್ಫ್ಯೂ ಜಾರಿಯಾಗಲಿದ್ದು, ಏನಿರುತ್ತೆ, ಏನಿರಲ್ಲ, ಕಂಪ್ಲೀಟ್ ವರದಿ ಇಲ್ಲಿದೆ:

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಏನಿರುತ್ತೆ?

 • ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
 • ಇಡೀ ದಿನ ತುರ್ತು ಸೇವೆಗೆ ಮಾತ್ರ ಅವಕಾಶ
 • ಕಟ್ಟಡ ನಿರ್ಮಾಣ, ಉತ್ಪಾದನಾ ವಲಯ, ಕೃಷಿ ಕ್ಷೇತ್ರಕ್ಕೆ ವಿನಾಯಿತಿ
 • ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಶಾಪ್ ಸೇರಿದಂತೆ ತುರ್ತು ಸೇವೆಗಳು ಲಭ್ಯ
 • ಹೊಟೇಲ್‌‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ
 • ಮದ್ಯದಂಗಡಿಗಳು ಬೆಳಗ್ಗೆ 6ರಿಂದ 10ರ ವರೆಗೆ ತೆರೆದಿರುತ್ತದೆ. ಆದರೆ ಪಾರ್ಸೆಲ್‌ಗೆ ಮಾತ್ರ ಅವಕಾಶ
 • ಪಡಿತರ, ಬ್ಯಾಂಕ್ ಸೇವೆ ಇರುತ್ತೆ
 • ಸರಕು ಸಾಗಾಣಿಕೆ ವಾಹನಗಳಿಗೆ ಯಾವುದೇ ತೊಂದರೆ ಇರೋಲ್ಲ
 • ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ

ಏನಿರಲ್ಲ?

 • ಬೆಳಿಗ್ಗೆ 10 ಗಂಟೆ ನಂತರ ಯಾವುದೇ ರೀತಿಯ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ
 • ಬೆಳಿಗ್ಗೆ 6 ರಿಂದ 10 ಗಂಟೆಯವರೆಗಿನ ನಾಲ್ಕು ಗಂಟೆಗಳ ಅವಧಿಯನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವಂತಿಲ್ಲ
 • ಗಾರ್ಮೆಂಟ್ಸ್, ಫ್ಯಾಕ್ಟರಿ ಬಂದ್!
 • ಸರ್ಕಾರಿ, ಖಾಸಗಿ, ಟ್ಯಾಕ್ಸಿ, ಕ್ಯಾಬ್, ಆಟೋ, ಮೆಟ್ರೋ ಸಂಚಾರ ಇರುವುದಿಲ್ಲ
 • ಕೋಚಿಂಗ್ ಸೆಂಟರ್, ಜಿಮ್, ಪಾರ್ಕ್, ಥಿಯೇಟರ್ ಬಂದ್
 • ಯಾವುದೇ ರೀತಿಯ ಚುನಾವಣೆ ಇರುವುದಿಲ್ಲ (ಚನಾವಣೆ ಮುಂದೂಡಿ ಆದೇಶ)
 • ಯಾವುದೇ ಪರೀಕ್ಷೆಗಳು ಇರುವುದಿಲ್ಲ( ಪರೀಕ್ಷೆ ಮುಂದೂಡಿ ಆದೇಶ)

ಇತರ ಉಲ್ಲೇಖಗಳು

 • 18ರಿಂದ 45 ವರ್ಷದೊಳಗಿನವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ಲಸಿಕೆ
 • 2 ವಾರದಲ್ಲಿ ಕೊರೋನಾ ಕಂಟ್ರೋಲ್​ಗೆ ಬರದಿದ್ದರೆ ಮತ್ತೆ ಲಾಕ್​ಡೌನ್​ ಮುಂದುವರೆಯುವ ಸುಳಿವು
 • ಕೇಂದ್ರದಿಂದ 800 ಟನ್ ಆಕ್ಸಿಜನ್ ಪೂರೈಕೆ ಆರಂಭ
 • 1 ಲಕ್ಷ ರೆಮಿಡಿಸಿವಿರ್ ಚುಚ್ಚುಮದ್ದು ರಾಜ್ಯಕ್ಕೆ ಬರಲಿದೆ

LEAVE A REPLY

Please enter your comment!
Please enter your name here