ವೇಳಾಪಟ್ಟಿಯಂತೆ ಐಪಿಎಲ್ 2021 ಮುಂದುವರೆಯಲಿದೆ: ಸೌರವ್ ಗಂಗೂಲಿ ಸ್ಪಷ್ಟನೆ

0
185
Tap to know MORE!

ನವದೆಹಲಿ: ದಿನೇದಿನೇ ಭಾರತದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ಏರುತ್ತಿದ್ದರೂ, ವೇಳಾಪಟ್ಟಿಯಂತೆ 2021ರ ಐಪಿಎಲ್ ಮುಂದುವರೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಐಪಿಎಲ್ 2021 ಅನ್ನು ಭಾರತದ ಆರು ನಗರಗಳಲ್ಲಿ ಜೈವಿಕ ಗುಳ್ಳೆಗಳಲ್ಲಿ (Bio Bubble) ನಡೆಸಲಾಗುತ್ತಿದೆ.

“ಇಲ್ಲಿಯವರೆಗೆ, ಇದು ನಿಗದಿಯಂತೆ ನಡೆದಿದೆ. ಮುಂದೆಯೂ ನಡೆಯಲಿದೆ” ಎಂದು ಗಂಗೂಲಿ ಸೋಮವಾರ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದರು. ಕೋವಿಡ್-19 ಭೀತಿ ಮತ್ತು ಬಯೋ-ಬಬಲ್ ಆಯಾಸದಿಂದಾಗಿ ಹಲವಾರು ಆಟಗಾರರು ಋತುವಿನ ಮಧ್ಯದಲ್ಲಿ ಪಂದ್ಯಾವಳಿಯಿಂದ ಹೊರಬರುತ್ತಿರುವುದರಿಂದ, ಬಿಸಿಸಿಐ ಅಧ್ಯಕ್ಷರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕೋವಿಡ್-19: ಭಾರತಕ್ಕೆ ₹135 ಕೋಟಿ ನೆರವು ನೀಡುವುದಾಗಿ ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ

ಕೋವಿಡ್-19 ಪರಿಸ್ಥಿತಿಯಲ್ಲಿ ತಮ್ಮ ಕುಟುಂಬದ ಜತೆ ನಿಲ್ಲಲು, ಐಪಿಎಲ್‌ನಿಂದ ನಿರ್ಗಮಿಸುವುದಾಗಿ ದೆಹಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಆರ್ ಅಶ್ವಿನ್ ಘೋಷಿಸಿದರೆ, ಆಸ್ಟ್ರೇಲಿಯಾದ ಮೂವರು ಆಟಗಾರರು ಸೋಮವಾರ ತಮ್ಮ ತವರಿಗೆ ವಾಪಾಸಾದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here