EXIT POLLS| ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಂಗಾಳದಲ್ಲಿ ಟಿಎಂಸಿಗೆ ಮತ್ತೆ ಅಧಿಕಾರ!

0
193
Tap to know MORE!

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ABP ಸಿ-ವೋಟರ್ ಸಮೀಕ್ಷೆ ಪ್ರಕಾರ ಮಮತಾ ಬ್ಯಾನರ್ಜಿ ಕೈಗೆ ಮತ್ತೆ ಪಶ್ಚಿಮ ಬಂಗಾಳದ ಅಧಿಕಾರ ಸಿಗಲಿದೆ ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 292 ಸ್ಥಾನಗಳಿದ್ದು ಅದರಲ್ಲಿ ಟಿಎಂಸಿ- 152-164, ಬಿಜೆಪಿ 109-121 ಗೆಲ್ಲಬಹುದು, ಕಾಂಗ್ರೆಸ್ 14-16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಬಿಪಿ ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಇದೇ ಮಾರ್ಚ್ 27 ರಿಂದ ಚುನಾವಣೆ ಆರಂಭವಾಗಿದ್ದು, ಏಪ್ರಿಲ್ 29ಕ್ಕೆ ಅಂತಿಮ ಅಂದರೆ ಎಂಟನೇ ಹಂತದ ಚುನಾವಣೆ ಮುಕ್ತಾಯಗೊಂಡಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here